ಕಾಂತಿ ಭೀಕ್ಷ ಬೇಡಿ ಶಿಕ್ಷಣ ಮತ್ತು ನೀರಾವರಿಗೆ ಮಹತ್ವ ಕೊಟ್ಟಿರುವ ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ
ಕಾಂತಿ ಭೀಕ್ಷ ಬೇಡಿ ಶಿಕ್ಷಣ ಮತ್ತು ನೀರಾವರಿಗೆ ಮಹತ್ವ ಕೊಟ್ಟಿರುವ ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ
ಕಮಲನಗರ: ತಾಲ್ಲೂಕಿನ ಡೋಣಗಾಂವ (ಎಂ) ಗ್ರಾಮದಿಂದ ಉತ್ತರಕ್ಕೆ ಎರಡು ಕಿ ಮೀ ದೂರದಲ್ಲಿರುವ "ಅಕ್ಕೇರಿ"ಭಕ್ತ ಮುಡಿ ತಪೋವನ ಭಕ್ತರನ್ನು ಸೆಳೆಯುವ ಭಕ್ತರು ನೆಲೆಸಿರುವ ದಟ್ಟ ಅರಣ್ಯದಲ್ಲಿ ಮಾಹಾಳಪಯ್ಯನ ಮಂದಿರವಿದೆ.
ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಡೋಣಗಾಂವ(ಎಮ್ )ಗ್ರಾಮದ ಲಿಂಗೈಕ್ಯರಾದ ಶ್ರೀ ಬಸವಲಿಂಗಪ್ಪ ದೇಶಿ ಕೇಂದ್ರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪೂಜ್ಯ ಶ್ರೀಗಳು ಶ್ರೀ ಸಂಗಪ್ಪ ಚನ್ನಮ್ಮ ಇವರ ಉದರದಿಂದ ಜನಿಸಿ ಅಕ್ಟೋಬರ್ ಎರಡು 1977 ರಲ್ಲಿ ಲಿಂಗೈಕ್ಯರಾದರು ಎಂದು ಶ್ರೀಗಳು ನುಡಿದರು.
ಭಕ್ತರ ಮತ್ತು ಶಿಷ್ಯರ ಸಂಬಂಧಗಳು ಗಟ್ಟಿಯಾಗಿ ಬೆಳೆಸಿದ ಶ್ರೀಗಳು ಇಂದಿಗೂ ಅವರ ಜೀವನ ಚರಿತ್ರೆ ನೆನಪಾಗಿರುವಂಥದ್ದು
ಅವರು ಬದುಕಿರುವಾಗ ದಶಕಗಳ ಹಿಂದೆ ಶಿಕ್ಷಣ ಮತ್ತು ನೀರಾವರಿಗೆ ಮಹತ್ವ ಕೊಟ್ಟ ಶ್ರೀಗಳು
ಅಂದಿನ ಕಾಲದಲ್ಲಿ ಹಳ್ಳಿಹಳ್ಳಿಗೆ ಭಿಕ್ಷೆ ಬೇಡುವ ಮೂಲಕ ಮಠದಲ್ಲಿ ಶಿಕ್ಷಣ ಮತ್ತು ನೀರಾವರಿಗೆ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಠದ ಜಮೀನಿನಲ್ಲಿ ಸುಮಾರು ಆರು ಬಾವಿಗಳನ್ನು ತೋಡಿಸಿ ಸಂಪೂರ್ಣ ನೀರಾವರಿ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ ಅವರ ಬದುಕು ಎಂದು ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಂಭುಲಿಂಗ ಶಿವಾಚಾರ್ಯರು ಹಾವಾಗಿ ಸ್ವಾಮಿ ಮಠದ ಪೀಠಾಧಿಪತಿಗಳು ಮಾತನಾಡಿದರು.
ಪೂಜ್ಯ ಶ್ರೀ ಬಸವಲಿಂಗಪ್ಪ ದೇಶಿಕೇಂದ್ರ ಹಾವಗಿಸ್ವಾಮಿ ಮಠ ಡೋಣಗಾಂವ(ಎಮ್ )ಇವರ 47ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮ ಪೂಜ್ಯ ಶ್ರೀ ಬಸವಲಿಂಗ ಅಪ್ಪಾಜಿ ಅವರ ಭಾವಚಿತ್ರಕ್ಕೆ ಶ್ರೀ ಉಮಕಾಂತ ದೇಶಿಕೇಂದ್ರ ಸ್ವಾಮೀಜಿ ಪೂಜೆಸಲ್ಲಿಸುವುದರ ಜೊತೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಹಣಮಂತ ಹೊಂಡಾಳೆ, ಪ್ರವೀಣ್ ಹೊಂಡಾಳೆ ಮನೋಹರ್ ಸ್ವಾಮಿ ರಾಜಕುಮಾರ ಮಗುದುಮೆ ಮಾಣಿಕ ಹೊಂಡಾಳೆ ಅಶೋಕ್ ಹೊಂಡಾಳೆ ಸಾಹಿತಿಗಳಾದ ಸಂಗಮೇಶ್ ಮುರ್ಕೆ ಇನ್ನಿತರು ಭಕ್ತರು ಉಪಸ್ಥಿದರು.