ಸಗರ ಪಟ್ಟಣ ಪಂಚಾಯತ ಭಾಗ್ಯ ಯಾವಾಗ ?
ಸಗರ ಪಟ್ಟಣ ಪಂಚಾಯತ ಭಾಗ್ಯ ಯಾವಾಗ ?
ಶಹಾಪುರ : ತಾಲೂಕಿನಲ್ಲಿ ಬಹುದೊಡ್ಡ ಗ್ರಾಮವಾದ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸದೆ ಕೈ ಬಿಟ್ಟಿರುವುದನ್ನು ನಿಜಕ್ಕೂ ಸಗರ ಗ್ರಾಮಕ್ಕೆ ಮಾಡಿದ ಅನ್ಯಾಯ ಎಂದು ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಆಯಾ ಗ್ರಾಮ ಪಂಚಾಯಿತಿಗಳ ಜನಸಂಖ್ಯಾ ಆಧಾರದ ಮೇಲೆ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮಟ್ಟದಲ್ಲಿ ಯೋಜನೆ ಒಂದು ರೂಪಿಸಿದೆ,ಆದರೆ ಎಲ್ಲಾ ಅರ್ಹತೆಗಳಿದ್ದರೂ ತಾಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಸಂಪೂರ್ಣವಾಗಿ ರಾಜಕೀಯ ಹಿತಾಸಕ್ತಿ ಕೊರತೆ ಕಂಡು ಬರುವುದರ ಜೊತೆಗೆ ಎಲ್ಲೋ ಒಂದು ಕಡೆ ಕಾಣದ ಕೈಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿರುವುದು ಕಂಡು ಬರುತ್ತಿದೆ ಎಂದು ಪ್ರಗತಿಪರ ಚಿಂತಕರೊಬ್ಬರು ಹೇಳಿದರು.
ಈ ವಿಷಯ ತಾಲೂಕಿನಲ್ಲಿ ಹೊಸ ವಿಚಾರ ಹುಟ್ಟುವಾಗಿದೆ,ಪಟ್ಟಣ ಪಂಚಾಯಿತಿ ಭಾಗ್ಯ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ,ಸಚಿವರು ಮನಸ್ಸು ಮಾಡಿದರೆ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬಹುದಿತ್ತು,ಆದರೆ ಇದರಲ್ಲಿ ನಿರಾಸಕ್ತಿ ತೋರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳುತ್ತಿದ್ದಾರೆ ಸಗರ ಗ್ರಾಮದ ಚಂದ್ರಶೇಖರ.
ಸಗರ ಗ್ರಾಮ ಪಂಚಾಯಿತಿ ಯಲ್ಲಿ ಸುಮಾರು ಹತ್ತಾರು ಹಳ್ಳಿಗಳು ಬರುತ್ತಿದ್ದು,ಒಟ್ಟು 37 ಸದಸ್ಯರು ಹೊಂದಿದೆ,27 ಜನ ಕಚೇರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ,
ಅಂದಾಜು 23 ಸಾವಿರ ಜನಸಂಖ್ಯೆಗೂ ಅಧಿಕವಾಗಿ ಹೆಚ್ಚು ವಾಸಿಸುವ ಈ ಗ್ರಾಮವಾಗಿದೆ, ಪಟ್ಟಣ ಪಂಚಾಯಿತಿ ಮಾಡುವಲ್ಲಿ ಸಂಪೂರ್ಣವಾಗಿ ಕಡೆಗಣಿಸಿ ನಮ್ಮ ಗ್ರಾಮಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು. ಮುಂಬರುವ ದಿನಗಳಲ್ಲಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
- ನಮ್ಮ ಸಗರ ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾಗುವ ಎಲ್ಲಾ ಸೌಲಭ್ಯಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ತೋರಿರುವದು ಸರಿಯಲ್ಲ.
ತಿರುಪತಿ ಹತ್ತಿಕಟಗಿ,ಬಿಜೆಪಿ ಯುವ ಮುಖಂಡರು ಸಗರ
