ಸೇವಾ ವಿಭೂಷಣ ಪ್ರಶಸ್ತಿಗೆ ಶಿಕ್ಷಕಿ ಶಾಂತ ಮೊಕಾಶಿ ಆಯ್ಕೆ

ಸೇವಾ ವಿಭೂಷಣ ಪ್ರಶಸ್ತಿಗೆ ಶಿಕ್ಷಕಿ ಶಾಂತ ಮೊಕಾಶಿ ಆಯ್ಕೆ

ಸೇವಾ ವಿಭೂಷಣ ಪ್ರಶಸ್ತಿಗೆ ಶಿಕ್ಷಕಿ ಶಾಂತ ಮೊಕಾಶಿ ಆಯ್ಕೆ

ಕಲಬುರಗಿ, ಜು. 21: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ), ಜಿಲ್ಲಾ ಘಟಕ ಕಲಬುರಗಿ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ 'ಸೇವಾ ವಿಭೂಷಣ ಪ್ರಶಸ್ತಿ'ಗೆ ಸೇಡಂ ತಾಲೂಕಿನ ಹಣಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶಾಂತ ಮೊಕಾಶಿ ಅವರು ಆಯ್ಕೆಯಾಗಿದ್ದಾರೆ.

ಸುಮಾರು ಇಪ್ಪತ್ತು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೋರಿದ ಸಕ್ರಿಯ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲು ಆಯ್ಕೆ ಮಾಡಲಾಗಿದೆ.

ಇದೇ ತಿಂಗಳ ಜುಲೈ 26ರಂದು (ಭಾನುವಾರ) ಕಲಬುರಗಿಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಟ್ಟದ ಪದಗ್ರಹಣ ಸಮಾರಂಭದಲ್ಲಿ ಶ್ರೀಮತಿ ಶಾಂತ ಮೊಕಾಶಿ ಅವರಿಗೆ **'ಸೇವಾ ವಿಭೂಷಣ ಪ್ರಶಸ್ತಿ'** ಪ್ರದಾನ ಮಾಡಲಾಗುವುದು.

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ), ಜಿಲ್ಲಾ ಘಟಕ ಕಲಬುರಗಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಚವಡಿಹಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.