ಬರಗಾಲ ಘೋಷಿಸಿ ವಿಶೇಷ ಅನುದಾನ ನೀಡಿ: ಅನಿತಾ ಪವನಕುಮಾರ ವಳಕೇರಿ ಮನವಿ

ಬರಗಾಲ ಘೋಷಿಸಿ ವಿಶೇಷ ಅನುದಾನ ನೀಡಿ: ಅನಿತಾ ಪವನಕುಮಾರ ವಳಕೇರಿ ಮನವಿ

ಬರಗಾಲ ಘೋಷಿಸಿ ವಿಶೇಷ ಅನುದಾನ ನೀಡಿ: ಅನಿತಾ ಪವನಕುಮಾರ ವಳಕೇರಿ ಮನವಿ 

ಕಲಬುರಗಿ, ಜು. 17: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಪ್ರದೇಶವನ್ನು 'ಬರಪೀಡಿತ ಪ್ರದೇಶ'ವೆಂದು ಘೋಷಿಸಿ, ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಮನವಿ ಮಾಡಿದ್ದಾರೆ.

 ಮಳೆಯ ಅಭಾವದಿಂದಾಗಿ ರೈತರು ಹಾಗೂ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಿತ್ತನೆ ಮಾಡಲಾದ ಬೆಳೆಗಳು ಮಳೆಯಿಲ್ಲದೆ ಒಣಗುವ ಹಂತಕ್ಕೆ ತಲುಪಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಹಿನ್ನಡೆ ಅನುಭವಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, .ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ತೀವ್ರ ಕೊರತೆಯುಂಟಾಗಿದೆ. ಇದರಿಂದಾಗಿ ಸಾಕಾಣಿಕೆದಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದು ಜನರು ಗುಳೆ ಹೊರಟಿದ್ದಾರೆ ಶಾಸಕರು, ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಕಷ್ಟವನ್ನು ಸರ್ಕಾರದ ಮುಂದಿಟ್ಟು ನಿವಾರಣೆ ಮಾಡಬೇಕು ಎಂದು ಹೇಳಿದರು.

ಪ್ರಮುಖ ಬೇಡಿಕೆಗಳು:

 ಬರಪೀಡಿತ ಪ್ರದೇಶ ಘೋಷಣೆ: ತಕ್ಷಣವೇ ಕಲ್ಯಾಣ ಕರ್ನಾಟಕ ಭಾಗವನ್ನು ಬರಪೀಡಿತ ಎಂದು ಘೋಷಿಸಬೇಕು.

 ವಿಶೇಷ ನೆರವು: ತೊಂದರೆಗೆ ಒಳಗಾದ ರೈತರಿಗೆ ಸೂಕ್ತ ಬೆಳೆ ಪರಿಹಾರ ಹಾಗೂ ಕೃಷಿ ಕಾರ್ಮಿಕರಿಗೆ ವಿಶೇಷ ಆರ್ಥಿಕ ನೆರವು ನೀಡಬೇಕು.

 ಮೂಲಸೌಕರ್ಯ: ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಗೋಶಾಲೆ, ಮೇವು ಬ್ಯಾಂಕ್ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು.

ಮುಂದಿನ ದಿನಗಳಲ್ಲಿಯೂ ಸಮರ್ಪಕ ಮಳೆಯಾಗದಿದ್ದಲ್ಲಿ, ಸರ್ಕಾರ ವೈಜ್ಞಾನಿಕ ವಿಧಾನದ ಮೂಲಕ ತಕ್ಷಣವೇ ಮೋಡಬಿತ್ತನೆ (Cloud Seeding) ಕಾರ್ಯವನ್ನು ಆರಂಭಿಸಬೇಕು. ಅನ್ನದಾತನ ಸಂಕಷ್ಟ ನಿವಾರಣೆಗೆ ಸರ್ಕಾರ ಯಾವುದೇ ವಿಳಂಬ ಧೋರಣೆ ಅನುಸರಿಸದೆ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು." ಎಂದು ಪತ್ರಿಕೆ ಪ್ರಕಟಿ ಮೂಲಕ ಸರಕಾರಕ್ಕೆ ಮನವಿ ಮಾಡಿದರು.