ತೃತಿಯ ಭಾಷಾ ಹಿಂದಿ ಶಿಕ್ಷಕರ ನಿಯೋಜನೆ ತಕ್ಷಣ ಕೈಬಿಡಲು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಮನವಿ
ತೃತಿಯ ಭಾಷಾ ಹಿಂದಿ ಶಿಕ್ಷಕರ ನಿಯೋಜನೆ ತಕ್ಷಣ ಕೈಬಿಡಲು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಮನವಿ
ಕಲಬುರ್ಗಿ: 2026 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಕೃತಕ ಬುದ್ದಿಮತ್ತೇ (AI) ವಿಷಯವನ್ನು ತೃತಿಯ ಭಾಷೆಯ ಬದಲಾಗಿ ಅಳವಡಿಸಿ ತೃತಿಯ ಭಾಷೆ ಭೋದಿಸುವ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ನಿಯೋಜನೆಗೊಳಿಸಲು ಸರ್ಕಾರ ಆದೇಶಿಸಿರುವದು ಅವೈಜ್ಞಾನಿಕ ನಿರ್ಧಾರವಾಗಿದೆ. ತೃತಿಯ ಭಾಷೆಯಾಗಿ ಹಿಂದಿ ವಿಷಯ ಬಹಳ ಮಹತ್ವದ ಸ್ಥಾನದಲ್ಲಿದೆ ದೇಶದಲ್ಲಿ ಎಲ್ಲಿಯೇ ಹೋದರು ಹಿಂದಿ ವ್ಯವಹಾರಿಕ ಭಾಷೆಯಾಗಿದ್ದು ಇದು ವಿದ್ಯಾರ್ಥಿಗಳು ಕಲಿಕೆಗೆ ಉಪಯುಕ್ತವಾಗಿದೆ. ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಅತಿ ಹೆಚ್ಚು ತೃತಿಯ ಭಾಷೆಯನ್ನಾಗಿ ಹಿಂದಿ ಭಾಷೆಯನ್ನು ತೆಗೆದುಕೊಂಡು ಅಧ್ಯಯನ ಮಾಡುತ್ತಾರೆ ಹೀಗಾಗಿ ಈ ಆದೇಶ ಹಿಂದಿ ಕಲಿಯುವ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗಲಿದೆ. ಇತ್ತಿಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೇ(AI) ವಿಷಯವು ಬಹಳ ಮಹತ್ವದ್ದಾಗಿದೆ. ಹೀಗಾಗಿ ಎರಡು ಭಾಷೆಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಿವೇಚನೆಗೆ ಬಿಡಲು ಸರ್ಕಾರ ಆದೇಶ ಮಾಡುವದನ್ನು ಬಿಟ್ಟು ಇತ್ತಿಚಿನ ದಿನಗಳಲ್ಲಿ ಶಿಕ್ಷಣದ ಆಮೂಲಾಗ್ರ ಬದಲಾವಣೆ ನೆಪದಲ್ಲಿ ಅವೈಜ್ಞಾನಿಕ ಏಕಪಕ್ಷೀಯ ಆದೇಶಗಳನ್ನು ಹೊರಡಿಸಿ ಕಾಂಗ್ರೇಸ್ ಸರ್ಕಾರ ರಾಜ್ಯದ ಶೈಕ್ಷಣಿಕ ಕ್ಷೇತ್ರವನ್ನು ಗೊಂದಲದ ಗೂಡನ್ನಾಗಿ ಮಾಡಿದೆ. ಕೂಡಲೆ ಈ ಆದೇಶ ಹಿಂಪಡೆದು ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕೆಂದು ಇಂದು ಖುದ್ದಾಗಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯ ರಶ್ಮೀ ಮೇಡಂ ಅವರಿಗೆ ಮನವಿ ಸಲ್ಲಿಸಿದರು ಕೂಡಲೆ ಈ ಆದೇಶ ಹಿಂಪಡೆಯದಿದ್ದರೆ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಹಿಂದಿ ಶಿಕ್ಷಕರ ಜೋತೆಗೂಡಿ ಹೋರಾಟಕ್ಕೂ ಇಳಿಯಲು ಸಿದ್ಧ ಎಂದು ತಿಳಿಸಿದ್ದಾರೆ.
