ಉದ್ಘಾಟನಾ ಸಮಾರಂಭ ಪ್ರಥಮ ಮಹಿಳಾ ಸಮಾವೇಶದಲ್ಲಿ ಸಾಹಿತಿ ಕಳವಳ

ಉದ್ಘಾಟನಾ ಸಮಾರಂಭ ಪ್ರಥಮ ಮಹಿಳಾ ಸಮಾವೇಶದಲ್ಲಿ ಸಾಹಿತಿ ಕಳವಳ

ಉದ್ಘಾಟನಾ ಸಮಾರಂಭ

ಪ್ರಥಮ ಮಹಿಳಾ ಸಮಾವೇಶದಲ್ಲಿ ಸಾಹಿತಿ ಕಳವಳ

ಅಪೌಷ್ಟಿಕತೆ ಮಹಿಳೆ ಬರ್ಬರ ಸ್ಥಿತಿ: ಡಾ.ಜಯದೇವಿ ಗಾಯಕವಾಡ

ಬಸವಕಲ್ಯಾಣ: ಗ್ರಾಮೀಣ ಮಹಿಳೆಯರು ಇನ್ನು ಶಿಕ್ಷಣ ದಿಂದ ವಂಚಿತರಾಗಿದ್ದಾರೆ.ಅಪೌಷ್ಟಿಕತೆ ಯಿಂದ ಮಹಿಳೆಯರು ನರಳುತ್ತಿದ್ದಾರೆ.ಸರಿಯಾದ ಪೌಷ್ಟಿಕ ಆಹಾರ ಸಿಗುತ್ತಿಲ್ಲ ದೇವರ ಸ್ತುತಿ,ಉಪವಾಸದಿಂದ ರಕ್ತ ಹೀನತೆಯಿಂದ ಹೆರಿಗೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಪ್ರಸ್ತುತ ಅನೇಕ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯತ್ತಿವೆ.ಸಾರ್ವಜನಿಕ ಸ್ಥಳಗಳಲ್ಲಿ, ಸರಕಾರಿ ಕಾರ್ಯಾಲಯಗಳಲ್ಲಿ ಕಾರ್ಯ ನಿರ್ವ ಹಿಸುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿ ವೆ.ಮರ್ಯಾದೆ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈ ಎಲ್ಲಾ ಸಮಸ್ಯೆ ನಿಭಾಯಿಸುವ ಜವಾಬ್ದಾರಿ ಮೆಟ್ಟಿ ನಿಲ್ಲುವ ಧೈರ್ಯ ಮಹಿಳೆಯರು ಹೊಂದಬೇಕಾಗಿದೆ.ಈ ದಿಸೆಯಲ್ಲಿ

ಮಹಿಳೆಯರಿಗೆ ಕಾನೂನುಗಳು ರೂಪಿಸುವವುದ ಸರಕಾರದ ಕರ್ತವ್ಯವೆಂದು ಮಹಿಳಾ ಸಮಾವೇಶದ ಸರ್ವಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಪ್ರತಿಪಾದಿಸಿದರು.

       ಸಸ್ತಾಪೂರದ ಯಲ್ಲಾಲಿಂಗೇಶ್ವರ ಆನಂದಾಶ್ರಮದಲ್ಲಿ

ಜರುಗಿದ ಮಹಿಳಾ ಸಮಾವೇಶ,ಯಲ್ಲಾಲಿಂಗೇಶ್ವರರ ೩೯ ನೇ ಪುಣ್ಯ ಸ್ಮರಣೋತ್ಸವ,ಮಹಾದೇವಿ ತಾಯಿಯವರ ಷಷ್ಠ್ಯಬ್ದಿ,೬೦ ತುಲಾಭಾರ. ಸಮಾರಂಭದಲ್ಲಿ ಸರ್ವಾಧ್ಯಕ್ಷರಾಗಿ ಮಾತನಾಡಿ ಇವತ್ತು ಗಂಡಸರ ಸಮಾನ ವಾಗಿ ಬಾಳಬೇಕು.ಹೆಣ್ಣು ಅಬಲೆ ಅಲ್ಲ ಸಬಲೆ ಆಕೆಗೆ ಅನುಕಂಪ ಬೇಕಿಲ್ಲ.ಅವರ ಪ್ರತಿಭೆಗೆ ತಕ್ಕ ಗೌರವ ನೀಡಲುಕೋರಿದರು.

            ಸಸ್ತಾಪೂರ ಊರು ಸರಸ್ವತಿ ಊರಾಗಿದೆ. ಜಗತ್ತಿಗೆ ಸಮಾನತೆ ಸಂಸತ್ತು ಅನುಭವ ಮಂಟಪ ನೀಡಿದ ಬಸವಣ್ಣನವರ ಪುಣ್ಯ ನೆಲದಲ್ಲಿ ಮೂರು ಕಾರ್ಯಕ್ರಮ ಒಂದೆಡೆ ಸೇರಿಸಿ ಮಾಡುವ ಕಾರ್ಯಕ್ರಮ ಸಂತಸದಿಂದ ಉದ್ಘಾಟಿಸಿದ್ದೇನೆ. ಇಂದು ಮಹಿಳೆ ಸಮಸ್ಯೆ ಸವಾಲು ಎದುರಿಸುತ್ತಿದ್ದಾಳೆ.ಅತ್ಯಾಚಾರ,ಅವಮಾನ ಹತ್ಯೆಗಳು ನಡೆ ದಿರುವುದು ದುರಂತವೆಂದು ಸಾಹಿತಿ ಪ್ರೊ. ನೀಲಾಂಬಿಕಾ ಪೋಲಿಸ್ ಪಾಟೀಲ ನುಡಿದರು.

