ಧರ್ಮದಿಂದಲೇ ವಿಶ್ವಕ್ಕೆ ಶಾಂತಿ : ಎಲ್ಲರೂ ಸಾಮರಸ್ಯದಿಂದ ಬದುಕಬೇಕು :..ಹಿರೇಮಠ.

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ : ಎಲ್ಲರೂ ಸಾಮರಸ್ಯದಿಂದ ಬದುಕಬೇಕು :..ಹಿರೇಮಠ.

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ : ಎಲ್ಲರೂ ಸಾಮರಸ್ಯದಿಂದ ಬದುಕಬೇಕು :..ಹಿರೇಮಠ.

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿದ್ದರು, ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ರವರು ಹೇಳಿದರು.

ಅವರು ನಗರ ಸಭೆ ಆವರಣದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. 

ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮರಸ್ಯ ದಿಂದ ಬದುಕಲು ಸಾಧ್ಯ ಎಂದರು.

ನಗರ ಸಭೆಯ ಸಿಬ್ಬಂದಿ ಸಾಬಣ್ಣ ಸುಂಗುಲಕರ ಮಾತನಾಡಿ, ಸಮಾಜದಲ್ಲಿನ ಭೇದ ಭಾವಗಳನ್ನು ತೊಡೆದು ಹಾಕಿ, ಸಮಾನತೆಯನ್ನು ಸಾರಿದ ರೇಣುಕಾಚಾರ್ಯರರ ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ ಎಂದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ನಗರ ಸಭೆ ಮಾಜಿ ಸದಸ್ಯರಾದ ಸೂರ್ಯಕಾಂತ ಕೋಬಾಳ, ಸಾಹೇಬಗೌಡ ಬೊಗುಂಡಿ, ಚನ್ನಪ್ಪ ಕುಂಬಾರ, ಶರಣಯ್ಯ ಸ್ವಾಮಿ, ರಾಜಶೇಖರ ಘಂಟಿಮಠ, ರಾಜೇಶ್ವರಿ ಧನಶೆಟ್ಟಿ, ಮಹಾನಂದ, ಜಯಶ್ರೀ ಹಾಗೂ ಸಿಬ್ಬಂದಿಗಳಾದ ಮಾಣಿಕಪ್ಪ ಮೌರ್ಯ, ಅನಿಲ ಹೊನಗುಂಟಿಕರ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.