ಮಾನವೀಯ ಮೌಲ್ಯ ಭಿತ್ತಿದ ಕನಕದಾಸರು - ಮಾಳಪ್ಪ ಪೂಜಾರಿ.

ಮಾನವೀಯ ಮೌಲ್ಯ ಭಿತ್ತಿದ ಕನಕದಾಸರು - ಮಾಳಪ್ಪ ಪೂಜಾರಿ.

ಮಾನವೀಯ ಮೌಲ್ಯ ಭಿತ್ತಿದ ಕನಕದಾಸರು - ಮಾಳಪ್ಪ ಪೂಜಾರಿ.

ಯಡ್ರಾಮಿ : ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆ,ಕರುಣೆ, ಸಹೋದರತೆ ಜೊತೆಗೆ ಮಾನವೀಯ ಮೌಲ್ಯಗಳು ಬಿತ್ತಿದ ಶ್ರೇಷ್ಠ ದಾರ್ಶನಿಕ ಕನಕದಾಸರು ಎಂದು ನರೇಂದ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಾಳಪ್ಪ ದೇಸಾಯಿ ಹೇಳಿದರು.

ತಾಲೂಕಿನ ಕದಂಬ ಪಿ.ಯು. ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕನಕದಾಸರ ಮೌಲ್ಯಯುತ ಕೃತಿಗಳನ್ನು ಓದಿ ಉತ್ತಮವಾದ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳು ಹಾಗೂ ಸಾಹಿತಿಗಳಾದ ಮಲ್ಲಿಕಾರ್ಜುನ ಆಲಮೇಲ ಮಾತನಾಡಿ, ಕನಕದಾಸರು ಸರ್ವಧರ್ಮ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಕುಲಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯನ್ನು ಜಗತ್ಪ್ರಸಿದ್ಧಗೊಳಿಸಿದ ಮಹಾನ್ ಶ್ರೇಷ್ಠ ಸಂತ ಎಂದು ಬಣ್ಣಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರ ಗುಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಅಂತರಂಗ ಶುದ್ಧಿಗೊಳಿಸಿ ಭಗವಂತನಿಗೆ ಶರಣಾಗುವುದು ಕನಕದಾಸರ ಮುಖ್ಯ ಧ್ಯೇಯ ಮತ್ತು ಉದ್ದೇಶವಾಗಿತ್ತು ಅದರಿಂದ ಅವರ ತತ್ವ ಮತ್ತು ಸತ್ವ ಪ್ರತಿಯೊಬ್ಬರು ಅರ್ಥೈಸಿಕೊಳ್ಳುವುದು ಅವಶ್ಯಕತೆ ಇದೆ ಎಂದು ನುಡಿದರು.

ಈ ಕಾರ್ಯಕ್ರಮದ ವೇದಿಕೆ ಮೇಲೆ ಕಲಬುರ್ಗಿಯ ದೂರದರ್ಶನ ಕೇಂದ್ರದ ವರದಿಗಾರರಾದ ಮನೋಹರ್ ಪೂಜಾರಿ,ಉಪನ್ಯಾಸಕಿ ಭಾಗ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ಐಶ್ವರ್ಯ ಪ್ರಾರ್ಥಿಸಿದರು,ಕಾಶಿನಾಥ್ ಸ್ವಾಗತಿಸಿದರು ಕಲಾಣಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಥಮಿಕ ನುಡಿಗಳಾಡಿದರು,ಇಬ್ರಾಹಿಂ ನಿರೂಪಿಸಿ ವಂದಿಸಿದರು.