ಮಹಾದೇವಿಯಕ್ಕಗಳ ಸಮ್ಮೇಳನವನ್ನು ಉದ್ಘಾಟಿಸಿ ಕುಮಾರಿ ತನ್ವಿ ಬಿರಾದಾರ್ ಮಾತನಾಡಿದರು

ಮಹಾದೇವಿಯಕ್ಕಗಳ ಸಮ್ಮೇಳನವನ್ನು ಉದ್ಘಾಟಿಸಿ ಕುಮಾರಿ ತನ್ವಿ ಬಿರಾದಾರ್ ಮಾತನಾಡಿದರು  

ಓಂ ಶ್ರೀ ಗುರುಬಸವ ಲಿಂಗಾಯ ನಮಃ 

ಬಸವಾದಿ ಪ್ರಮಥರನ್ನು ಶ್ರೀ ಶರಣಬಸವೇಶ್ವರರನ್ನು ಎನ್ನ ಹೃದಯ ಮಂದಿರದಲ್ಲಿ ಧ್ಯಾನಿಸುತ್ತಾ 

ವೇದಿಕೆಯ ಮೇಲೆ ಆಸೀನರಾಗಿರುವ ಗಣ್ಯಮಾನ್ಯರೇ ವೇದಿಕೆಯ ಎದುರಿಗಿನ ಶರಣ ಬಂಧುಗಳೇ ನಿಮ್ಮೆಲ್ಲರಿಗೂ ಅನಂತ ಶರಣು ಶರಣಾರ್ಥಿಗಳು  

ಎಲ್ಲರಿಗೂ 14ನೇ ಮಹಾದೇವಿಯಕ್ಕಗಳ ಸಮ್ಮೇಳನದ ಹಾರ್ದಿಕ ಶುಭಾಶಯಗಳು 

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ 

ಸಮುದ್ರದ ತಡಿಯಲೊಂದು ಮನೆಯ ಮಾಡಿ 

ನೆರೆ ತೆರೆಗಳಿಗೆ ಅಂಜಿದೊಡೆ ಎಂತಯ್ಯ 

ಸಂತೆಯೊಳಗೆ ಒಂದು ಮನೆಯ ಮಾಡಿ 

ಶಬ್ದಕ್ಕೆ ನಾಚಿದೊಡೆ ಎಂತಯ್ಯ 

ಚೆನ್ನ ಮಲ್ಲಿಕಾರ್ಜುನ ದೇವ 

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿ ಆಗಿರಬೇಕು .

ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಅಚ್ಚುಮೆಚ್ಚು .ಅಕ್ಕಮಹಾದೇವಿ ಭಾರತದ ದಿಟ್ಟ ಮಹಿಳೆ . ಉಡುತಡಿಯಿಂದ ಕಲ್ಯಾಣದವರಿಗೆ ತಾನೊಬ್ಬಳೇ ನಡೆದು ಬಂದಿದ್ದಾಳೆ .ಪ್ರಕೃತಿಯ ಜೀವ ರಾಶಿಗಳೊಂದಿಗೆ ದೇವರ ಚರ್ಚೆ ಮಾಡಿದ್ದಾಳೆ. ಚೆನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದು ತಿಳಿದಿದ್ದಾಳೆ .ಶರಣ ಸತಿ ಲಿಂಗಪತಿ ತತ್ವವನ್ನು ನೀಡಿದ್ದಾಳೆ .

 ಸಮಾಜದಲ್ಲಿ ಮಹಿಳೆಯರಿಗೆ ಪುರುಷರ ಸಮಾನ ಸ್ಥಾನಮಾನ ಗೌರವ ದೊರೆಯಬೇಕೆಂದು ಆಶಿಸುತ್ತೇನೆ . ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ .ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು .ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು .

ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಸರ್ಕಾರಗಳು ಇಂದು ಯೋಜನೆ ರೂಪಿಸುತ್ತಿವೆ ಆದರೆ 12ನೇ ಶತಮಾನದಲ್ಲಿ 33ಕ್ಕಿಂತಲೂ ಹೆಚ್ಚು ಶರಣೆಯರು ವಚನಗಳನ್ನು ರಚಿಸಿದ್ದಾರೆ. ಶರಣರು ಸ್ತ್ರೀಯರಿಗೆ ಪುರುಷರ ಸಮಾನ ಗೌರವ ಸ್ಥಾನಮಾನಗಳನ್ನು ನೀಡಿದ್ದಾರೆ . ಪರವಧುವನ್ನು ಸಾಕ್ಷಾತ್ ಮಹಾದೇವಿ ಎಂದು ಭಾವಿಸುತ್ತಿದ್ದರು .ಇಂದಿನ ಸಮಾಜ ಶರಣರನ್ನು ಅನುಸರಿಸಿದರೆ ಹೆಣ್ಣು ಗೌರವದಿಂದ ಬದುಕಲು ಸಾಧ್ಯವಿದೆ . ಉಡುತಡಿ ಸೇರಿದಂತೆ ಎಲ್ಲಾ ಶರಣ ಸ್ಮಾರಕಗಳನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು , ಅಕ್ಕಮಹಾದೇವಿಯ ಜೀವನ ಸಂದೇಶಗಳು ಭಾರತದಲ್ಲಿ ಪಠ್ಯವಾಗಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ . ನಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿ ಒಂದು ಸಮ್ಮೇಳನದ ಉದ್ಘಾಟನೆ ಮಾಡಿರುವುದು ನಮಗೆ ಹೆಮ್ಮೆಯ ಸಂಗತಿ . ಐತಿಹಾಸಿಕ ಕ್ಷಣ . ನಮ್ಮ ಜೀವನದಲ್ಲಿ ಮರೆಯದ ಸಂದರ್ಭ .

ನಮಗೆ ಅತೀವ ಸಂತೋಷವಾಗಿದೆ .ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿಗಳಾದ ಲಿಂಗೈಕ್ಯ ಬಿ ಡಿ ಜತ್ತಿ ಅವರಿಗೂ ಕೂಡ ನಾನು ಗೌರವದಿಂದ ಸ್ಮರಿಸುತ್ತೇನೆ . 

ಅಕ್ಕಮಹಾದೇವಿಯ ಸಮ್ಮೇಳನಕ್ಕೆ . ನಮ್ಮಂತಹ ಚಿಕ್ಕ ಚಿಕ್ಕ ಮಕ್ಕಳನ್ನು ವೇದಿಕೆಗೆ ಕರೆದು ಸಮ್ಮೇಳನದ ಉದ್ಘಾಟನೆ ಮಾಡಲು ಅವಕಾಶ ನೀಡಿದ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ವಿಲಾಸ್ವತಿ khuba ಅವ್ವನವರಿಗೂ ಉಪಾಧ್ಯಕ್ಷರಾದ ಡಾಕ್ಟರ್ ಜಯಶ್ರೀ ದಂಡೆ ಅವ್ವನವರಿಗೂ ನಾವು ಕೃತಜ್ಞರಾಗಿದ್ದೇವೆ .

 ಸಮ್ಮೇಳನ ಯಶಸ್ವಿಯಾಗಲು ಪ್ರತಿ ವರ್ಷ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ . ಶರಣು ಶರಣಾರ್ಥಿ