ವಿಯಟ್ನಾಮ ನಾಗರಿಕರ ರಾಷ್ಟ್ರ ನಿಷ್ಠೆ ಮತ್ತು ಅಲ್ಲಿಯ ಪ್ರವಾಸೋಧ್ಯಮ ಕ್ಷೇತ್ರ ವಿಶ್ವಕ್ಕೆ ಮಾದರಿ.ಬಸವರಾಜ ದೇಶಮುಖ್.

ವಿಯಟ್ನಾಮ ನಾಗರಿಕರ ರಾಷ್ಟ್ರ ನಿಷ್ಠೆ ಮತ್ತು ಅಲ್ಲಿಯ ಪ್ರವಾಸೋಧ್ಯಮ ಕ್ಷೇತ್ರ ವಿಶ್ವಕ್ಕೆ ಮಾದರಿ.ಬಸವರಾಜ ದೇಶಮುಖ್.

 ವಿಯಟ್ನಾಮ ನಾಗರಿಕರ ರಾಷ್ಟ್ರ ನಿಷ್ಠೆ ಮತ್ತು ಅಲ್ಲಿಯ ಪ್ರವಾಸೋಧ್ಯಮ ಕ್ಷೇತ್ರ ವಿಶ್ವಕ್ಕೆ ಮಾದರಿ.ಬಸವರಾಜ ದೇಶಮುಖ್.

ಇತ್ತೀಚೆಗೆ ಮೇ ತಿಂಗಳ ಎರಡನೇ ವಾರ ಮತ್ತು ಮೂರನೇ ವಾರ ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳು ಮತ್ತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಅವರ ತಂಡ ಹತ್ತು ದಿವಸ ವಿಯೆಟ್ನಾಂ ಪ್ರವಾಸ ಕೈಗೊಂಡು ನಿನ್ನೆ ಕಲಬುರ್ಗಿಗೆ ಆಗಮಿಸಿದರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ದೇಶಮುಖ ರವರನ್ನು ಭೇಟಿ ಮಾಡಿ ಅವರಿಗೆ ಗೌರವ ಸನ್ಮಾನ ಮಾಡಿದರು ಈ ಸಂಭ್ರಮದಲ್ಲಿ ಮಾತನ್ನಾಡಿದ ದೇಶಮುಖರವರು ವಿಯೆಟ್ನಾಂ ನಾಗರಿಕರ ದೇಶ ಭಕ್ತಿಯ ನಿಷ್ಟೆಯ ಬಗ್ಗೆ ಅಪಾರ ಹೊಗಳಿದರು ಅಷ್ಟೇ ಅಲ್ಲದೆ ವಿಯೆಟ್ನಾಂ ದೇಶದ ಅಖಂಡತೆ ಮತ್ತು ಏಕತೆಯ ಪ್ರಶ್ನೆ ಬಂದಾಗ ಧರ್ಮ,ಜಾತಿ,ಪಕ್ಷ ವರ್ಗ ಮರೆತು ತಮ್ಮ ರಾಷ್ಟ್ರಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಅಭಿಪ್ರಾಯ ಅಲ್ಲಿಯ ಜನಮಾಸದ ದಿಟ್ಟತನದ ಧ್ವನಿ ತಮಗೆ ಅಶರ್ಯ ತಂದಿದೆ ಎಂದರು. ಈ ಹಿಂದೆ ಅಮೆರಿಕಕ್ಕೆ ತಮ್ಮ ದೇಶದ ಸಂಘಟಿತ ಶಕ್ತಿಯಿಂದ ಜಯ ಸಾದಿಸಿರುವ ಬಗ್ಗೆ ಅಲ್ಲಿಯ ಜನ ಹೆಮ್ಮೆಯಿಂದ ಹೇಳುತ್ತಾರೆ.

ವಿಯಟ್ಯಾಮ್ ದೇಶ ಪ್ರವಾಸೋಧ್ಯಮ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವುದರಿಂದ ಇದರಿಂದ ಆ ದೇಶಕ್ಕೆ ಅಪಾರ ಪ್ರಮಾಣದಲ್ಲಿ ಆದಾಯ ಬರುವುದು ಗಮನಿಸಿದರ ನಮ್ಮ ಭಾರತ ದೇಶದಲ್ಲಿರುವ ಕೋಟೆಕೂತ್ತಲುಗಳು, ನೈಸರ್ಗಿಕ ತಾಣಗಳು, ಧಾರ್ಮಿಕ ತಾಣಗಳು ಲೆಕ್ಕವಿಲ್ಲದಷ್ಟು ಇವೆ ಇವುಗಳ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಿದರೆ ನಮ್ಮ ದೇಶದ ಹಿರಿಮೆ ಹೆಚ್ಚುವುದಲ್ಲದೆ ಅಪಾರ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗುವುದಲ್ಲದೆ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ಬರುತ್ತದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ ನೀಲಕಂಠರಾವ ಪಾಟೀಲ್ ಮೂಲಗೆ,

ಪ್ರೊ.ಆರ್.ಕೆ ಹುಡುಗಿ,ಡಾ.ಬಸವರಾಜ ಕುಮ್ನೂರು, ಬಸವರಾಜ ಗುಲಶೆಟ್ಟಿ, ಕೈಲಾಸನಾಥ ದೀಕ್ಷಿತ್,ಶರಣಗೌಡಾ ಪಾಟೀಲ್ ಪಾಳಾ, ಸೈಯದ್ ಸನಾಉಲ್ಲಾ,

ರೌಫ ಖಾದ್ರಿ, ಅಸ್ಲಂ ಚೌಂಗೆ, ಆನಂದ ಸಿದ್ಧಾಮಣಿ,

ಮೋಹನ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.