ಮಾಜಿ ಸೈನಿಕರಿಗೆ ಲೋಕೋಪಯೋಗಿ ನೌಕರರ ಸಂಘ ಕಲಬುರ್ಗಿ ಜಿಲ್ಲಾ ಘಟಕದಿಂದ ಸನ್ಮಾನ
ಮಾಜಿ ಸೈನಿಕರಿಗೆ ಲೋಕೋಪಯೋಗಿ ನೌಕರರ ಸಂಘ ಕಲಬುರ್ಗಿ ಜಿಲ್ಲಾ ಘಟಕದಿಂದ ಸನ್ಮಾನ
ಕಲಬುರ್ಗಿ : ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರ್ಗಿಯ ವತಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ, ದೇಶಸೇವೆಯಲ್ಲಿ ತೊಡಗಿ ನಿವೃತ್ತರಾದ ಸೈನಿಕರನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಶ್ರೀ ರಾಮರಾವ್ ರಾಥೋಡ್,ಶ್ರೀ ಶಾಮರಾವ್ ಸನಗುಂದಿ, ಶಿವಪುತ್ರಪ್ಪ ನಂದಿಕೋಲ್,ಶ್ರೀ ನಾಗೇಂದ್ರಪ್ಪ ಸಾಗರ್ ಹಾಗೂ ಶ್ರೀ ಸಿದ್ದಲಿಂಗಪ್ಪ ಮಲಶೆಟ್ಟಿ,ಅಧ್ಯಕ್ಷರು – ಮಾಜಿ ಸೈನಿಕರ ಸಂಘ, ಆಳಂದ್ ಇವರನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರ್ಗಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ದೇಶದ ಸ್ವಾತಂತ್ರ್ಯ ಮತ್ತು ಭದ್ರತೆಗಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ ಹುತಾತ್ಮರ ಸ್ಮರಣೆ ಸದಾ ಪ್ರೇರಣೆಯ ಮೂಲವಾಗಿದ್ದು, ಸೈನಿಕರ ಸೇವೆ ಅಪಾರವಾದದ್ದು ಎಂದರು. ಸಮಾಜವು ಸೈನಿಕರು ಮತ್ತು ನಿವೃತ್ತ ಸೈನಿಕರ ತ್ಯಾಗವನ್ನು ಸದಾ ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದಖಾನ, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೆಂದ್ರ, ಸಹ ಕಾರ್ಯದರ್ಶಿಗಳಾದ ಶಶಿನಾಥ ಸೊನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕಿಶನಾ ಸಿಂಗ, ಸಂಘದ ಸಲಹೆಗಾರರಾದ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ ಮಜಾರ, ಸೈಯದ್ ಬಾಸು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು ಇದ್ದರು.
