ಆಳುವ ಸರಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ : ಸಂಘಟನೆಗಳ ಒಕ್ಕೂಟದಿಂದ ಆರೋಪ
ಬರಗಾಲ ಘೋಷಣೆಗೆ ಆಗ್ರಹಿಸಿ ಚಿಂಚೋಳಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಜರುಗಿತ್ತು.
ಆಳುವ ಸರಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ : ಸಂಘಟನೆಗಳ ಒಕ್ಕೂಟದಿಂದ ಆರೋಪ
ಚಿಂಚೋಳಿ : ರೈತ ಭೂಮಿಗೆ ಬೀತ್ತಿರುವ ಬೆಳೆಗಳ ಫಸಲು ಬಂದಾಗ ಮಾತ್ರ ರೈತರ ಆರ್ಥಿಕತೆ ನಿರ್ಧಾರವಾಗುತ್ತದೆ. ಆದರೆ ಈ ವರ್ಷ ಎಲ್ ನಿನೋ ಪರಿಣಾಮದಿಂದ ಮುಂಗಾರು ಬಿತ್ತನೆ ಬೆಳೆಗಳಾದ ಉದ್ದು, ಹೆಸರು, ಸೋಯಾ ಬೆಳೆಗಳು ಮಳೆಯ ಕೊರತೆಯಿಂದ ಮೊಳಕೆ ಒಡೆಯದೆ ನೆಲಕಚ್ಚಿವೆ. ಇದ್ದರಿಂದ ರೈತರ ಹಣ ಕೈಗೆ ಬಾರದಂತೆ ಆಗಿದ್ದರಿಂದ ರೈತ ಕುಟುಂಬಗಳು ಕಂಗಾಲಾಗಿವೆ. ಭೀಕರ ಬರಗಾಲಧ ಛಾಯೆ ಆವರಿಸಿದ್ದರೂ ಆಳುತ್ತಿರುವ ಸರಕಾರಗಳು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೃಹತ್ ಎತ್ತಿನ ಬಂಡಿಗಳು ಹಾಗೂ ಕುರಿಗಳು ಪ್ರದರ್ಶಿಸುವುದರೊಂದಿಗೆ ಸರಕಾರಗಳ ವಿರುದ್ಧ ಚಿಂಚೋಳಿಯ ರೈತ, ದಲಿತ, ಹಿಂದುಳಿದ ಹಾಗೂ ಕನ್ನಡಪರದ ವಿವಿಧ ಸಂಘಟನೆಗಳ ಒಕ್ಕೂಟದಿಂದ ಘೋಷಣೆಗಳು ಮೊಳಗಿಸಿ ಪ್ರತಿಭಟನೆ ಕೈಗೊಂಡು ಚಿಂಚೋಳಿ ತಹಸೀಲ್ದಾರರ ಮೂಲಕ ಕೇಂದ್ರ ಸರಕಾರದ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಮುಖಂಡ ಕೆ.ಎಂ.ಬಾರಿ, ಜೆಡಿಎಸ್ ಅಧ್ಯಕ್ಷ ರವಿಶಂಕರ ಮುತ್ತಂಗಿ, ರೈತ ಹೋರಾಟಗಾರ ಶರಣಬಸಪ್ಪ ಮಮ್ಮಶೆಟ್ಟಿ, ಸಂಘಟಕ ಮಾರುತಿ ಗಂಜಗಿರಿ, ವೀರಣ್ಣ ಗಂಗಾಣಿ, ಜಫಾರ್ ಖಾನ್ ಮಿರಿಯಾಣ ಅವರು ಮಾತನಾಡಿ, ಮಳೆಯ ಕೊರತೆಯಿಂದಾಗಿ ರೈತರು ಮುಂಗಾರು ಬಿತ್ತನೆಯ ಬೆಳೆಗಳು ಬೆಳೆಯದೇ ಕಂಗಾಲಾಗಿದ್ದಾನೆ. ಭಿಂಕರ ಬರಗಾಲದ ಛಾಯೆ ಆವರಿಸಿಕೊಂಡಿದೆ. ಆದರೆ ಆಳುವ ಸರಕಾರಗಳು ಮುಂಜಾಗೃತ ಕ್ರಮಗಳು ಕೈಗೊಂಡು ರೈತರ ಸಮಸ್ಯೆಗಳಿಗೆ ಮನ್ನಣೆ ನೀಡದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆಂದು ಆರೋಪಿಸಿದರು.
ರೈತರಿಂದಲೇ ಸರಕಾರಗಳು ಆಳ್ವಿಕೆಗೆ ಬಂದಿವೆ. ಆದರೆ ಅವರ ರೈತರಿಗೆ ಸಮಸ್ಯೆಗಳು ಎದುರಾದಾಗ ಅವುಗಳಿಗೆ ಸ್ಪಂದಿಸದೆ ದಿಲ್ಲಿಯಲ್ಲಿ ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೂಡಲೇ ರೈತರ ಬದುಕಿನ ಜೊತೆಗೆ ಆತವಾಡದೆ ಅವರ ಸಮಸ್ಯೆಗಳನ್ನು ಅರೆತು ಬರಗಾಲ ಘೋಷಣೆಗೆ ಕ್ರಮಕೈಗೊಳ್ಳಲು ಮುಂದಾಗಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸಾಲ ಮನ್ನಾಮಾಡಿ, ಸಾಲದ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಬೇಕು ಹಾಗೂ ಮುಂಗಾರು ಮತ್ತು ಹಿಂಗಾರು ಬೆಳೆಗಳು ಮರು ಬಿತ್ತನೆಗೆ ಕೈಗೊಳಲು ಬೀಜ ಮತ್ತು ರಸಗೊಬ್ಬರವನ್ನು ರೈತರಿಗೆ ಉಚಿವಾಗಿ ಕೊಡಲು ಸರಕಾರಗಳು ಕ್ರಮವಹಿಸಬೇಕೆಂದು ಸಂಘಟನೆಗಳ ಒಕ್ಕೂಟ ಆಗ್ರಹಿಸಿ, 15 ಅಂಶಗಳ ಬೇಡಿಕೆ ಈಡೇರಿಕೆಗಳ ಮನವಿ ಪತ್ರವನ್ನು ಚಿಂಚೋಳಿ ತಹಸೀಲ್ದಾರರ ಮೂಲಕ ಕೇಂದ್ರ ಸರಕಾರದ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಹಣಮಂತ ಪೂಜಾರಿ, ವೀಠಲ್ ಕುಸಾಳೆ, ಗೋಪಾಲ್ ಪೋಲಕಪಳ್ಳಿ, ಚೇತನ ಸುಲೇಪೇಟ, ಗೋಪಾಲ ರಾಂಪುರೆ ಸೇರಿ ರೈತರು, ಮಹಿಳೆಯರು ಇದ್ದರು.
