ಜೀವನದಲ್ಲಿ ಗುರಿ ಮತ್ತು ಗುರು ಎರಡು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ
ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ-2025-26
ಜೀವನದಲ್ಲಿ ಗುರಿ ಮತ್ತು ಗುರು ಎರಡು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ
ಕಲಬುರಗಿ: ಮಾತೋಶ್ರೀ ಕಲ್ಯಾಣೀ ಸ್ಮಾರಕ ಶಿಕ್ಷಣ ಸಂಸ್ಥೆ (ರಿ)ಯ ಅಡಿಯಲ್ಲಿ ನಡೆಯುತ್ತಿರುವ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಪಿ.ಯು.ಸಿ. ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭವನ್ನು ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ)ಇಲಾಖೆ, ಕಲಬುರಗಿಯ ಉಪ ನಿರ್ದೇಶಕರಾದ ಸುರೇಶ ಕೆ.ಅಕ್ಕಣ್ಣ ಅವರು ಆಗಮಿಸಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡುತಾ ಜೀವನದಲ್ಲಿ ಗುರಿ ಮತ್ತು ಗುರು ಎರಡು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಶ್ರೀಗುರು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ನಿಮಗೆ ಗುರಿಯೂ ಇದೆ, ಗುರು ಇದ್ದಾರೆ, ಜೊತೆಗೆ ಗುರುಗಳ ಸಮೂಹವೆ ಇದೆ. ಪ್ರಮಾಣಿಕತೆಯಿಂದ ಹಿಡಿದ ಕೆಲಸ ಬಿಡದೆ ಮಾಡುವ ಛಲ ಸಾಧನೆಗೆ ಸಹಕಾರಿಯಾಗುತ್ತದೆ, ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಅಭ್ಯಾಸಿಸುತ್ತಿರುವ ನೀವು ಇಂಜಿನಿಯರ್, ಡಾಕ್ಟರ್‌ಗಳಾಗುವುದರೊಂದಿಗೆ ಭಾರತೀಯ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಡಳಿತಾತ್ಮಕ ಸಾಮಾಜಿಕ ಸೇವಾ ಸಲ್ಲಿಸುವದರೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸುವಂತೆ ಕರೆಯಿತ್ತರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿದ್ಯಾಸಾಗರ ಎಂ.ಗೋಗಿ, ಅವರು ಮಾತನಾಡುತ್ತಾ ಜನ್ಮ ನೀಡಿದ್ದು ಅಮ್ಮ ಜೀವನ ನೀಡಿದ್ದು ಅಪ್ಪ, ಜೀವನದಲ್ಲಿ ಧೈರ್ಯ ತುಂಬಿದ್ದು ಅಮ್ಮ, ಆ ಧೈರ್ಯಕ್ಕೂ ಸ್ಫೂರ್ತಿಯಾಗಿದ್ದು ಅಪ್ಪ. ಕೈ ತುತ್ತು ನೀಡಿದ್ದು ಅಮ್ಮ ಆ ತುತ್ತಿನ ಹಿಂದಿನ ಶ್ರಮವೇ ಅಪ್ಪ. ಸೋತಾಗ ಬೆನ್ನು ತಟ್ಟಿದ್ದು ಅಮ್ಮ ಬೆನ್ನೆಲುಬಾಗಿ ನಿಂತಿದ್ದು ಅಪ್ಪ. ನಮಗೆಲ್ಲ ದೇವತೆ ಅಮ್ಮ ಆ ದೇವತೆಗೂ ದೇವರೂ ಅಪ್ಪ ಎಂದು ಹೇಳುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ತಂದೆ-ತಾಯಿ-ಗುರು-ಹಿರಿಯರಿಗೆ ಗೌರವ ಕೊಡುವುದರೊಂದಿಗೆ ಜೀವನದಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದು ಉನ್ನತ ಶಿಕ್ಷಣ ಪಡೆದು ನೀವು ಮುಂದಿನ ಭವ್ಯ ಭಾರತದ ಶಿಲ್ಪಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯದರ್ಶಿಗಳಾದ ನಿತಿನ್.ನಾಯ್ಕ ಅವರು ಮಾತನಾಡುತ್ತಾ ಪಾಲಕರು ಮತ್ತು ಗುರು ವೃಂದದಿAದ ಉನ್ನತ ಮಟ್ಟದ ಶೈಕ್ಷಣಿಕ ಮಾರ್ಗದರ್ಶನ / ಸಲಹೆ ಪಡೆದು ಉತ್ತಮ ಫಲಿತಾಂಶ ತರುವುದರೊಂದಿಗೆ ಪೋಷಕರಿಗೆ ಉತ್ತಮ ಮಕ್ಕಳಾಗಿ, ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ, ಕಾಲೇಜಿನ ಕೀರ್ತಿ ಕಳಸಗಳಾಗಿ ಹೊರ ಹೊಮ್ಮಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಳಿನಿ ಎ.ನಾಯ್ಕ ಅವರು ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಸಂಸ್ಥೆಯ ಉತ್ತಮ ಶಿಕ್ಷಕರ ಸಲಹೆ ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತರುವಂತೆ ಅಶಯ ವ್ಯಕ್ತಪಡಿಸಿದರು.
ಆಡಳಿತಾಧಿಕಾರಿಗಳಾದ ಶ್ರೀಮತಿ ನೆಹಾ ನಿತಿನ ನಾಯ್ಕ. ಆಡಳಿತ ಮಂಡಳಿಯ ಸದಸ್ಯರಾದ ಗುರುರಾಜ ಎ.ನಾಯ್ಕ ಹಾಗೂ ಭೋಧಕ-ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, ಪಾಲಕರು/ಪೋಷಕರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
