ಬೈಕ್ ನಿಂದ ಬಿದ್ದು: ಪಾಣೆಗಾಂವ ಗ್ರಾಮದ ಮೂವರು ಯುವಕರು ದುರ್ಮರಣ
ಬೈಕ್ ನಿಂದ ಬಿದ್ದು: ಪಾಣೆಗಾಂವ ಗ್ರಾಮದ ಮೂವರು ಯುವಕರು ದುರ್ಮರಣ
ಕಲಬುರಗಿ : ನಿನ್ನೆ ರಾತ್ರಿ ಸುಮಾರು ಮಧ್ಯರಾತ್ರಿ ವೇಳೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾಣೆಗಾಂವ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದಾರೆ.
ಬೈಕ್‌ನಲ್ಲಿ ಪಾಣೆಗಾಂವ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದಿರಭಹುದು ಎಂದು ತಿಳಿಸಿದರು. ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ .ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಮೃತರನ್ನು ಪಾಣೆಗಾಂವ ಗ್ರಾಮದ ಧರ್ಮರಾಜ@ ಧಾರಮು ತಂದೆ ರಾಜು ಚವಾಣ (31), ಅನಿಲ ತಂದೆ ಗೋಪಾಲ ಪವಾರ್ (34) ಹಾಗೂ ಸುಂದರ ತಂದೆ ಹರಿಶ್ಚಂದ್ರ ರಾಠೋಡ್ (32) ಎಂದು ಗುರುತಿಸಲಾಗಿದೆ.
ಒಂದೇ ಗ್ರಾಮದ ಮೂವರು ಯುವಕರು ಒಂದೇ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪಾಣೆಗಾಂವ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಮೂವರ ಅಕಾಲಿಕ ನಿಧನಕ್ಕೆ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
