ಜೈ ಕರುನಾಡು ಜನಪರ ಸಮಿತಿ ಸಂಘಟನೆ ಉದ್ಘಾಟನೆ, ಕರ್ನಾಟಕ ರಾಜೋತ್ಸವ, ಶರಣರ ಮಹಾ ಪುರುಷರ ಜಯಂತೋತ್ಸವ ಮತ್ತು ಪ್ರಶಸ್ತಿ ಪ್ರಧಾನ

ಕಲಬುರಗಿ ನಗರದ ಕನ್ನಡ ಭವನದಲ್ಲಿ ಜೈ ಕರುನಾಡು ಜನಪರ ಸಮಿತಿ ಸಂಘಟನೆ ಉದ್ಘಾಟನೆ, ಹಾಗೂ ಕರ್ನಾಟಕ ರಾಜೋತ್ಸವ ಹಾಗೂ ಶರಣರ ಮಹಾ ಪುರುಷರ ಜಯಂತೋತ್ಸವ ಮತ್ತು ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಜೈ ಕರುನಾಡು ಜನಪರ ಸಮಿತಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಹೆಚ್. ಜಮಾದಾರ ನೇತೃತ್ವದಲ್ಲಿ ವಿವಿಧ ಸಾದನೆಗೈದ 29 ಸಾಧಕರಿಗೆ ಜನ ಸೇವಾ ರತ್ನಪ್ರಶಸ್ತಿ ಹಾಗೂ 70 ಸಾಧಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. 

ಧರ್ಮರತ್ನ ಪೂಜ್ಯ ಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಜಿಗಳು ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿ ಎಸ್., ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ದಕ್ಷಿಣ ಮತಕ್ಷೇತ್ರದ ಕಾಂಗ್ರೇಸ್ ಮುಖಂಡ ನೀಲಕಂಠ ಮೂಲಗೆ, ಮಣ್ಣುರ ಆಸ್ಪತ್ರೆ ನಿರ್ದೇಶಕ ಫಾರೂಕ್ ಅಹ್ಮದ ಮಣ್ಣೂರ, ರಾಜ್ಯಾ ಉಪಾಧ್ಯಕ್ಷ ಶಿವುಕುಮಾರ ಅವರಳ್ಳಿ, ನ್ಯಾಯವಾದಿ ಮಹಾಂತೆಶ ಕೌಲಗಿ, ಎಸ್.ಕೆ.ಬಿರಾದಾರ, ಡಾ.ಎಸ್.ಕೆ.ಮೇಲಕಾರ್ ಸೇರಿದಂತೆ ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಇದ್ದರು.