ಕ್ಯಾನ್ಸರ್ ತಜ್ಞೆ ಡಾ ವಿಜಯಲಕ್ಷ್ಮಿ ದೇಶಮಾನ್ಯೆ ಯವರಿಗೆ ಪದ್ಮಶ್ರೀ ಪ್ರಶಸ್ತಿ : ಡಾ ಅಂಬಾರಾಯ ಅಷ್ಠಗಿ ಹರ್ಷ
ಕ್ಯಾನ್ಸರ್ ತಜ್ಞೆ ಡಾ ವಿಜಯಲಕ್ಷ್ಮಿ ದೇಶಮಾನ್ಯೆ ಯವರಿಗೆ ಪದ್ಮಶ್ರೀ ಪ್ರಶಸ್ತಿ : ಡಾ ಅಂಬಾರಾಯ ಅಷ್ಠಗಿ ಹರ್ಷ
ಕಲಬುರಗಿ : ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನ್ಯೆ ಯವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಈ ಭಾಗಕ್ಕೆ ಹೆಮ್ಮೆಯ ಸಂಗತಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಡ ದಲಿತ ಕುಟುಂಬದಿಂದ ಬಂದಿರುವ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಕ್ಯಾನ್ಸರ್ ಸರ್ಜನ್ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಎಲ್ಲರಿಗೂ ಮಾದರಿಯಾಗಿದೆ .
ರೋಗಿಗಳ ಸೇವೆಯೇ ಪರಮ ಧ್ಯೇಯವಾಗಿಸಿಕೊಂಡಿರುವ ಡಾ.ವಿಜಯಲಕ್ಷ್ಮಿ, ದಿನದ ಬಹುತೇಕ ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು ಎಂಬುದು ಅವರ ಮಾನವೀಯ ಗುಣಗಳನ್ನು ಹಾಗೂ ಕರ್ತವ್ಯ ಪ್ರಜ್ಞೆ ಸೂಚಿಸುತ್ತದೆ.
ಅವರಿಗೆ ಲಭಿಸಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೇಶ - ವಿದೇಶಗಳಲ್ಲೂ ಅವರ ಸಾಧನೆ ಗುರುತರವಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿರುವ ಡಾ. ವಿಜಯಲಕ್ಷ್ಮಿ,ಅವರ ಅನನ್ಯ ಸೇವೆಯನ್ನು ಪರಿಗಣಿಸಿ ಈ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಲು ಸಹಕರಿಸಿದ ದೇಶದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ, ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಡಾ ಅಂಬಾರಾಯ ಅಷ್ಠಗಿ ಅಭಿನಂದನೆ ಸಲ್ಲಿಸಿದ್ದಾರೆ.