ಉಪನ್ಯಾಸಕರ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಶಶಿಲ್ ಜಿ ನಮೋಶಿ

ಉಪನ್ಯಾಸಕರ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಶಶಿಲ್ ಜಿ ನಮೋಶಿ

**ಉಪನ್ಯಾಸಕರ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ ಶಶೀಲ್ ಜಿ ನಮೋಶಿ*

 ಕಲಬುರ್ಗಿ:ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುವ *ಪದವಿ ಪೂರ್ವ ಉಪನ್ಯಾಸಕರಿಗೆ 9-10ನೇ ತರಗತಿಯ ಭೋದನೆಯನ್ನು ವಿಸ್ತರಿಸುವ ಕರುಡು ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯುವಂತೆ ಹಾಗೂ ಉಪನ್ಯಾಸಕರ ಇತರೆ ನ್ಯಾಯ ಸಮ್ಮತ ಬೇಡಿಕೆ ಈಡೇರಿಸುವಂತೆ* ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಭಾಗವಹಿಸಿ ಉಪನ್ಯಾಸಕರ ನ್ಯಾಯೋಚಿತ ಬೇಡಿಕೆಗಳಿಗೆ ಬೆಂಬಲ ಸೂಚಿಸಿದರು.

*ಈ ಕರಡು ಪತ್ರದಲ್ಲಿ ಪ್ರಕಟವಾಗಿರುವ ಪದವಿ ಪೂರ್ವ ಉಪನ್ಯಾಸಕರಿಗೆ 9-10ನೇ ತರಗತಿಯ ಭೋದನೆ ವಿಸ್ತರಿಸುವ ಅಧಿಸೂಚನೆಯನ್ನು ಉಗ್ರವಾಗಿ ಖಂಡಿಸಿದರು.* ಹಾಗೂ ಈ ಅಧಿಸೂಚನೆ ಯಾವುದೇ ಕಾರಣಕ್ಕೂ ನಡೆಯಬಾರದು *ಈ ಆದೇಶವನ್ನು ಶೇಕಡ 100% ಹಿಂಪಡೆಯಲು ಒತ್ತಾಯಿಸಿದರು*.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರುಗಳಾದ *ಶ್ರೀ ಪುಟ್ಟಣ್ಣ ರವರು ಶ್ರೀ ಎಸ್ ವ್ಹಿ ಸಂಕನೂರ ರವರು ಹಾಗೂ ಶ್ರೀ ವಿವೇಕಾನಂದ* ರವರು ಹಾಗೂ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪಧಾಧಿಕಾರಿಗಳು *ಉಪನ್ಯಾಸಕರ ವೃಂದದವರು* ಈ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು