ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜೇವರ್ಗಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜೇವರ್ಗಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜೇವರ್ಗಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕಲಬುರಗಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಕಲಬುರಗಿ ಜಿಲ್ಲಾ ಅಧ್ಯಕ್ಷ ರಮೇಶ್ ಎಸ್. ನಾಟಿಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನಪ್ಪ ಎಸ್. ಪ್ರಸಾದ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜೇವರ್ಗಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ಜೇವರ್ಗಿ ತಾಲೂಕ ಅಧ್ಯಕ್ಷರಾಗಿ ಬಾಬುರಾವ ನಡಿಗೇರಿ, ಉಪಾಧ್ಯಕ್ಷರಾಗಿ ವಿಠ್ಠಲರಾವ ಕಲ್ಲೂರ, ಕಾರ್ಯದರ್ಶಿಯಾಗಿ ಶರಣು ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ರಾಜು ಬೇವಿನಮರದ ಮಾವನೂರ,

ಕಾರ್ಮಿಕ ತಾಲೂಕ ಅಧ್ಯಕ್ಷರಾಗಿ ಸುಭಾಷ ಕೊಂಬಿನ, ಜೇವರ್ಗಿ ತಾಲೂಕು ಮೈನಾರಿಟಿ ಅಧ್ಯಕ್ಷರಾಗಿ ಅಬ್ದುಲ ಸಾಬ್ ಹಿಪ್ಪರಗಿ, ಮೈನಾರಿಟಿ ಕಾರ್ಯದರ್ಶಿ ಮೈನೋದ್ದಿನ ಮೊರಟಗಿ ಇವರನ್ನು ಆಯ್ಕೆ ಮಾಡಲಾಯಿತು. ತತಕ್ಷಣವೇ ತಾಲೂಕಿನ ಸರ್ವಾಂಗಿನ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತರಾಗಲು ಆದೇಶಿಸಿ ಆದೇಶ ಪತ್ರವನ್ನು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಮರಾಯ ಹೊಸಮನಿ, ಆಳಂದ ತಾಲೂಕ ಅಧ್ಯಕ್ಷ ಚಂದ್ರಕಾAತ ಬಿರಾದಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಷೇಕ ಚಕ್ರವರ್ತಿ, ಸೇಡಂ ತಾಲೂಕ ಅಧ್ಯಕ್ಷ ಬಸವರಾಜ ಸೇಡಂ ಸೇರಿದತೆ ಸರ್ವ ಸದಸ್ಯರು ಉಪಸ್ಥಿತರಿದ್ದರು

.