ಕಾಂಗ್ರಯೆನ್ಸ್ ಆಫ್ ಗಾಂಧೀಸ್ ಫಿಲೋಸೋಫಿ & ಲೀಡರ್ಷಿಪ್ ಇನ್ ಕಂಟೆಂಪೋರರಿ ಇಂಡಿಯಾ ಪುಸ್ತಕ ಬಿಡುಗಡೆ

ಕಾಂಗ್ರಯೆನ್ಸ್ ಆಫ್ ಗಾಂಧೀಸ್ ಫಿಲೋಸೋಫಿ & ಲೀಡರ್ಷಿಪ್ ಇನ್ ಕಂಟೆಂಪೋರರಿ ಇಂಡಿಯಾ ಪುಸ್ತಕ ಬಿಡುಗಡೆ
ಬೆಂಗಳೂರಿನ ಎಂ ಎಸ್ ರಾಮಯ್ಯ ಫೌಂಡೇಶನ್ ವತಿಯಿಂದ ಡಾ ಎಂ ಆರ್ ಪಟ್ಟಾಭಿರಾಮ್ ರವರ ಡಾಕ್ಟರೇಟ್ ಪ್ರಬಂಧ 'ಕಾಂಗ್ರಯೆನ್ಸ್ ಆಫ್ ಗಾಂಧೀಸ್ ಫಿಲೋಸೋಫಿ & ಲೀಡರ್ಷಿಪ್ ಇನ್ ಕಂಟೆಂಪೋರರಿ ಇಂಡಿಯಾ ' ಕೃತಿಯು ಭಾರತೀಯ ವಿಜ್ಞಾನ ಸಂಸ್ಥೆಯ ಸತೀಶ ಧವನ್ ಆಡಿಟೋರಿಯಂನಲ್ಲಿ ಲೋಕಾರ್ಪಣೆ ಗೊಂಡಿತು.
ಕರ್ನಾಟಕ ರಾಜ್ಯ ಕಾನೂನು ವಿವಿಯ ಕುಲಪತಿ ಡಾ ಸಿ ಬಸವರಾಜು, ಗೋಕುಲ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ ಎಂ ಆರ್ ಸೀತಾರಾಮ್, ಬೆಂಗಳೂರು ವಿವಿಯ ಕುಲಪತಿ ಡಾ ಎಂ ಜಯಕರ ಶೆಟ್ಟಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ ವೂಡೆ ಪಿ ಕೃಷ್ಣ ಹಾಗು ಪ್ರಕಾಶಕರಾದ ಪೀಯರ್ಸನ್ ಇಂಡಿಯಾದ ವಿನಯ್ ಕೆ ಸ್ವಾಮಿ ಉಪಸ್ಥಿತರಿದ್ದರು.
ಮಹಾತ್ಮ ಗಾಂಧಿಯವರ ಜೀವನವನ್ನು ಚರಿತ್ರೆಯ ರೂಪದಲ್ಲಿ ಒಕ್ಕಣಿಸುವುದು ಈ ಕೃತಿಯ ಉದ್ದೇಶವಲ್ಲ. ಸಂಕ್ಷೇಪವಾಗಿಯಾದರೂ ಅದನ್ನು ಹೇಳುವುದು ಇಲ್ಲಿ ಅನಾವಶ್ಯಕ. ಅದರ ರೂಪುರೇಖೆಗಳು ಮಾತ್ರವಲ್ಲ, ವಿವರಗಳೂ ಕೂಡ ಈಗಾಗಲೆ ತಕ್ಕಮಟ್ಟಿಗೆ ಎಲ್ಲರಿಗೂ ತಿಳಿದಿದೆ. ಅವರ ಜೀವನಪ್ರತಿಮೆಯನ್ನು ವಿಶೇಷವಾಗಿ ಭರತ ಖಂಡಕ್ಕೆ ಅನ್ವಯಿಸುವಂತೆ ಜಗಜ್ಜೀವನ ರಂಗಭಿತ್ತಿಯಲ್ಲಿಟ್ಟು ಸಮೀಕ್ಷಿಸುವುದೇ ನಮ್ಮ ಪ್ರಕೃತಸಂಕಲ್ಪ.
ಗಾಂಧಿಯವರ ಜೀವನವನ್ನು ಆ ದೃಷ್ಟಿಯಿಂದ ಅವಲೋಕಿಸಿದರೆ ದೇಶಭಕ್ತಿ, ಸಮಾಜಸೇವೆ, ಸ್ವಾತಂತ್ಯ್ರಸಂಪಾದನೆ. ಹರಿಜನೋದ್ಧಾರ, ಸ್ವದೇಶಿ, ಖಾದಿ, ಇತ್ಯಾದಿ ರಾಜಕೀಯ ಸಾಮಾಜಿಕ ಆರ್ಥಿಕ ಭೂಮಿಕೆಗಳಿಗೆ ತುರೀಯವಾದ ಶಾಶ್ವತ ತತ್ತ್ವವೊಂದು ಬೋಧೆಯಾಗುತ್ತದೆ. ಆ ತತ್ತ್ವವೆ ಪೂರ್ಣ ಮನುಷ್ಯತ್ವದ ಸಂಪೂರ್ಣ ವಿಕಾಸಕ್ಕೆ
ಕಾರಣವೆಂದೂ ಎಂದು ಕೃತಿಕಾರರು ತಿಳಿಸಿದ್ದಾರೆ.