ಸಚಿವ ಪ್ರಿಯಾಂಕ್ ಖಗೇ ಅವರಿಗೆ ಮಲ್ಲಿಕಾರ್ಜುನ ನೀಲೂರ ಅವರಿಂದ ಅಭಿನಂದನೆಗಳು

ಸಚಿವ ಪ್ರಿಯಾಂಕ್ ಖಗೇ ಅವರಿಗೆ  ಮಲ್ಲಿಕಾರ್ಜುನ ನೀಲೂರ ಅವರಿಂದ ಅಭಿನಂದನೆಗಳು

ಸಚಿವ ಪ್ರಿಯಾಂಕ್ ಖಗೇ ಅವರಿಗೆ ಮಲ್ಲಿಕಾರ್ಜುನ ನೀಲೂರ ಅವರಿಂದ ಅಭಿನಂದನೆಗಳು

ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ನಡೆಯುವಂತೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖಗೇ ಅವರಿಗೆ ತುಂಬು ಹೃದಯ ಅಭಿನಂದನೆಗಳುನ್ನು ಸಲ್ಲಿಸುತ್ತೇನೆ ಎಂದು ಜಿಲ್ಲಾ ಕಾಂಗ್ರೇಸ್ ಸಮಿತಿ ಎಸ್.ಸಿ. ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನೀಲೂರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸುತ್ತೇನೆ. ಆದರೆ ಈ ಹಿಂದೆ ಬೆಂಗಳೂರು ಮತ್ತು ಬೆಳಗಾಂವದಲ್ಲಿ ಸಚಿವ ಸಂಪುಟ ನಡೆಯುತ್ತಿದ್ದು, ಆದರೆ ಈಗ ಉಸ್ತುವಾರಿಗಳು ನಮ್ಮ ಕಲಬುರಗಿಯಲ್ಲಿಯೇ ನಡೆಯುವಂತೆ ಮಾಡಿದ್ದು, ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತುಂಬಾ ಅನುಕೂಲವಾಗುತ್ತದೆ. ಅದರಂತೆ ಅವರ ತಂದೆಯವರಾಗಿರುವ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆಜೀ ರವರು ಎಲ್ಲಾ ಖಾತೆ ಸಚಿವರಾಗಿದ್ಧಾಗ ಕಲಬುರಗಿ ಜಿಲ್ಲೆಗೆ ವಿಶೇಷವಾಗಿ ಅಭಿವೃದ್ಧಿ ಮಾಡಲು ಹಗಲು-ರಾತ್ರಿ ಎನ್ನದೇ ಶ್ರಮಪಟ್ಟಿದ್ದಾರೆ. ಮತ್ತು ಕಲಬುರಗಿ ಜಿಲ್ಲೆಗೆ ಹಲವಾರು ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದೇ ರೀತಿಯಾಗಿ ನಮ್ಮ ನಾಯಕರಾಗಿರುವ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಜೀ ರವರು 1) ಐಟಿಬಿಟಿ, 2) ಸಮಾಜ ಕಲ್ಯಾಣ, 3) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹೀಗೆ 3ನೇ ಬಾರಿ ಸಚಿವರಾಗಿ ಅವರ ತಂದೆಯವರು ನಡೆದು ಬಂದ ದಾರಿಯಲ್ಲಿ ಸಾಗುತ್ತಾ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ. ಆದ್ದರಿಂದ ಸಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ವಿಮೋಚನೆಯ ಅಂಗವಾಗಿ ಕಲಬುರಗಿ ಜಿಲ್ಲೆಗೆ ಸಚಿವ ಸಂಪುಟಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು, ಮತ್ತು ಎಲ್ಲಾ ಸಚಿವರಿಗೆ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅಭಿಯನಂದನೆಗಳು ಸಲ್ಲಿಸಿದ್ದಾರೆ.