ಆಗಸ್ಟ್ ೯ರಂದು ಕಲಬುರಗಿಯಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ನಿಂದ ಬೃಹತ್ ಸರ್ವ ಸಮಾಜ ವಧು-ವರರ ಸಮಾವೇಶ
ಆಗಸ್ಟ್ ೯ರಂದು ಕಲಬುರಗಿಯಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ನಿಂದ ಬೃಹತ್ ಸರ್ವ ಸಮಾಜ ವಧು-ವರರ ಸಮಾವೇಶ
ಕಲಬುರಗಿ : ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ೨೦೨೬ರ ಬೃಹತ್ ಸರ್ವ ಸಮಾಜ ವಧು-ವರರ ಸಮಾವೇಶವನ್ನು ಆಗಸ್ಟ್ ೯, ೨೦೨೬ (ಭಾನುವಾರ) ಬೆಳಿಗ್ಗೆ ೯ ಗಂಟೆಗೆ ಜಗತ್‌ನ ಕಕ್ಕಯ್ಯ ದೇವಸ್ಥಾನ ಸಮೀಪದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ಎ. ಸಾವಳಕರ ಮಾತನಾಡಿ, ಸಮಾಜದ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾಜದ ಎಲ್ಲಾ ಬಾಂಧವರು ತನು-ಮನ-ಧನದಿಂದ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಸಮಾವೇಶದಲ್ಲಿ ಭಾಗವಹಿಸಲು ಆಸಕ್ತ ವಧು-ವರರು ಆಗಸ್ಟ್ ೧, ೨೦೨೬ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. ವಾಟ್ಸ್ಆಪ್ ಮೂಲಕ ಫೋಟೋ ಹಾಗೂ ಬಯೋಡೇಟಾ ಕಳುಹಿಸಿ, ೨೦೦ ರೂ. ನೋಂದಣಿ ಶುಲ್ಕವನ್ನು ಫೋನ್-ಪೇ ಅಥವಾ ಗೂಗಲ್-ಪೇ ಮೂಲಕ ಪಾವತಿಸಿ ನೋಂದಣಿ ಪೂರ್ಣಗೊಳಿಸಬಹುದು. ಸಮಾವೇಶದ ಬಳಿಕ ನೋಂದಾಯಿತ ವಧು-ವರರ ಮಾಹಿತಿಯ ಪುಸ್ತಕವನ್ನು ಅಂಚೆ ಮೂಲಕ ಕಳುಹಿಸಲಾಗುವುದು.
ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಸಾಯಬಣ್ಣ ಮಸಾಜಿ ಹೊಳ್ಕರ, ಸಮಾವೇಶ ಸಮಿತಿಯ ಅಧ್ಯಕ್ಷ ಅನೀಲಕುಮಾರ ಎ. ಸಾವಳಕರ, ಉಪಾಧ್ಯಕ್ಷ ಅರ್ಜುನ ಶಂಕರ ಸೊನಕವಡ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಡಿ. ಸಾವಳಕರ, ಜಂಟಿ ಕಾರ್ಯದರ್ಶಿ ಅಶೋಕ ಸಿದ್ರಾಮ ಖರಟಮಲ ಹಾಗೂ ಖಜಾಂಚಿ ದೇವೇಂದ್ರ ಭಾಗಣ್ಣ ಧಡಕೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಅತಿಥಿಗಳ ಸ್ವಾಗತ, ನೋಂದಣಿ, ಆಹಾರ ವಿತರಣೆ, ಪತ್ರಿಕಾ ಪ್ರಚಾರ ಹಾಗೂ ದೇಣಿಗೆ ಸಂಗ್ರಹ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಸಮಿತಿಯ ಸದಸ್ಯರಿಗೆ ವಹಿಸಲಾಗಿದೆ.
ಅನೀಲ ಸಾವಳಕರ - ೭೭೬೦೦೮೪೮೯೨, ಲಿಂಗೋಜಿ ಪಿ. ಗಜರೆ - ೯೯೪೫೧ ೬೩೫೭೭, ಸೂರ್ಯಕಾಂತ ಸಾವಳಕರ - ೯೯೮೬೬೧೫೨೬೨, ಮೋತಿಲಾಲ ಕಟಕೆ - ೯೩೪೨೬೬೬೩೧೭, ಅರ್ಜುನ ಸೊನಕವಡ - ೯೯೦೨೪೨೭೭೭೬ ಹೆಸರು ನೋಂದಣಿಗಾಗಿ ಇವರನ್ನು ಸಂಪರ್ಕಿಸಿ, ಟ್ರಸ್ಟ್ ವತಿಯಿಂದ ಸಮಾಜದ ಎಲ್ಲಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅರ್ಹ ವಧು-ವರರ ಹೆಸರುಗಳನ್ನು ನೋಂದಾಯಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.
