ಹಸಿ ಬರಗಾಲ ಘೋಷಣೆ, ರೈತರ ಸಾಲ ಮನ್ನಾ ಸೇರಿದಂತೆ ಬೇಡಿಕೆಗಳೊಂದಿಗೆ ಅ.13ರಂದು ಕಲಬುರಗಿ ಬಂದ್ಗೆ ಕರೆ

ಹಸಿ ಬರಗಾಲ ಘೋಷಣೆ, ರೈತರ ಸಾಲ ಮನ್ನಾ ಸೇರಿದಂತೆ ಬೇಡಿಕೆಗಳೊಂದಿಗೆ ಅ.13ರಂದು ಕಲಬುರಗಿ ಬಂದ್ಗೆ ಕರೆ
ಕಲಬುರಗಿ ಬಂದ್‌ಗೆ ರೈತ, ದಲಿತ, ಕನ್ನಡ, ಮಹಿಳಾ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕರೆ
ಕಲಬುರಗಿ, ಅ. 10 :ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಗಂಭೀರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ *ರೈತ, ದಲಿತ, ಕನ್ನಡ, ಮಹಿಳಾ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲಬುರಗಿ* ವತಿಯಿಂದ *ಅ. 13, 2025 ರಂದು ಕಲಬುರಗಿ ಬಂದ್ಗೆ ಕರೆ ನೀಡಲಾಗಿದೆ.
ಸಮಿತಿಯ ನಾಯಕರಾದ ಶರಣಬಸಪ್ಪ ಮಮಶೆಟ್ಟಿ, ದಯಾನಂದ ಪಾಟೀಲ, ಮೌಲಾ ಮುಲ್ಲಾ, ನಾಗೆಂದ್ರಪ್ಪಾ ಥಂಬೆ, ಉಮಾಪತಿ ಪಾಟೀಲ ಹಾಗೂ ಮಹಾಂತ ಗೌಡಾ ನಂದಿಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ — ಕಲಬುರಗಿ ಜಿಲ್ಲೆಯ ಆರ್ಥಿಕತೆ ತೊಗರಿ ಬೆಲೆಯ ಮೇಲೆ ನಿರ್ಧಾರವಾಗುತ್ತದೆ. ಒಂದೆಡೆ ಬರ ಮತ್ತು ಇನ್ನೊಂದೆಡೆ ಅತಿವೃಷ್ಟಿಯಿಂದ ರೈತರು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ತೊಗರಿ, ಹೆಸರು, ಉದ್ದು, ಸೋಯಾ ಮತ್ತು ಹತ್ತಿ ಬೆಳೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದರೂ ಸರ್ಕಾರದಿಂದ ಯಾವುದೇ ಸಮೀಕ್ಷೆ ಅಥವಾ ಪರಿಹಾರ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಡಿಕೆಗಳು:
1. ಕಲಬುರಗಿ ಜಿಲ್ಲೆಯನ್ನು *ಹಸಿ ಬರಗಾಲ ಪ್ರದೇಶ*ವೆಂದು ಘೋಷಿಸಬೇಕು.
2. ರೈತರ *ಸಾಲ ಮನ್ನಾ* ಮಾಡಬೇಕು.
3. ಕಲಬುರಗಿ ಜಿಲ್ಲೆಗೆ *ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ* ನೀಡಬೇಕು.
4. ಜಿಲ್ಲೆಗೆ ₹1000 ಕೋಟಿ ರೂಪಾಯಿಗಳ *ವಿಶೇಷ ಪ್ಯಾಕೇಜ್* ಘೋಷಿಸಬೇಕು.
5. ಮಳೆಯಿಂದ ಹಾನಿಯಾದ ರೈತರಿಗೆ *ಬೆಳೆ ವಿಮೆ* ಜಾರಿಗೊಳಿಸಬೇಕು.
6. ಗಂಡೂರಿ ನಾಲಾ, ಚಂದ್ರಂಪಳ್ಳಿ, ಬೆಣ್ಣೆತೋರಾ, ಭೀಮಾ ನದಿ ತಟ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು.
7. ಮಳೆಯಿಂದ ಹಾನಿಯಾದ ರಸ್ತೆ, ಮನೆ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಪುನರ್‌ನಿರ್ಮಿಸಬೇಕು.
8. ಹಾನಿಯಾದ ಜಮೀನುಗಳಿಗೆ *ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ*ಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.
9. ಖಾಸಗಿ ಶಿಕ್ಷಣ ಸಂಸ್ಥೆಗಳು ರೈತರ ಮಕ್ಕಳ *ಶುಲ್ಕವನ್ನು ಮನ್ನಾ* ಮಾಡಬೇಕು.
10. ರೈತರ ಹೊಲಗಳಿಗೆ ಹೋಗುವ *ಎತ್ತಿನ ಬಂಡಿ ದಾರಿಗಳ ದುರಸ್ತಿ* ಮಾಡಬೇಕು.
11. ಅತಿವೃಷ್ಟಿಯಿಂದ ಹಾನಿಯಾದ *ಕಬ್ಬು ಬೆಳೆಗಾರರಿಗೆ ಪರಿಹಾರ* ನೀಡಬೇಕು.
ಈ ಬೇಡಿಕೆಗಳ ಹಿನ್ನೆಲೆ *ಕಲಬುರಗಿ ಬಂದ್* ಯಶಸ್ವಿಗೊಳಿಸಲು ಹಾಗೂ ರೈತರ ನ್ಯಾಯಯುತ ಹೋರಾಟಕ್ಕೆ ಎಲ್ಲ ವರ್ಗದ ಜನರು ಸಹಕರಿಸಬೇಕೆಂದು ಹೋರಾಟ ಸಮಿತಿಯು ಮನವಿ ಮಾಡಿದೆ.
ಈ ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿರುವ *ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್* ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಅವರು — “ರೈತರ ಹಿತಕ್ಕಾಗಿ ಹೋರಾಟವು ಜನಹಿತದ ಹೋರಾಟವಾಗಿದೆ. ರೈತರ ನ್ಯಾಯಕ್ಕಾಗಿ ನಾವು ಎಲ್ಲ ರೀತಿಯ ಬೆಂಬಲ ನೀಡುತ್ತೇವೆ” ಎಂದು ತಿಳಿಸಿದ್ದಾರೆ.