ನಾಲ್ಕು ಚಕ್ರ ತಂಡದ ನಿರಂತರ ಪ್ರಯತ್ನ... ಅನುಪಾಲನ ಕೇಂದ್ರದಲ್ಲಿ ಆಶ್ರಯ ಪಡೆದ ಮಾನಸಿಕ ಅಶ್ವಸ್ಥೆ ಅಂಬಿಕಾ....

ನಾಲ್ಕು ಚಕ್ರ ತಂಡದ ನಿರಂತರ ಪ್ರಯತ್ನ... ಅನುಪಾಲನ ಕೇಂದ್ರದಲ್ಲಿ ಆಶ್ರಯ ಪಡೆದ ಮಾನಸಿಕ ಅಶ್ವಸ್ಥೆ ಅಂಬಿಕಾ....

ನಾಲ್ಕು ಚಕ್ರ ತಂಡದ ನಿರಂತರ ಪ್ರಯತ್ನ... ಅನುಪಾಲನ ಕೇಂದ್ರದಲ್ಲಿ ಆಶ್ರಯ ಪಡೆದ ಮಾನಸಿಕ ಅಶ್ವಸ್ಥೆ ಅಂಬಿಕಾ....

ಕಲಬುರಗಿ. ಜು. 22- ನಗರದ ಪ್ರತಿಷ್ಠಿತ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಮಾಲಾ ಕಣ್ಣಿ ಹಾಗೂ ಸಮಾಜ ಚಿಂತಕ ಸುರೇಶ ಬಡಿಗೇರ ಅವರ ನಿರಂತರ ಪ್ರಯತ್ನದಿಂದ ಕಲ್ಬುರ್ಗಿ ನಗರದ ಬಸ್ ನಿಲ್ದಾಣದಲ್ಲಿ ಆಶ್ರಯವಿಲ್ಲದೆ ಅಲೆದಾಡುತ್ತಿರುವ ಬುದ್ಧಿಮಾಂದ್ಯ ಮಹಿಳೆ ಅಂಬಿಕಾ ಇವರನ್ನು ಕಲಬುರಗಿ ನಗರದ ಮಾಹಾದೇವಿ ವಿದ್ಯವರ್ಧಕ ಸಂಘ ನಡೆಸುತ್ತಿರುವ ಅನುಪಾಲನಾ ಕೇಂದ್ರದಲ್ಲಿ ಅಶ್ರಯ ಪಡೆಯುವಂತಾಗಿದೆ. 

 ಮಾನಸಿಕ ಒತ್ತಡದಿಂದ ಬುದ್ಧಿಮಾಂದ್ಯ ಆಗಿರುವ ಅಂಬಿಕಾ ಇವರು ಸುಮಾರು ದಿನಗಳಿಂದ ಬಸ್ಟ್ಯಾಂಡ್ ಆಸು ಪಾಸಿನಲ್ಲಿ ತಿರುಗಾಡುತ್ತಿರುವ ವಿಷಯವನ್ನು ಅರಿತು, ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ಶ್ವೇತಾ ಸುದರ್ಶನ ಹಾಗೂ ಜಿಲ್ಲಾ ಮಕ್ಕಳ ರಕ್ಷಣೆ ಇಲಾಖೆಯ ಕಾನೂನು ಸಲಹೆಗಾರರಾದ ಭರತೇಶ ಶೀಲವಂತ ಅವರನ್ನು ಸಂಪರ್ಕಿಸಿ ಬುದ್ಧಿಮಾಂದ್ಯ ಮಹಿಳೆಗೆ ಆಶ್ರಯ ನೀಡಲು ವಿನಂತಿಸಿದ್ದರು. ಇದನ್ನು ಅರಿತ ಇಲಾಖೆಯ ಅಧಿಕಾರಿಗಳು ಮತ್ತು ಸಂಘಟಕರು ಬಸ್ ನಿಲ್ದಾಣಕ್ಕೆ ಆಗಮಿಸಿ ಅಸ್ವಸ್ಥ ಗೊಂಡ ಬುದ್ಧಿಮಾಂದ್ಯ ಮಹಿಳೆಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಅವಳಿಗೆ ಆರೋಗ್ಯ ತಪಾಸಣೆ ಮಾಡಿ ಮಹಿಳಾ ನಿಲಯದ ಮಹಿಳೆಯರ ಸಹಾಯದಿಂದ ಅವಳಿಗೆ ಸ್ನಾನ ಮಾಡಿಸಿ ಕ್ಷೌರ ಮಾಡಿಸಲಾಗಿದ್ದಾರೆ. ನಂತರ ಮಾಲಾ ಕಣ್ಣಿ ಹಾಗೂ ಸುರೇಶ ಬಡಿಗೇರವರ ಮನವಿಯ ಮೇರೆಗೆ ಮತ್ತು ಸರ್ಕಾರದ ಆದೇಶದಂತೆ ಕಲಬುರ್ಗಿ ನಗರದ ಘಾಟಿಗೆ ಲೇಔಟ್ ನಲ್ಲಿ ಇರುವ ಜಿಲ್ಲಾ ಮಕ್ಕಳ ಅಂಗವಿಕಲ ಕಲ್ಯಾಣ ಅಧಿಕಾರಿಗಳ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮಹದೇವಿ ವಿದ್ಯಾ ವರ್ಧಕ ಸಂಘದ ಅನುಪಾಲನಾ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮತ್ತು ಹೊಸ ಬಟ್ಟೆಗಳನ್ನು ಕೊಡಲಾಯಿತು. ಬುದ್ಧಿಮಾಂದ್ಯ ಮಹಿಳೆಯನ್ನು ಸಂತೈಸಿ ಆರೈಕೆ ಮಾಡಿರುವ ಇಲಾಖೆಯ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಧನ್ಯವಾದಗಳು ಸಲ್ಲಿಸಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸಿರುವ ಭರತೇಶ ಶೀಲವಂತ, ಅನಂತರಾಜ, ಶ್ವೇತಾ ಸುದರ್ಶನ್, ಭೂಮಿಕಾ ಚವ್ಹಾಣ ಜಯಶ್ರೀ ಸಿನ್ನೂರಕರ್, ನಾಗಮ್ಮ, ಬಸಮ್ಮ, ಸಂಗೀತಾ, ಶೀಲಾ ಕಲಬುರಗಿ, ಸುಭಾಷ ಮೇತ್ರೆ, ಕಾರ್ಯ ಅನೇಕರು ಶ್ಲಾಘಸಿದ್ದಾರೆ.