      ಮಹಿಳೆಗೆ ಪೂರಕವಾದ ಕಾರ್ಯ ನಡೆಯಬೇಕೆಂದರು. ಮಹಿಳೆಯರು ಶಿಕ್ಷಣ ಪಡೆಯಬೇಕು.ಶಸಕ್ತರಾಗಬೇಕು. ಮಹಿಳೆಯರು ಕುಟುಂಬ ಜವಾಬ್ದಾರಿ ನಿಮ್ಮ ಮೇಲಿರು ವುದರಿಂದ ಉತ್ತಮ ಸಂಸ್ಕಾರ ನೀಡಬೇಕು.ಮಹಿಳೆಯಿಂ ದಲೇ ಸಮಾಜ ಸುಸಂಸ್ಕೃತ ವಾಗಿರಲು ಸಾಧ್ಯವೆಂದರು.

 ಸಾನಿಧ್ಯ ವಹಿಸಿದ ಗಬಿಮಠದ ಪೂಜ್ಯ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ‌ ನೀಡಿದರು. ,ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಉರಿಲಿಂಗಪೆದ್ದಿ ಮಠ ಬೇಲೂರು,ಫಕೀರಸಾಬ ತಾತನವರು ನಂದಕಲ್ಲ ದೇವದುರ್ಗ,ಅಂಬಿಗರ ಚೌಡಯ್ಯ ಗವಿಯ ಪೂಜ್ಯ ರತ್ನಕಾಂತ ಶಿವಯೋಗಿಗಳು, ಯರಂಡಗಿ ಭವಾನಿ ಮಂದಿರದ ಶಶಿಕಲಾ,ಭಾಗ್ಯವಂತಿ ಕೌಡಿಯಾಳ, ಸಿದ್ರಾಮಪ್ಪ ಗುದಗೆ,ಎಂ.ಎಂ.ತಂಬಾಕೆ,ರಾಜಮಾತೆ ಕೊರಾಳೆ ಇತರರು ಇದ್ದರು

ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಸಂಯೋಜಕ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತ ಪ್ರಾಸ್ತಾವಿಕ ನುಡಿ ಆಡಿದರು.ಜಯಕುಮಾರ ರಡಕೆ,ಡಾ.ಪೀರಪ್ಪ ಸಜ್ಜನ,ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು.ಸುರಜ್ ರಾಮಬಾಣ ವಂದಿಸಿದರು.

ಸಾಹಿತ್ಯ ಸಿರಿ ಪ್ರಶಸ್ತಿ ಪುರಸ್ಕೃತರು:

ಡಾ.ಅಂಬಾದಾಸ ಕಾಂಬಳೆ,ಡಾ.ಶಿವಪುತ್ರ ಹೋಳ್ಕರ್, ಡಾ.ಮಲ್ಲಯ್ಯ ಅತ್ತನೂರ,ಡಾ.ಸಿದ್ದಪ್ಪ ಹೊಸಮನಿ,ಡಾಕಪ್ಪ ಮೋತಿಲಾಲ,ಡಾ.ದತ್ತುರಾಯ,ರೇಷ್ಮಾವತಿ ರಾಮಚಂದ್ರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಲಾ ಭಾರ:

ಪೂಜ್ಯ ಮಹಾದೇವಿ ತಾಯಿ ಅವರ ಅರವತ್ತನೆಯ ವರ್ಷ ಪ್ರಯುಕ್ತ ೬೮ ತುಲಾ ಭಾರ ಜರುಗಿದವು.

ಮೆರವಣಿಗೆ:ಸಸ್ತಾಪೂರದ ಶ್ರೀ ಯಲ್ಲಾಲಿಂಗೇಶ್ವರ ಮೂರ್ತಿ,ಸಮ್ಮೇಳ‌ನಾಧ್ಯಕ್ಷರಾದ ಸಾಹಿತಿ ಡಾ.ಜಯದೇವಿ‌ ಗಾಯಕವಾಡ,ಅವರನ್ನು ಸಾರೋಟದಲ್ಲಿ ಮೆರವಣಿಗೆಯನ್ನು ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ತಿನ ಸದಸ್ಯ ವಿಜಯಸಿಂಗ್,ಮಾಜಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ನೇರವೇರಿಸಿದರು. ಪೂಜ್ಯ ಮಹಾದೇವಿ ತಾಯಿ,ಶಿವಕುಮಾರ ಪಾಟೀಲ, ಪ್ರತೀಕ ಮುಳೆ,ಭೀಮಾಶಂಕರ ಮಳೆ,ಮಹಾದೇವರೆಡ್ಡಿ,ಪ್ರ ಕಾಶ ಪಾಟೀಲ, ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಶೀಲಾದೇವಿ ಬಿರಾದಾರ,ಗೌಡಪ್ಪ ಪಾಟೀಲ, ಆಕಾಶ ತೊಗಣೂರ ಇತರರು ಇದ್ದರು.

ಧ್ವಜಾರೋಹಣ: ಶಿವಕುಮಾರ ಮಡಿವಾಳಪ್ಪ ಬಿರಾದಾರ ನೆರವೇರಿಸಿದರು.ಡೊಳ್ಳು,ಹಲಗೆ,ಭಾಜಾ ಭಜಂತ್ರಿಯೊಂದಿ ಗೆ ನ ಮೆರವಣಿಗೆ ಊರ ಪ್ರಮುಖ ಬೀದಿಗಳಲ್ಲಿ,ಸರಸ್ವತಿ ಮಂದಿರ ಮೂಲಕ ಮಠಕ್ಕೆ ಆಗಮಿಸಿತು.