ರವಿ.ಡಿ.ಚೆನ್ನಣ್ಣವರ ಜನ್ಮದಿನಾಚರಣೆ ಅಂಗವಾಗಿ ಪುಣ್ಯಾಶ್ರಮದಲ್ಲಿ ಸೇವಾ ಕಾರ್ಯಕ್ರಮ

ರವಿ.ಡಿ.ಚೆನ್ನಣ್ಣವರ ಜನ್ಮದಿನಾಚರಣೆ ಅಂಗವಾಗಿ ಪುಣ್ಯಾಶ್ರಮದಲ್ಲಿ ಸೇವಾ ಕಾರ್ಯಕ್ರಮ

ರವಿ.ಡಿ.ಚೆನ್ನಣ್ಣವರ ಜನ್ಮದಿನಾಚರಣೆ ಅಂಗವಾಗಿ ಪುಣ್ಯಾಶ್ರಮದಲ್ಲಿ ಸೇವಾ ಕಾರ್ಯಕ್ರಮ

ರವಿ ಡಿ ಚೆನ್ನಣ್ಣವರ ಅವರ 41ನೇ ಜನ್ಮದಿನಾಚರಣೆಯನ್ನು ಜುಲೈ 23, 2026ರಂದು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಕ್ತಿಭಾವ ಹಾಗೂ ಸೇವಾ ಚಟುವಟಿಕೆಗಳೊಂದಿಗೆ ಆಚರಿಸಲಾಗುತ್ತಿದೆ.

ಬೆಂಗಳೂರಿನಲ್ಲಿ DIGP ಆಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಕೇಡರ್‌ನ ಹಿರಿಯ IPS ಅಧಿಕಾರಿಗಳಾದ ರವಿ ಡಿ ಚೆನ್ನಣ್ಣವರರನ್ನು ಸ್ನೇಹಜೀವಿ, ಯುವಕರ ಪ್ರೇರಕಶಕ್ತಿ ಹಾಗೂ ಭರವಸೆಯ ಚೇತನ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ, ಕೇಕ್ ಕಟ್, HPS ನರಸಾಪೂರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಗೋಧಿಹುಗ್ಗಿ, ಪಲ್ಯ, ಅನ್ನ ಮತ್ತು ಸಾಂಬಾರು ಒಳಗೊಂಡ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ರವಿ ಡಿ ಚೆನ್ನಣ್ಣವರ ಅಭಿಮಾನಿ ಬಳಗ, ಗದಗ ಜಿಲ್ಲೆ ವತಿಯಿಂದ ಸರ್ವರಿಗೂ ಹಾರ್ದಿಕ ಸ್ವಾಗತ ಕೋರಲಾಗಿದೆ.

ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ.