ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಕಾರ್ಯಕ್ರಮ.

ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಕಾರ್ಯಕ್ರಮ.

ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಕಾರ್ಯಕ್ರಮ

ಕಲಬುರಗಿ-29-ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣ ಕಚೇರಿಯ ಅಡಿಯಲ್ಲಿ ವಿಶೇಷ ಚೇತನರ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಯೋಜನೆ ಅಡಿಯಲ್ಲಿ 14 ವರ್ಷ ಹಾಗೂ 17 ವರ್ಷದ ಒಳಗಿನ ವಿಕಲಚೇತನ ಮಕ್ಕಳಿಗಾಗಿ ವಿವಿಧ ನ್ಯೂನ್ಯತೆವಾರು, ಕೆಲವು ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ 14 ವರ್ಷದ ಒಳಗಿನ ವಿಶೇಷ ಚೇತನರ ಹೆಣ್ಣು ಮಕ್ಕಳ ಅಲ್ಪ ದೃಷ್ಟಿ ದೋಷ ವಿಭಾಗದಲ್ಲಿ ಬಲ್ಲೆ ಎಸೆತ ಮತ್ತು ಗುಂಡು ಎಸೆತ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಕಲಬುರಗಿ ದಕ್ಷಿಣ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕೋಟನೂರ್ ಶಾಲೆಯ ಕುಮಾರಿ ಕೃತಿಕಾ ವಿದ್ಯಾರ್ಥಿನಿಯು ಭಾಗವಹಿಸಿ ಗೆಲುವನ್ನು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ನಾಯ್ಕರ್ ವೀಣಾ, ದೈಹಿಕ ಶಿಕ್ಷಣಾಧಿಕಾರಿಗಳಾದ ಬಸವರಾಜ ರಟಕಲ, ಬಿ ಐ ಆರ್ ಟಿ ಗಳಾದ ಅಪ್ಪಾಸಾಹೇಬ ಪಾಟಿಲ, ಸಿದ್ದರಾಮ ರಾಜಮಾನೆ, ಮಂಜುಳಾದೇವಿ ಪಾಟೀಲ, ಸುಮನ್ ರಾಠೋಡ, ಪ್ರಭಾರಿ ಮುಖ್ಯ ಗುರುಗಳಾದ ಜಯಲಕ್ಷ್ಮಿ ಚೌವ್ವಾಣ, ದೈಹಿಕ ಶಿಕ್ಷಕಿ ಅನುರಾಧ, ಶಾಲಾ ಶಿಕ್ಷಕರ ಸಿಬ್ಬಂದಿ ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ, ರಾಜ್ಯಮಟ್ಟದಲ್ಲಿ ಭಾಗವಹಿಸಿ ಜಯಗಳಿಸಲೆಂದು ಹಾರೈಸಿ ಅಭಿನಂದಿಸಿದ್ದಾರೆ.