ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ
ಕಲಬುರ್ಗಿ: ಜಿಲ್ಲಾ ಜನತಾ ದಳ (ಜೆಡಿಎಸ್) ಕಚೇರಿಯಲ್ಲಿ ವಿವಿಧ ತಾಲೂಕು, ಮತಕ್ಷೇತ್ರ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ಅಶೋಕ ಗುತ್ತೇದಾರ್ ಅವರ ಆದೇಶದಂತೆ ಈ ನೇಮಕಾತಿಗಳು ಜಾರಿಗೊಂಡವು. ಚಿAಚೋಳಿ ಮತಕ್ಷೇತ್ರದ ಅಧ್ಯಕ್ಷರಾಗಿ ರವಿಶಂಕರ ರೆಡ್ಡಿ ಮೂತಂಗಿ, ಕಾಳಗಿ ತಾಲೂಕು ಅಧ್ಯಕ್ಷರಾಗಿ ರೇವಣಸಿದ್ಧ ಪೂಜಾರಿ ಸೋಗುರ, ಜಿಲ್ಲಾ ಹಿಂದುಳಿದ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಪೂಜಾರಿ, ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷರಾಗಿ ಗಂಗಾಧರ ಪಂಚಾಲ, ಗ್ರಾಮೀಣ ಮತಕ್ಷೇತ್ರದ ಕಲ್ಬುರ್ಗಿ ತಾಲೂಕ ಅಧ್ಯಕ್ಷರಾಗಿ ಅನ್ವರ್ ಪಟೇಲ್ ಹಾಗೂ ಶಾಹಾಬಾದ್ ನಗರ ಅಧ್ಯಕ್ಷರಾಗಿ ಅಬ್ದುಲ್ ಘನಿ ಸಾಬೀರ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ, ಜಿಲ್ಲಾ ಕಾರ್ಯಧ್ಯಕ್ಷರಾದ ಶಾಮರಾವ್ ಸುರನ, ಸೈಯದ್ ಜಾಫರ್ ಹುಸೇನ್, ಜಿಲ್ಲಾ ಉಪಾಧ್ಯಕ್ಷರಾದ ಹುಬ್ಸಿಂಗ್ ಚವ್ಹಾಣ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರವೀಣ್ ಜಾದವ್, ನಗರ ಘಟಕ ಅಧ್ಯಕ್ಷರಾದ ದೇವೇಂದ್ರ ಹಸ್ನಾಪುರ, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ನಾಗೇಶ್ ಹೆಬ್ಬಾಳ, ಹಣಮಯ್ಯ ಗುತ್ತೇದಾರ, ಹಿರಿಯರಾದ ಬಾಬರ್ ಮುಸ್ತಾಫಾ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಮೊಮ್ಮದ್ ರಿಜ್ವಾನ್, ಹಿರಿಯರಾದ ಹನುಮಂತ್ ಸನಗುಂದಿ, ಹಿಂದುಳಿದ ಘಟಕದ ಅಧ್ಯಕ್ಷರಾದ ಮಾಣಿಕ್ ಪ್ರಭು, ಕ್ರೈಸ್ತ ಘಟಕದ ಅಧ್ಯಕ್ಷರಾದ ಯೇಸು ನಾಥ್, ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ಸಿದ್ದರಾಮ ಹೊದ್ಲೂರ, ಹಿರಿಯ ಮುಖಂಡರಾದ ಬಸವರಾಜ್ ಸಿದ್ಧರಾಮ್ಗೋಳ್, ಶ್ರೀಧರ್ ಕಲ್ಲೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
