ಪಡಸಾವಳಿಯಲ್ಲಿ ಅಗ್ನಿ ದುರಂತ -

ಪಡಸಾವಳಿಯಲ್ಲಿ ಅಗ್ನಿ ದುರಂತ -

ಪಡಸಾವಳಿಯಲ್ಲಿ ಅಗ್ನಿ ದುರಂತ - ಸುಟ್ಟು ಕರಕಲಾದ ಮಲ್ಲಿನಾಥ ಸುತಾರ ಫರ್ನೀಚರ ಅಡ್ಡ ಸುತಾರಾಂ ಸುಳಿಯದ ಅಧಿಕಾರಾರಿಗಳು ತಾಲೂಕು ವಿಶ್ವಕರ್ಮ ಸಂಘಟನಾ ಅಧ್ಯಕ್ಷರ ಆಕ್ರೊಶ

ಆಳಂದ: ತಾಲೂಕಿನ ಪಡಸಾವಳಿ ಗ್ರಾಮದ ನಿವಾಸಿ ಮಲ್ಲಿನಾಥ ಸುತಾರ ಇವರ ಫರ್ನಿಚರ ಅಂಗಡಿಗೆ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾನು ಗಂಟಲೆ ಬೆಲೆ ಬಾಳುವ ಯಂತ್ರಗಳು, ದುಬಾರಿ ವೆಚ್ಚದ ಕುಶಲ ಕೆತ್ತನೆಯ ವಸ್ತುಗಳು ಸುಟ್ಟು ಕರಕಲವಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

      ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು, ಗ್ರಾಮಸ್ಥರು ಅಗ್ನಿ ನಂದಿಸಲು ಹರಸಹಾಸಗೈದರು ದಗದಗಿಸುವ ಅಗ್ನಿಯ ಎದರು ಕೈ ಚೆಲ್ಲುವಂತಾಯಿತು. ಅಷ್ಟೊತ್ತಿಗೆ ಸಂಪೂರ್ಣ ಅಂಗಡಿ ಸುಟ್ಟು ಕರಕಲಾಗಿತ್ತು.

ಸುದ್ದಿ ತಿಳಿದು ದೌಡಾಯಿಸಿದ ತಾಲೂಕು ವಿಶ್ವಕರ್ಮ ಸಂಘಟನಾ ಅಧ್ಯಕ್ಷ ಬಸವರಾಜ ವಿಶ್ವಕರ್ಮ, ಹೋರಾಟಗಾರರಾದ ಶ್ರೀಶೈಲ ಸುತಾರ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿತಗುಲಿ ಮೂರು ದಿನವಾದರು ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕುಲಕಸುಬನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ವಿಶ್ವಕರ್ಮರ ಸಹಾಯಕ್ಕೆ ಅಧಿಕಾರಿಗಳು ನೇರವಿಗೆ ಬರಬೇಕು. ಇಲ್ಲವಾದಲ್ಲಿ ನಾವು ಹೋರಾಟಕಿಳಿಯಬೇಕಾಗುತ್ತದೆ ಎಂದು ಉದ್ಯಮಿದಾರ ಶ್ರೀಶೈಲ ಸುತಾರ ಕಿಡಿಕಾರಿದರು.

ಸ್ಥಳಿಯ ಮುಖಂಡರು ಮಾತನಾಡಿ ಮಹಾಸಭಾ ಮತ್ತು ತಾಲೂಕನ್ ಶಾಸಕರು ಆ ಬಡವ ಮಲ್ಲಿನಾಥನ ಕಪ್ಟಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು. ಮಹಾಸಭಾದ ಪಧಾಕರಿಗಳು, ಪ್ರಮುಖರಾದ ಮೋನಪ್ಪ ಸುತಾರ, ಅಪ್ಪು ಗೋಪಾಳೆ, ಸೋಮಶೇಖ ಕಾಂಬಳೆ ಸಂಜಯ ಭೊಸಲೆ. ಶಿವಾನಂದ ಸುತಾರ ಹಾಗೂ ಗ್ರಾಮದ ಹಿರಿಯರು ಮುಂತಾದವರು ಉಸ್ಥಿತರಿದ್ದರು.