ಬಿ ಆರ್. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಬೀಳಗಿ ಒತ್ತಾಯ

ಬಿ ಆರ್. ಪಾಟೀಲರಿಗೆ ಸಚಿವ ಸ್ಥಾನ  ನೀಡಲು ಬೀಳಗಿ ಒತ್ತಾಯ

ಬಿ ಆರ್. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಬೀಳಗಿ ಒತ್ತಾಯ

ಆಳಂದ: ಹಿರಿಯ ಶಾಸಕರೂ ಶಿಕ್ಷಣ ಪ್ರೇಮಿಗಳು ಚಳುವಳಿ ಮೂಲಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿರುವ ಲೋಹಿಯಾ ಚಿಂತನೆಗಳಿಗೆ ಬದ್ಧರಾಗಿರುವ ನೀರಾವರಿ ಕ್ಷೇತ್ರದಲ್ಲಿ ಶಿರಪುರ ಮಾದರಿ ಯೋಜನೆಯನ್ನು ಜಾರಿಗೆ ತಂದಿರುವ ದೂರದೃಷ್ಟಿಯ ನಾಯಕರಾಗಿರುವ ಇದ್ದದು ಇದ್ದ ಹಾಗೆ ಹೇಳುವ ಧೈರ್ಯಶಾಲಿ ಶಾಸಕರು ಮತ್ತು ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ .ಆರ್ .ಪಾಟೀಲ ಅವರನ್ನು ರಾಜ್ಯದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಭೂ ನ್ಯಾಯ ಮಂಡಳಿ ನಾಮನಿರ್ದೇಶನ ಸದಸ್ಯರಾದ ಬಾಬು ಬೀಳಗಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡಿರುವ ಅವರು ನಾಲ್ಕು ಬಾರಿ ಶಾಸಕರಾಗಿ ಅನುಭವಿ ಹಾಗೂ ರೈತಪರ ಅಭಿವೃದ್ಧಿ ಹರಿಕಾರರಾಗಿರುವ ಬಿ.ಆರ್.ಪಾಟೀಲರನ್ನು ಹಿರಿತನ ಆಧಾರದ ಮೇಲೆ ಸಚಿವ ಸ್ಥಾನವನ್ನು ನೀಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಹಾಗೂ ಪಕ್ಷದ ಸಂಘಟನೆಗೆ ಅವಕಾಶ ಒದಗಿಸಿ ಕೊಡಬೇಕು ಎಂದು ಅವರು ಕಾಂಗ್ರೆಸ್ ಹೈಕಮಾಂಡಗೆ ಮನವಿ ಮಾಡಿದ್ದಾರೆ

ವರದಿ ಡಾ. ಅವಿನಾಶ ಎಸ್. ದೇವನೂರ