ಮುಂಗಾರು ಕಾವ್ಯ ಸಿಂಚನದಲ್ಲಿ ರಸವತ್ತಾದ ಕವಿಗೋಷ್ಠಿ. ಬಡತನ ,ಹಸಿವು ,ಶೋಷಣೆ ಕಾವ್ಯದ ವಸ್ತು:ಡಾ.ರಾಜಶೇಖರ ಮಾಂಗ್
ಚಿತ್ತಾಪುರ
ಒಬ್ಬ ಕವಿಯು ಕೇವಲ ಪೆನ್ನು ಕಾಗದ ಹಿಡಿದು ಕಾವ್ಯ ರಚನೆ ಮಾಡಲಿಕ್ಕೆ ಕಲ್ಪನಾ ಶಕ್ತಿಗಿಂತ ಬಡತನ , ಹಸಿವು, ಶೋಷಣೆ ಇವುಗಳ ಸ್ವಯಂ ಅನುಭವದಿಂದ ಕಾವ್ಯದ ವಸ್ತುಗಳಾಗುತ್ತವೆ ಎಂದು ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಡಾ: ರಾಜಶೇಖರ ಮಾಂಗ್ ಹೇಳಿದರು.
ಅವರು ಪಟ್ಟಣದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ನಾಗಾವಿ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ಹಮ್ಮಿಕೊಂಡಿದ್ದ ಮುಂಗಾರು ಕಾವ್ಯ ಸಿಂಚನ ೨೦೨೪ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಾ ನಾನು ಸೇರಿದಂತೆ ಎಲ್ಲರೂ ಇಂದು ಶಿಕ್ಷಣ ಪಡೆದು ಒಳ್ಳೆಯ ಸ್ಥಾನದಲ್ಲಿರುವುದಕ್ಕೆ ಡಾ ಬಾಬಾಸಾಹೇಬ್ ಅಂಬೇಡ್ಕರ ಅವರ ಸಂವಿಧಾನವೇ ಕಾರಣ ಎಂದರು.
ಕವಿ ವಿಶಾಲ ಮನೋಭಾವ ಉಳ್ಳವನು ಆಗಿ ತಾನು ರಚಿಸಿದ ಕಾವ್ಯ ಜವಾಬ್ದಾರಿ ಹೆಚ್ಚಿಸುತ್ತದೆ ಮತ್ತು ಹೂಣೆಗಾರಿಕೆಯನ್ನು ನೆನಪಿಸುವುದು , ಮೌಢ್ಯತೆ ನಿವಾರಣೆ ಬಗ್ಗೆ ಬರೆಯಬೇಕು ಎಂದು ತಮ್ಮ ಕವನ ಸಂಕಲನದ ಕವಿತೆ ನೊಂದವರ ನೋವುಗಳು ವಾಚನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲುಕು ಅಧ್ಯಕ್ಷ ಬಸವರಾಜ ಬಳೂ೦ಡಗಿ ಮಾತನಾಡಿ ನಾಗಾವಿ ಸಾಹಿತ್ಯ ಪ್ರತಿಷ್ಟಾನದ ಸಾಹಿತ್ಯ ಕಾರ್ಯಕ್ರಮಗಳಿಗೆ ಸಂಘ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಆಶಯ ನುಡಿಗಳನ್ನಾಡಿದ ಪ್ರತಿಸ್ಥಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮಾತನಾಡಿ ನಮ್ಮ ಪ್ರತಿಸ್ಥಾನದ ಮೂಲಕ ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚಿಸುವುದು, ಜನಪದ ಕಲಾವಿದರನ್ನು ಮುನ್ನಲೆಗೆ ತರುವುದು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಎಲ್ಲಾ ವಯೋಮಾನದವರಿಗೆ ಕಲೆ ಮತ್ತು ಕಲಾವಿದರ ಮಹತ್ತರ ಪಾತ್ರ ಸಮಾಜದಲ್ಲಿ ಎಷ್ಟು ಜರೂರು ಇದೆ ಎಂದು ಮನದಟ್ಟು ಮಾಡುವುದಾಗಿದೆ.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಹಾಯಕ ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್ ಮಾತನಾಡಿ ರೈತನ ಬದುಕಲ್ಲಿ ಮುಂಗಾರು ಮಳೆಯ ಸಿಂಚನ ಹೇಗೆ ಹರುಷದ ಹೊನಲು ತರುವುದು ಸಮೃದ್ಧ ಬೆಳೆಗೆ ಹೇಗೆ ಪೂರಕ ಎಂದು ಎಲ್ಲಾ ಕವಿಗಳು ತಮ್ಮ ಕವಿತೆಯ ಮೂಲಕ ಮನವರಿಕೆ ಮಾಡಿರುವಿರಿ ಎಂದು ಸಂತಸ ವ್ಯಕ್ತ ಪಡಿಸಿದರು.
ಶರಣಪ್ಪ ಹಾಶೆಟ್ಟಿ ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಮೇಶ ಬೆಟಗೇರಿ ಮುಖ್ಯ ಗುರುಗಳು ಮಹಾತ್ಮ ಗಾಂಧಿ ಪ್ರೌಢಶಾಲೆ ಇದ್ದರು.
ಕವಿಗೋಷ್ಠಿಯಲ್ಲಿ ಮೋನಯ್ಯ ಪಂಚಾಳ, ಸಿದ್ದಯ್ಯ ಶಾಸ್ತ್ರಿ, ಉಮೇಶಬಾಬು ಸಾಸನಾಳ,ಮಡಿವಾಳಪ್ಪ ಹೇರೂರ, ಚಂದ್ರಕಲಾ ಪಾಟೀಲ,ದಯಾನಂದ ಖಜೂರಿ, ವಿಶ್ವಾರಾಧ್ಯ ಕರದಾಳ, ವೀರಪ್ಪ ಕುಂಬಾರ, ಅಯ್ಯಣ್ಣ ಅವಂಟಿ, ಮಲ್ಲಿಕಾರ್ಜುನ ಮದನಕರ್,ರಂಗನಾಥ ದೊರೆ, ವೀರಭದ್ರಪ್ಪ ಗುರುಮಿಟಕಲ್, ಚಂದ್ರಶೇಖರ ಬಳ್ಳಾ ,ನರಸಪ್ಪ ಚಿನ್ನಾಕಟ್ಟಿ, ಲಲಿತಾ ರೇಷ್ಮಿ, ಗಂಗಣ್ಣ ಹೊಸೂರ,ಭಾಗವಹಿಸಿ ರೈತರ ಮಳೆ ಬೆಳೆ , ನೋವು ನಲಿವುಗಳ ಬಗ್ಗೆ ಕಾವ್ಯದಲ್ಲಿ ಅನಾವರಣಗೊಂಡವು.
ಎಲ್ಲರಿಗೂ ಪ್ರಮಾಣಪತ್ರ ಹಾಗೂ ಕಾವ್ಯ ತೊರೆ ಪುಸ್ತಕ ಕೊಟ್ಟು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಪ್ರಾರ್ಥನಾಗೀತೆ ರಕ್ಷಿತಾ ಮತ್ತು ಭಾಗ್ಯಶ್ರೀ ಮಾಡಿದರು. ಮಲ್ಲಿಕಾರ್ಜುನ ಮದನಕರ ಸರ್ವರನ್ನೂ ಸ್ವಾಗತಿಸಿದರು .
ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಸರಸ್ವತಿ ಬಮ್ಮನಳ್ಳಿ ವಂದಿಸಿದರು.