ಹೊಲಸಮುದ್ರ ; ಗಾದಾ ಪೂಜೆ ಸಂಭ್ರಮ
ಹೊಲಸಮುದ್ರ ; ಗಾದಾ ಪೂಜೆ ಸಂಭ್ರಮ
ಕಮಲನಗರ: ಇಲ್ಲಿಯ ಸಮೀಪದ ಐತಿಹಾಸಿಕ ಗ್ರಾಮ ಹೊಂದಿರುವ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ಸಡಗರ-ಸಂಭ್ರಮದಿಂದ ಅಖಂಡ ಹರಿನಾಮ ಹಾಗೂ ಜ್ಞಾನೇಶ್ವರಿ ಪಾರಾಯಣ ಸಪ್ತಾಹದಲ್ಲಿ ಗಾಧಾ ಪೂಜೆ ಜರುಗಿತು.
ನೂರಾರು ವರ್ಷಗಳ ಇತಿಹಾಸವಿರುವ ಈ ಧಾರ್ಮಿಕ ಆಚರಣೆಯು ಇಡೀ ಗ್ರಾಮವನ್ನೇ ಭಕ್ತಿಯ ಸಾಗರದಲ್ಲಿ ತೆಲಾಡಿತು.
ಈ ಪರಂಪರೆಯನ್ನು ಇಂದಿಗೂ ಶ್ರೀ ಹರಿನಾಥ ಮಹಾರಾಜ ಕೃಪಾಶೀರ್ವಾದದಿಂದ, ಏಕನಾಥ ಮಹಾರಾಜ ಹಂಡೆ ಮಾರ್ಗದರ್ಶನದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅದ್ದೂರಿಯಾಗಿ ನಡೆಸಿಕೊಡು ಸತತ 7 ದಿನಗಳ ಕಾಲ ನಡೆಯುವ ನಿರಂತರ ಹರಿನಾಮ ಸ್ಮರಣೆಯು ಭಕ್ತಿ ಭಾವದಿಂದ ಅದ್ದೂರಿಯಾಗಿ ನಡೆಯುವುದರೊಂದಿಗೆ,ಇಂದಿಗೂ ಸಹ ಊರಲ್ಲಿ ಸತ್ಸಂಗ ಮಾತ್ರ ನಿಂತಿಲ್ಲ , ಊರಿನ ಗಣ್ಯ ವ್ಯಕ್ತಿಗಳ ಮೆರೆಗೆ ಇಂತಹ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುವುದರೊಂದಿಗೆ ಭಜನೆ ಕೀರ್ತನೆಗಳು ಪ್ರವಚನಗಳು ನಡೆದವು.
ಅಖಂಡ ಹರಿನಾಮ ಸಪ್ತಾಹ: ಏಳು ದಿನಗಳ ಕಾಲನಿರಂತರ ಹರಿನಾಮ ಸ್ಮರಣೆಯ ಮೂಲಕ ಗ್ರಾಮದಲ್ಲಿ ಆಧ್ಯಾತ್ಮಿಕ ಶಾಂತಿ ನೆಲೆಸುವಂತೆ ಪ್ರತಿ ದಿನ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಇಂದು ಮಧ್ಯಾಹ್ನ 12ಗಂಟೆಗೆ ಗಾಧಾಪೂಜೆ ಉತ್ಸವ ನಡೆಯಿತು.
ನಂತರದಲ್ಲಿ ಗ್ರಾಮಕ್ಕೆ ಆಗಮಿಸಿರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತು.
ಈ ಸಂದರ್ಭದಲ್ಲಿಊರಿನ ಎಲ್ಲಾ ಜನತೆ ಜಾತಿ-ಮತ ಭೇದ ಮರೆತು ಒಂದಾಗುವುದು ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಾರುವ ನಿಟ್ಟಿನಲ್ಲಿ ಹರಿನಾಮ ಚಿಂತನೆಗಳು ಮತ್ತು ಸಪ್ತಾಹಗಳು ಅತ್ಯಗತ್ಯವಾಗಿವೆ.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.
