ಕರೆಂಟ್ ಬಳಸಿ ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರು ಖದೀಮರಿಗೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಕರೆಂಟ್ ಬಳಸಿ ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರು ಖದೀಮರಿಗೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಬಂಧಿತರಿಂದ ಒಂದು ಮೊಲ ಮತ್ತು ಎರಡು ಟಿಟ್ಟಿಬ ಪಕ್ಷಿಗಳನ್ನು ವಶಕ್ಕೆ ಪಡೆದು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು
ಚಿಂಚೋಳಿ :ತೆಲಂಗಾಣ ಗಡಿಭಾಗದ ಸಂಗಾಪೂರ ಅರಣ್ಯ ಪ್ರದೇಶದ ಸರ್ವೇ ನಂ.3ರೊಳಗೆ ಅಕ್ರಮವಾಗಿ ಪ್ರವೇಶಿಸಿ ಕರೆಂಟ್ ಹಾಕಿ ಪ್ರಾಣಿಗಳನ್ನು ಹಿಡಿಯುತ್ತಿದ್ದ ಇಬ್ಬರು ಆರೋಪಿತ ಖದಿಮರನ್ನು ಹಿಡಿದು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ಕುಂಚಾವರಂ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಅವರು ತಿಳಿಸಿದ್ದಾರೆ.
ಸಂಗಾಪೂರದ ಮಾಣಿಕ ತಂದೆ ಹರಿಶ್ಚಂದ್ರ ಪವಾರ (40) ಹಾಗೂ ಸುನೀಲ ತಂದೆ ಧರ್ಮು ರಾಠೋಡ (30) ಬಂಧಿತ ಆರೋಪಿಗಳಾಗಿದ್ದಾರೆ. ಅಕ್ರಮವಾಗಿ ಅರಣ್ಯ ಪ್ರದೇಶದೊಳಗೆ ನುಗ್ಗಿ ಆರೋಪಿತರತು ಎರಡು ಕಿ.ಲೋ.ಮೀಟರವರೆಗೆ ಬೈಂಡಿಂಗ್ ತಂತಿ ಎಳೆದು ಅದಕ್ಕೆ ವಿದ್ಯುತ್ ಸ್ಪರ್ಶ ಕೊಟ್ಟು ಅಕ್ರಮವಾಗಿ ಪ್ರಾಣಿಗಳ ಬಲಿ ಮಾಡುತ್ತಿದ್ದ ವೇಳೆ ಸೇರೆ ಹಿಡಿಯಲಾಗಿದ್ದು, ಆರೋಪಿತರಿಂದ ಒಂದು ಮೊಲ ಮತ್ತು ಎರಡು ಟಿಟ್ಟಿಬ ಪಕ್ಷಿಗಳನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ಸಂಜೀವಕುಮಾರ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
