ಅಧಿವೇಶನದಲ್ಲಿ ಐನಾಪೂರ ಏತ ನೀರಾವರಿ ಯೋಜನೆಗಳ ಅನುದಾನ ಬಿಡುಗಡೆಯ ಮಾಹಿತಿ ನೀಡಿ : ಶಿವಾನಂದ ಪಾಟೀಲ

ಅಧಿವೇಶನದಲ್ಲಿ ಐನಾಪೂರ ಏತ ನೀರಾವರಿ ಯೋಜನೆಗಳ ಅನುದಾನ ಬಿಡುಗಡೆಯ ಮಾಹಿತಿ ನೀಡಿ : ಶಿವಾನಂದ ಪಾಟೀಲ
ಚಿಂಚೋಳಿ : ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಕಲಬುರಗಿ ನೀರಾವರಿ ಯೋಜನೆಯ ವಲಯದಲ್ಲಿ ಏತ ನೀರಾವರಿಗಾಗಿ ಅನುಮೋದನೆಗೊಂಡ ಯೋಜನೆಗಳ ಅನುದಾನವನ್ನು ಬಿಡುಗಡೆಗೊಂಡ ಸಮಗ್ರ ಮಾಹಿತಿ ನೀಡುವಂತೆ ಐನಾಪೂರ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ ಐನಾಪೂರ ಅವರು ತಹಸೀಲ್ದಾರರ ಮೂಲಕ ಕಲುಬುರಗಿ ನೀರಾವರಿ ಯೋಜನೆ ವಲಯ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಐನಾಪೂರ ಏತ ನೀರಾವರಿ ಯೋಜನೆ ಮತ್ತು ಸೇಡಂ ಮತಕ್ಷೇತ್ರದ ಯಡಳ್ಳಿ-ತರ್ನಳ್ಳಿ ಏತ ನೀರಾವರಿ ಯೋಜನೆಗಳ ಸರ್ಕಾರದಲ್ಲಿ ಸುದೀರ್ಘ ಚರ್ಚೆ ನಡೆಸಿ, ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಅನುಮೋದಿಸಿ ಅನುದಾನವನ್ನು ಘೋಷಿಸಿ ಮಿಸಲಿಟ್ಟು ಅನುಷ್ಠಾನಕ್ಕಾಗಿ ಆದೇಶ ಹೊರಡಿಸಲಾಗಿತ್ತು. ಆದೇಶದನ್ವಯ ಯೋಜನೆಗಳ ಅನುದಾನ ಬಿಡುಗಡೆಗೊಂಡಿರುವ ಕ್ರಿಯಾಯೋಜನೆಯ ಇಲಾಖೆಯಿಂದ ದೃಢಿಕರಿಸಿರುವ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರವೂ ಹಾಗೂ ಇಲಾಖೆಯೂ ಸಮಗ್ರ ಮಾಹಿತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದರೆ ರೈತಾಪಿ ವರ್ಗವೂ ಬೃಹತ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಆರ್ಥಿಕ ಸಚಿವಾಲಯ, ಮಧ್ಯಮ ಮತ್ತು ಬೃಹತ್ ನೀರಾವರಿ ಸಚಿವಾಲಯಕ್ಕೆ ಮತ್ತು ಕಲಬುರಗಿ ಹಾಗೂ ಬೀದರ ಉಸ್ತುವಾರಿ ಸಚಿವರುಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.