ಚಿಂತನಹಳ್ಳಿ ಶಾಲಾ ಮೇಲ್ಚಾವಣಿ ಕುಸಿತ ಮಕ್ಕಳು ಪ್ರಾಣಾಪಯದಿಂದ ಪಾರು : ಶರಣಬಸಪ್ಪ ಯಲ್ಹೇರಿ ಕರವೇ ಅಧ್ಯಕ್ಷರು

ಗುರುಮಠಕಲ್ ತಾಲೂಕ ವರದಿಗಾರರು: ಭೀಮರಾಯ ಯಲ್ಹೇರಿ
ಚಿಂತನಹಳ್ಳಿ ಶಾಲಾ ಮೇಲ್ಚಾವಣಿ ಕುಸಿತ ಮಕ್ಕಳು ಪ್ರಾಣಾಪಯದಿಂದ ಪಾರು : ಶರಣಬಸಪ್ಪ ಯಲ್ಹೇರಿ ಕರವೇ ಅಧ್ಯಕ್ಷರು
ಯಾದಗಿರ/ಗುರುಮಠಕಲ್ : ಚಿಂತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಮೇಲ್ಚಾವಣೆ ಸಿಮೆಂಟ್ ಕುಸಿದು,ತಪ್ಪಿದ ಭಾರೀ ಅನಾಹುತ ತಪ್ಪಿದೆ ಗುರುಮಠಕಲ್ ಮತಕ್ಷೇತ್ರದ ಚಿಂತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 2022-2023 ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ನಾಲ್ಕು ಕೊಠಡಿಗಳನ್ನು ನವೆಂಬರ್ 2 2023 ರಂದು ಗುರುಮಟಕಲ್ ಶಾಸಕರು ಶರಣಗೌಡ ಕಂದಕೂರ ಅವರು ಉದ್ಘಾಟನೆ ಮಾಡಿ ಮುಖ್ಯಗುರುಗಳಿಗೆ ಹಸ್ತಾಂತರಿಸಿದರು. ಈ ಕಾಮಗಾರಿಯನ್ನು ನಿರ್ಮಿತ ಕೇಂದ್ರದವರು ಪೂರ್ಣಗೊಳಿಸಿದ್ದಾರೆ. ಶಾಲೆಯ ಕಟ್ಟಡ ಸಂಪೂರ್ಣ ಕಳಪೆ ಮಟ್ಟದಲ್ಲಿ ಮಾಡಲಾಗಿದೆ. ಅಲ್ಲದೆ ಘಟನೆ ನಡೆದು ಮೂರು ದಿನಗಳು ಕಳೆದರೂ ಕೂಡ ಶಾಲೆಗೆ ಗುತ್ತಿಗೆದಾರರು ಭೇಟಿ ನೀಡಿಲ್ಲ. ಮೇಲ್ಚಾವಣಿ ಕುಸಿತಕ್ಕೆ ವಿಜ್ಞಾನ ಪ್ರಯೋಗಲಯದಲ್ಲಿದ್ದ ಪಿಠೋಪಕರಣಗಳು ಧ್ವಂಸಗೊಂಡಿವೆ. ಅದೃಷ್ಟ ವಶ ಮಕ್ಕಳಿಗೆ ಊಟದ ಸಮಯವಾದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಸರ್ಕಾರವು ಉತ್ತಮ ಗುಣಮಟ್ಟದ ಕಾಮಗಾರಿ ಜರುಗಲಿ ಎಂದು ನಿರ್ಮಿತ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿ ಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು ಗುರುಮಠಕಲ್ ಮತಕ್ಷೇತ್ರದಲ್ಲಿ ಎಲ್ಲಾ ಕಾಮಗಾರಿಗಳನ್ನು ಇವರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಆದರೆ ಇವರು ಕಳಪೆ ಕಾಮಗಾರಿಯನ್ನು ಮಾಡುತ್ತಿದ್ದು ನಮ್ಮ ಕ್ಷೇತ್ರದ ಮಾನ್ಯ ಶಾಸಕರು ಇದರ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು.
ಕಳಪೆ ಕಾಮಗಾರಿ ಮಾಡಿದಂತ ನಿರ್ಮಿತ ಕೇಂದ್ರ ಆಡಳಿತ ಅಧಿಕಾರಿ ಜೆ ಇ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕ್ಷೇತ್ರದಲ್ಲಿ ನಡೆದಿರುವಂತಹ ಹಲವಾರು ಕಾಮಗಾರಿಗಳನ್ನು ಪರಿಶೀಲನೆ ಮಾಡಬೇಕು. ಒಂದು ವೇಳೆ ಈ ಕಳಪೆ ಕಾಮಗಾರಿಯನ್ನು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ಘಟಕದ ವತಿಯಿಂದ ಬೀದಿಗಳಿದು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಗುರುಮಠಕಲ್ ಕರವೇ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಲ್ಹೇರಿ ತಿಳಿಸಿದರು.