ಸಾಂಪ್ರದಾಯಿಕ ಬಂಜಾರಾ ವೇಷಭೂಷಣದಲ್ಲಿ ಮನ್ ಕಿ ಬಾತ್ ವೀಕ್ಷಿಸಿದ ಶಾಸಕ ಪ್ರಭು ಚವ್ಹಾಣ
ಸಾಂಪ್ರದಾಯಿಕ ಬಂಜಾರಾ ವೇಷಭೂಷಣದಲ್ಲಿ ಮನ್ ಕಿ ಬಾತ್ ವೀಕ್ಷಿಸಿದ ಶಾಸಕ ಪ್ರಭು ಚವ್ಹಾಣ
ಕಮಲನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವದ 'ಮನ್ ಕಿ ಬಾತ್' ಕಾರ್ಯಕ್ರಮದ ನೇರ ಪ್ರಸಾರವನ್ನು ಭಾನುವಾರ ದೇಶದ 17 ಆಯ್ದ ಸ್ಥಳಗಳಲ್ಲಿ ಆಯೋಜಿಸಿದ್ದು, ಕರ್ನಾಟಕದಿಂದ ಬೀದರ ಜಿಲ್ಲೆಯ ಕಮಲನಗರದಲ್ಲಿ ನಡೆಯಿತು.
ಕಮಲನಗರದ ಎಂ.ಎ. ಬಿರಾದಾರ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ತಲೆಯ ಮೇಲೆ ವಿಶೇಷ ಪೇಟಾ, ಧೋತಿ ಹಾಗೂ ಬಂಜಾರಾ ಕುಸುರಿ ಕಲೆಯಿಂದ ತಯಾರಿಸಲಾದ ವಿಶೇಷ ಶಾಲು ಧರಿಸಿ, ತಮ್ಮ ಧರ್ಮಪತ್ನಿಯವರೊಂದಿಗೆ ಸಾಂಪ್ರದಾಯಿಕ ಬಂಜಾರಾ ಉಡುಗೆಯಲ್ಲಿ ಭಾಗವಹಿಸಿ ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಈ ಬಾರಿ ಮನ್ ಕಿ ಬಾತ್ ಕಾರ್ಯಕ್ರಮ ಕಮಲನಗರದಲ್ಲಿ ನಡೆದಿರುವುದು ಬಹಳಷ್ಟು ಸಂತೋಷವಾಗಿದೆ ಎಂದರು.
ಮನ್ ಕಿ ಬಾತ್ ಕಾರ್ಯಕ್ರಮವು ದೇಶದ ಜನರೊಂದಿಗೆ ಪ್ರಧಾನಮಂತ್ರಿಯವರು ನೇರವಾಗಿ ಸಂವಾದ ನಡೆಸುವ ವಿಶಿಷ್ಟ ವೇದಿಕೆಯಾಗಿದೆ. ದೇಶದ ಏಳಿಗೆ, ರೈತರ ಅಭಿವೃದ್ಧಿ, ಪ್ರಕೃತಿ ಸಂರಕ್ಷಣೆ, ಮಹಿಳಾ ಸಬಲೀಕರಣ, ಯುವಜನತೆಗೆ ಮಾರ್ಗದರ್ಶನ, ನವೋದ್ಯಮ, ಸ್ವಚ್ಛತೆ, ಆರೋಗ್ಯ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ಸಾಮಾಜಿಕ ಜಾಗೃತಿ ಸೇರಿದಂತೆ ಪ್ರತಿ ತಿಂಗಳು ವಿಭಿನ್ನ ವಿಷಯಗಳ ಕುರಿತು ದೇಶವಾಸಿಗಳೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಸಕಾರಾತ್ಮಕ ಚಿಂತನೆ ಮತ್ತು ರಾಷ್ಟ್ರಭಕ್ತಿಯ ಮನೋಭಾವ ಬೆಳೆಸುತ್ತಿರುವ ಏಕೈಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ಹೇಳಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 'ಏಕ್ ಪೇಡ್ ಮಾಂ ಕೆ ನಾಮ್' ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ಸು, ದೇಶದ ವಿವಿಧ ಭಾಗಗಳಲ್ಲಿ ಜನರು ನಡೆಸುತ್ತಿರುವ ಜಲ ಸಂರಕ್ಷಣೆ, ಸ್ವಚ್ಛತೆ, ಜನಸಾಮಾನ್ಯರ ಹೊಸ ಆವಿಷ್ಕಾರಗಳು, ಮಹಿಳಾ ಸಬಲೀಕರಣ, ಯುವಕರ ಸಾಧನೆಗಳು ಹಾಗೂ 'ವೋಕಲ್ ಫಾರ್ ಲೋಕಲ್' ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡುವ ಕುರಿತು ದೇಶದ ಜನತೆಗೆ ಕರೆ ನೀಡಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಈಶ್ವರಸಿಂಗ್ ಠಾಕೂರ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಜಿಲ್ಲಾ ಉಪಾಧ್ಯಕ್ಷ ಅರಹಂತ ಸಾವಳೆ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ, ಪೀರಪ್ಪ ಔರಾದೆ, ಮುಖಂಡರಾದ ರಾಜಶೇಖರ ನಾಗಮೂರ್ತಿ, ಬಾಬು ವಾಲಿ, ವಸಂತ ಬಿರಾದಾರ, ಬಸವರಾಜ ಪಾಟೀಲ, ಸತೀಷ ಪಾಟೀಲ, ಶಿವಾಜಿರಾವ ಪಾಟಿಲ ಮುಂಗನಾಳ, ಸುರೇಶ ಭೋಸ್ಲೆ, ಶಿವಾನಂದ ವಡ್ಡೆ, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಕೇರಬಾ ಪವಾರ, ದಯಾನಂದ ಘೂಳೆ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ರವೀಂದ್ರ ರೆಡ್ಡಿ, ಸಂಜು ಮುರ್ಕೆ, ಗಿರೀಶ ವಡೆಯಾರ್, ಶಿವು ಜುಲ್ಫೆ, ವೀರೂ ದಿಗ್ವಾಲ, ಸುಜಿತ ರಾಠೋಡ, ಪ್ರದೀಪ ಪವಾರ, ಪ್ರಭುರಾವ ಜೀರ್ಗೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮವನ್ನು ವೀಕ್ಷಿಸಿದರು.
