ಚಿತ್ತಾಪುರದಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ! ಔಷಧ ತಜ್ಞರು ಆರೋಗ್ಯ ರಕ್ಷಕರಾಗಬೇಕು :ರವೀಂದ್ರ ಜೋಶಿ
ಚಿತ್ತಾಪುರದಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ!
ಔಷಧ ತಜ್ಞರು ಆರೋಗ್ಯ ರಕ್ಷಕರಾಗಬೇಕು :ರವೀಂದ್ರ ಜೋಶಿ
ಚಿತ್ತಾಪುರ: ಔಷಧ ತಜ್ಞರು ಔಷಧಿ ಪಡೆಯುವ ರೋಗಿಗಳಿಗೆ ಸರಿಯಾದ ಮಾಹಿತಿ ನೀಡಿ ಆರೋಗ್ಯ ರಕ್ಷಕರಾಗಬೇಕೆಂದು ಕಲ್ಬುರ್ಗಿ ಜಿಲ್ಲಾ ಮೆಡಿಕಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ರವೀಂದ್ರ ಜೋಶಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ ತಾಲೂಕು ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಡೆದ ವಿಶ್ವ ಔಷಧಿ ತಜ್ಞರ ದಿನಾಚರಣೆಯ ಮುಖ್ಯ ಉದ್ಘಾಟಕರಾಗಿ ಮಾತನಾಡಿದ ಅವರು ಔಷಧಿ ತಜ್ಞರು ಡಾಕ್ಟರಗಳು ಬರೆದ ಔಷಧಿ ಚಿಟ್ಟಿಯನ್ನು ಸರಿಯಾಗಿ ನೋಡಿ ಸರಿಯಾದ ಔಷಧಿಗಳನ್ನು ರೋಗಿಗಳಿಗೆ ನೀಡಬೇಕು.
ಔಷಧಿ ಪಡೆದ ರೋಗಿಗಳ ಮಾಹಿತಿ ರಿಜಿಸ್ಟರ್ ನಲ್ಲಿ ನಮೂದಿಸಬೇಕು. ಇದರಿಂದ ಮುಂದಾಗುವ ತೊಂದರೆಗಳನ್ನು ತಪ್ಪಿಸಬಹುದು ಹೇಳಿದರು.
ರೋಗಿಗಳ ಆರೋಗ್ಯ ಕಾಪಾಡುವುದರಲ್ಲಿ ಔಷಧಿ ತಜ್ಞರ ಕೆಲಸ ಪ್ರಮುಖವಾಗಿದೆ. ಕರೋನ ಸಮಯದಲ್ಲಿ ಔಷಧಿ ತಜ್ಞರು ರೋಗಿಗಳ ಪ್ರಾಣ ಉಳಿಸುವುದರಲ್ಲಿ ಪ್ರಮುಖರಾಗಿದ್ದಾರೆ.
ಔಷಧಿಯ ವ್ಯಾಪಾರದಲ್ಲಿ ಲಾಭ ಅಂಶವಿದೆ ಎಂದು ಜನರ ಅಭಿಪ್ರಾಯವಾಗಿದೆ. ಆದರೆ ಅಲ್ಲಿ ಲಾಭ ಕಡಿಮೆ ಇದೆ 20% ಲಾಭದಲ್ಲಿ ನಾವು ಅಂಗಡಿ ಬಾಡಿಗೆ, ಔಷಧಿ ತಜ್ಞರ ವೇತನ ಇನ್ನಿತರ ಖರ್ಚು ವೆಚ್ಚಗಳನ್ನು ಇದರಲ್ಲಿ ನಿರ್ವಹಿಸಬೇಕಾಗಿದೆ. ಸರ್ಕಾರ ಇವರನ್ನು ಗುರುತಿಸಿ ಮೀಸಲಾತಿ ನೀಡಿ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಪಟ್ಟಣದ ಖ್ಯಾತ ವೈದ್ಯರಾದ ಪ್ರಭುರಾಜ್ ಕಾಂತ, ಕಲ್ಬುರ್ಗಿ ಜಿಲ್ಲಾ ಮೆಡಿಕಲ್ ಅಸೋಸಿಯೇಷನ್ ಕೋಶಾಧ್ಯಕ್ಷ ಧನಂಜಯ್ ಪೂರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಿತ್ತಾಪುರ ತಾಲೂಕು ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಸೈಯದ್ ನಜಮೋದಿನ್ ಚಿಸ್ತಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಔಷಧಿ ತಜ್ಞರಾದ ವಿವೇಕ್ ಅಂಚ್ಚಟೆ ಅವರಿಗೆ ಹಾಗೂ ಪತ್ರಕರ್ತರರಿಗೂ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ವೈದ್ಯರಿಗೆ ಊಟ ವಿತರಣೆ ಮಾಡಲಾಯಿತು.
ಔಷಧಿ ತಜ್ಞರುಗಳಾದ ಶಿವಕುಮಾರ್ ಗುರಮೀಟಕಲ್, ಶಿವಕುಮಾರ ಸುನಾರ್, ಶ್ರೀಕಾಂತ್ ಪಾಟೀಲ್, ವಿಜಯಕುಮಾರ್ ಅಂಗಡಿ, ಸಂತೋಷ ಅಳ್ಳಳ್ಳಿ, ಕುನಲ್ ಜಿತುರೆ, ವಿರೂಪಾಕ್ಷ ಅಳ್ಳಳ್ಳಿ, ವಿಶ್ವರಾಧ್ಯ ಅಂಗಡಿ, ರಾಜು ಹುಳಗೋಳು, ಸೈಯದ್ ಅಲಿ, ಗೋಪಾಲ್ ಸಿಂಗ್, ಚಂದ್ರ ರೆಡ್ಡಿ, ಸೈಪಾಲ್ ಅಹ್ಮದ್, ಯಂಕರೆಡ್ಡಿ, ಚನಬಸಪ್ಪ, ಸ್ವಸ್ತಿಕ್, ಸಂತೋಷ್, ಸಂಜು ಹುಡೆಗಾರ್ ಸೇರಿದಂತೆ ಚಿತಾಪುರ ತಾಲೂಕಿನ ವಿವಿಧ ಮೆಡಿಕಲ್ ಅಂಗಡಿಯ ಔಷಧಿ ತಜ್ಞರು ಇದ್ದರು.