ಜೇವರ್ಗಿಯ ಗಂವ್ಹಾರ್ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಮನವಿ
ಜೇವರ್ಗಿಯ ಗಂವ್ಹಾರ್ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಮನವಿ
ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರ್ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧ್ಯಕ್ಷ ಮತ್ತು ಪಂಚಾಯಿತಿಗೆ ಸಂಬAದಪಟ್ಟ ಅಭಿಯಂತರರು ಇವರನ್ನು ಸದಸ್ಯತ್ವ ರದ್ದು ಹಾಗೂ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವೀರ ಕನ್ನಡಿಗರ ಸೇನೆ ವತಿಯಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯ್ಕೋಡಿ ಗಂವ್ಹಾರ ತಿಳಿಸಿದರು.
ಗಂವ್ಹಾರ ಗ್ರಾಮ ಪಂಚಾಯತನಲ್ಲಿ ೧೫ನೇ ಹಣಕಾಸು, ಕರವಸೂಲಿ, ಹಾಗೂ ಅಂಗವಿಕಲರ ಸಹಾಯಧನ ಇವುಗಳಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ ಪಿ.ಡಿ.ಒ. ಅಧ್ಯಕ್ಷರು, ಮತ್ತು ಅಭಿಯಂತರರು ಈ ಮೂವರಲ್ಲಿ ಈಗಾಗಲೆ ಪಿ.ಡಿ.ಒ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಇದಕ್ಕೆ ನಮ್ಮ ಸ್ವಾಗತ. ಆದರೆ ಲೂಟಿ ಕೊರರಲ್ಲಿ ಇನ್ನು ಇಬ್ಬರಾದ ಅಧ್ಯಕ್ಷರಾದ ಶ್ರೀ ಮತಿ ಆರತಿ ಗಂಡ ಧರ್ಮು ಪವಾರ ಹಾಗೂ ಅಭಿಯಂತರರಾದ ದೆವಣ್ಣ ಕಟ್ಟಿ ಇವರನ್ನು ಕೂಡ ತಕ್ಷಣವೆ ಅಧ್ಯಕ್ಷರ ಸದಸ್ಯತ್ವವನ್ನು ರದ್ದು ಪಡಿಸಿ ಮತ್ತು ಅಭಿಯಂತರರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಸಂಘವು ಮನವಿಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಇನ್ನೊಂದು ವಿಷಯವೆನೆಂದರೆ ಈ ಅವ್ಯವಹಾರದ ದಾಖಲೆಗಳ ಸಮೇತ ತಿಂಗಳಗಳ ಹಿಂದೆ ತಮಗೂ ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಹಾಗೂ ಜೇವರ್ಗಿ ತಾಲೂಕ ಕಿರಿಯ ಅಭಿಯಂತರರಿಗು ಕೂಡ ದೂರು ಸಲ್ಲಿಸಲಾಗಿದೆ ಆದ್ದರಿಂದ ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ೧೫ದಿವಸದ ಒಳಗೆ ನಮ್ಮ ಬೇಡಿಕೆಗೆ ಸ್ಪಂದಿಸದೆ ಹೊದಲ್ಲಿ ಜೇವರ್ಗಿ ತಾಲೂಕು ಬಂದ್ ಮಾಡಿ ಹೋರಾಟಕ್ಕೆ ಇಳಿಯಬೇಕಾಗುತ್ತೆದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪಟ್ಟೆದಾರ, ಪರಮಾನಂದ ಯಲಗೊಡ, ತಿಪ್ಪಣ್ಣ ಜೈನಾಪೂರ, ಸೈಬಣ್ಣಾ ಪೂಜಾರಿ ಸೇರಿದಂತೆ ಕಾರ್ಯಕರ್ತಕರು ಉಪಸ್ಥಿತರಿದ್ದರು.