ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಆಳಂದ :ತಾಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಅರಿವು ಶಿಕ್ಷಣ ಕೇಂದ್ರದಲ್ಲಿ ಎಸ್ .ಎಸ್ . ಎಲ್. ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು .
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪ್ರವೀಣ್ ಮೊದಲೇ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಆಕಾಶ್ ದೇಗಾವ್ ಸಕಲ ಸಂರಕ್ಷಣೆ ಸಂಸ್ಥಾಪಕರು ಮಹೇಶ್ ವಾರಿಕ ಕರವೇ ಉಪಾಧ್ಯಕ್ಷರು ವಿಕಾಸ್ ಕಾಂಬಳೆ ಕರವೇ ಸಂಚಾಲಕರು ಕರಣ್ ನಗರ ಅಧ್ಯಕ್ಷರು ನಾಗಯ್ಯ ಗ್ರಾಮ ಅಧ್ಯಕ್ಷರು ಮಲ್ಲಿಕಾರ್ಜುನ್ ಶೃಂಗೇರಿ ಎಂ ಎಸ್ ಆರ್ ಜಿ ಉಪನ್ಯಾಸಕರು
ಡಾ. ಬಾಬುರಾವ್ ಶೃಂಗೇರಿ ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕರು ಮಲ್ಲಿಕಾರ್ಜುನ್ ಶೃಂಗೇರಿ ಲಕ್ಷ್ಮಿಕಾಂತ್ ಭಜನ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕುರಿತು ಪ್ರವೀಣ್ ಮೊದಲೆ ಮಾತನಾಡಿ ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿ ಮುಂದೆ ಯು ಕೂಡ ಹೀಗೆ ಅಧ್ಯಯನ ಮಾಡಿ ಸರಕಾರಿ ಹುದ್ದೆ ಪಡೆಯಿರಿ ಎಂದರು ಬಾಬುರಾವ್ ಮಾತನಾಡಿ ಸಿಕ್ಕ ಅವಕಾಶ ಕೈಜಾರದಂತೆ ನೋಡಿಕೊಳ್ಳಬೇಕೆಂದು ಹೇಳಿದರು ಮಲ್ಲಿಕಾರ್ಜುನ್ ಅವರು ಮಾತನಾಡಿ ಇಂತಹ ಗೌರವ ಸನ್ಮಾನ ಮಕ್ಕಳಿಗೆ ಸ್ಪೂರ್ತಿ ಆಗಬೇಕೆಂದು ಎಂದು ಹೇಳಿದರು ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕರು ಮಲ್ಲಿಕಾರ್ಜುನ್ ಮಾತನಾಡಿ ಅಂಕ ಪಡೆಯುವುದು ಅಷ್ಟೇ ಅಲ್ಲದೆ ಅದರ ತಕ್ಕ ಹಾಗೆ ಹುದ್ದೆಯನ್ನು ಸೇರಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಅಮಿತ್ ಕೈಲಾಸ್ ನವಕೇತ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕಿರಣ್ 91. 33 ವಿಜ್ಞಾನ ವಿಭಾಗ ರಾಹುಲ್ 83.23 ವಿಜ್ಞಾನ ವಿಭಾಗ ಅಶ್ವಿನಿ 83. 82 ವಿಜ್ಞಾನ ವಿಭಾಗ ಅಂಕಿತ 80.50 ವಿಜ್ಞಾನ ವಿಭಾಗ ಕಲ್ಯಾಣಿ 63.36 ಚಂದನ 79.94 ಯವರಿಗೆ.ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಹಣಮಂತ ಚಿಂಚೋಳಿ ನಿರೂಪಿಸಿದರು ವಿಕ್ರಾಂತ ವಂದಿಸಿದರು
ವರದಿ ಡಾ. ಅವಿನಾಶ ಎಸ್. ದೇವನೂರ
