ದಾಸ ಸಾಹಿತ್ಯ ವಿಶ್ವಮಾನವನಾಗಲು ಪ್ರೇರಣೆ:ಡಾ.ಸುರೇಶ ಜಾದವ.
ದಾಸ ಸಾಹಿತ್ಯ ವಿಶ್ವಮಾನವನಾಗಲು ಪ್ರೇರಣೆ:ಡಾ.ಸುರೇಶ ಜಾದವ.
ಕಲಬುರ್ಗಿ:ವಚನ ಮತ್ತು ದಾಸ ಸಾಹಿತ್ಯ ಪ್ರಕಾರಗಳೆರಡೂ ನಾಡು ನುಡಿಗೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ,"ಎಂದು ಸಾಹಿತಿ ಡಾ.ಸುರೇಶ ಜಾದವ ಹೇಳಿದರು.
ನಗರದ ಕನ್ನಡ ನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘದ ಕಚೇರಿಯಲ್ಲಿ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನ ಮತ್ತು ದಾಸ ಸಾಹಿತ್ಯ ಕನ್ನಡಮ್ಮನ ಎರಡು ಕಣ್ಣುಗಳು, ದಾಸರ ಹಾಡುಗಳು ಜನಮೂಲವಾಗಿವೇ ವಿನಹ ಜಾತಿಮೂಲವಲ್ಲ.ವಿವಿಧ ಬವಣೆಗೆ ಒಳಗಾದ ಮಹಿಳೆಯರು ದಾಸರ ಹಾಡುಗಳಿಂದ ಪ್ರೇರಣೆ ಹೊಂದಿ ಅವರು ಕೀರ್ತನೆಗಳು ಹಾಡುತ್ತ ಮಹಿಳಾ ಕೀರ್ತನಕಾರರಾದರು ಎಂದರು.
ದಾಸಸಾಹಿತ್ಯ:ದೃಷ್ಟಿ-ಸೃಷ್ಟಿ ಕೃತಿ ಲೇಖಕರಾದ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ , ದಾಸ ಸಾಹಿತ್ಯವು ಸಾಮಾಜಿಕ ಪರಿವರ್ತನೆ ಮಾಡಲು ಹುಟ್ಟಿತು,ಈ ಸಾಹಿತ್ಯ ಪ್ರಕಾರಕ್ಕೆ ಜಾತಿ ಇಲ್ಲ,ತ್ಯಾಗದ ತಳಪಾಯದ ಮೇಲೆ ನಿಂತಿದೆ ಎನ್ನುತ" ಅಂತರಂಗದ ಕದವು ತೆರೆಯಿತಿಂದು,ಎಂತು ಪುಣ್ಯದ ಪ್ರಾಪ್ತಿ ದೊರಕಿತು ಎನಗೆ"ಎಂದು ವಿಜಯದಾಸರ ಹಾಡು ಹಾಡಿ ಹೊಗಳಿದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಡಾ.ಶ್ರೀಶೈಲ ನಾಗರಾಳ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು.ಡಾ.ವಿಜಯಕುಮರ ಪರುತೆ ಕಾರ್ಯಕ್ರಮದ ನಿರೂಪಿಸಿದರು.
ಡಾ.ಗವಿಸಿದ್ಧಪ್ಪ ಪಾಟೀಲ್,ಸಿದ್ಧರಾಮ ಸರಸಂಬಿ,ನಾರಾಯಣ ಕುಲಕರ್ಣಿ,ರಾಜೇಂದ್ರ ಝಳಕಿ,ಡಾ.ರಾಜಕುಮಾರ ಮಾಳಗೆ,ಡಾ.ಸಿದ್ಧಪ್ಪ ಹೊಸಮನಿ, ಎಸ್.ಎಸ್.ಹೂಗಾರ,ರೇವಣಸಿದ್ಧಪ್ಪ ದುಕಾನ,ಪ್ರೋ.ಎಸ್.ಎಲ್.ಪಾಟೀಲ್ ಮತ್ತು ಚಿಂತಕರಾದ ಶರಣಗೌಡ ಪಾಳಾ ಸೇರಿದಂತೆ ಅನೇಕ ಭಾಗವಹಿಸಿದ್ದರು.
