ಜೈವಿಕ ತಂತ್ರಜ್ಞಾನ ಸುಸ್ಥಿರ ಅಭಿವೃದ್ಧಿ ಗುರಿಗಳು' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಪ್ರೊ. ರಾಜಸಾಬ್ ಅಭಿಮತ
'ಜೈವಿಕ ತಂತ್ರಜ್ಞಾನ ಸುಸ್ಥಿರ ಅಭಿವೃದ್ಧಿ ಗುರಿಗಳು' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಪ್ರೊ. ರಾಜಸಾಬ್ ಅಭಿಮತ
ಮಾನವ ಜೀವಿಗಳ ಸುರಕ್ಷತೆ ಮತ್ತು ಸಾಧನೆಗೆ ಜೈವಿಕ ತಂತ್ರಜ್ಞಾನ ಕೊಡುಗೆ ಅಪಾರ
ಕಲಬುರಗಿ: ಮಾನವ ಜೀವಿಯ ಸುರಕ್ಷತೆ ಮತ್ತು ಸುಸ್ಥಿರ ಸಾಧನೆಗೆ ಜೈವಿಕ ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಸಸ್ಯ ಮತ್ತು ಪ್ರಾಣಿ ಸಂಪತ್ತು ಪುನಶ್ಚೇತನಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ರಾಜಾಸಾಬ್ ಎ.ಎಚ್. ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ನಿಮಿತ್ತ ಸಸ್ಯಶಾಸ್ತ್ರ ವಿಭಾಗದ ಬೋಸ್ ಹಾಲ್ನಲ್ಲಿ ಆಯೋಜಿಸಿದ 'ಜೈವಿಕ ತಂತ್ರಜ್ಞಾನ ಸುಸ್ಥಿರ ಅಭಿವೃದ್ಧಿ ಗುರಿಗಳು' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನದ ಹೊಸ ನಾವೀನ್ಯತೆ ಒಳಗೊಂಡ ಕ್ರಿಸಪರ್-ಡಿಎನ್ಎ ಟೆಕ್ನಾಲಜಿ ಮತ್ತು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡರೆ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಏಳಿಗೆ ಸಾಧ್ಯ. ಜೀವ ವಿಜ್ಞಾನ ವಿವಿಧ ಆಯಾಮಗಳ ವೈಜ್ಞಾನಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆ ಮೂಲಕ ಅಸಾಧ್ಯವನ್ನು ಸಾಧಿಸಬಹುದು. ವಿಶ್ವಸಂಸ್ಥೆಯ ಯೋಜಿಸಿರುವ 17 ಗುರಿಗಳನ್ನು ಪಾಲನೆಯಿಂದ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ನೀರು, ಪರಿಸರ ಸಂರಕ್ಷಣೆ ಜೊತೆಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜವಾಬ್ದಾರಿಯುತ ನಾಗರೀಕರನ್ನು ರೂಪಿಸುವ ಮೂಲಕ ದೇಶದ ಹಿತ ಕಾಪಾಡಬಹುದು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಮುಖ್ಯ ಅತಿಥಿಯಾಗಿ ಮಾತನಾಡಿ ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಹಬ್ಬ, ವಿದ್ವಾಂಸರ ಉಪನ್ಯಾಸ ಮತ್ತು ಹಳೆಯ ವಿದ್ಯಾರ್ಥಿಗಳು ಆಗಮಿಸಿರುವುದು ಸಂತಸ ಮೂಡಿಸಿದೆ. ವಿಜ್ಞಾನದ ಬೆಳೆದಂತೆ ಜೈವಿಕ ತಂತ್ರಜ್ಞಾನ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಕೃಷಿ ಕ್ರಾಂತಿ ನಂತರ ಕೃಷಿ, ಬೇಸಾಯ ಕ್ರಮಗಳಲ್ಲಿ ವೈಜ್ಞಾನಿಕತೆ ಬಂದಿದೆ. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಸಕಗಳ ಬಳಕೆಯಲ್ಲಿ ಸುಧಾರಣೆ ಆಗಿದೆ. ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ಷೇತ್ರಗಳು ಮತ್ತು ವಿವಿಧ ವಲಯಗಳು ಅಭಿವೃದ್ಧಿ ಕಂಡಿವೆ ಎಂದರು.
ವಿಚಾರ ಸಂಕಿರಣದ ಸ್ಮರಣಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಂಘಟನಾ ಕಾರ್ಯದರ್ಶಿ ಪ್ರೊ. ಎಂ. ಬಿ. ಸುಲೋಚನಾ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜಕ ಪ್ರೊ. ಕೆಳಮನಿ ಚಂದ್ರಕಾAತ್ ಅತಿಥಿ ಗಣ್ಯರನ್ನು ಪರಿಚಯಿಸಿದರು. ಕುಲಸಚಿವ ಪ್ರೊ.ರಮೇಶ ಲಂಡನಕರ್, ಉಪಸ್ಥಿತರಿದ್ದರು.
ದೇಶದ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಶೋಧಕರು, ವಿದ್ವಾಂಸರು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ಉದ್ದಿಮೆದಾರರು ಹಾಗೂ ಕೈಗಾರಿಕೋದ್ಯಮಿಗಳು, ಸಂಶೋಧನಾ ಪ್ರಭಂದಗಳನ್ನು ಮಂಡಿಸಿದರು. ಪ್ರೊ. ಜಿ. ಎಂ. ವಿದ್ಯಾಸಾಗರ್, ಪ್ರೊ. ಪ್ರಕಾಶ್ ಕರಿಯಜ್ಜನವರ್, ಪ್ರೊ. ವಿಜಯಕುಮಾರ್ ಮಲಶೆಟ್ಟಿ, ಪ್ರೊ. ಶಶಿಕಾಂತ್ ಮಜ್ಜಿಗೆ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ. ಲಿಂಗಪ್ಪ, ಪ್ರೊ. ಶಿವಣ್ಣ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದ್ದರು. ಪವಿತ್ರ ಪ್ರಾರ್ಥಿಸಿದರು. ತಭೀತ ತಳ್ಳೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ರಾಜೇಶ್ವರಿ ವಂದಿಸಿದರು.
: ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಆಹ್ವಾನಿಸಿರುವುದು ನನಗೆ ತವರು ಮನೆಗೆ ಬಂದಷ್ಟೇ ಸಂತಸವಾಗಿದೆ. ಇದೇ ವಿಭಾಗದ ಉಪನ್ಯಾಸಕ ವೃತ್ತಿಯಿಂದ ಕುಲಪತಿ ಹಾಗೂ ಕೆಎಸ್ಟಿಎ ಮುಖ್ಯಸ್ಥ ಸ್ಥಾನದವರೆಗೆ ವಿಭಾಗ ನನ್ನನ್ನು ಬೆಳೆಸಿದೆ. ವಿಭಾಗ ಸಾಕಷ್ಟು ಏಳಿಗೆ ಕಂಡಿದೆ. ನೂರಾರು ಕಾರ್ಯಕ್ರಮ, ಸಂಕಿರಣಗಳನ್ನು ಆಯೋಜಿಸಿರುವ ನೆನಪುಗಳು ನನಗೆ ಇಂದಿಗೂ ಹಸಿರಾಗಿವೆ. ವಿಶ್ವವಿದ್ಯಾಲಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಪ್ರೊ. ಎ. ಎಚ್. ರಾಜಾಸಾಬ್
ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
