ಟೆಕ್ಸಟೈಲ್ ಪಾರ್ಕ ಅಭಿವೃದ್ಧಿ ಕಾಮಗಾರಿ ಕೂಡಲೇ ಪ್ರಾರಂಭಗೊಳಿಸಲು : ಒಕ್ಕೂಟ ಒತ್ತಾಯ
ಟೆಕ್ಸಟೈಲ್ ಪಾರ್ಕ ಅಭಿವೃದ್ಧಿ ಕಾಮಗಾರಿ ಕೂಡಲೇ ಪ್ರಾರಂಭಗೊಳಿಸಲು : ಒಕ್ಕೂಟ ಒತ್ತಾಯ
ಕಲಬುರಗಿ : ಫರಹತಾಬಾದದಲ್ಲಿ ನಿರ್ಮಾಣಗೊಳ್ಳುತ್ತಿರುವ ಜವಳಿ ಟೆಕ್ಸಟೈಲ್ ಪಾರ್ಕ ಅಭಿವೃದ್ಧಿ ಕಾಮಗಾರಿ ಕೂಡಲೇ ಪ್ರಾರಂಭಗೊಳಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ಅನುದಾನ ಬಿಡುಗಡೆಗೊಳಿಸಿ ಈ ಭಾಗದಲ್ಲಿ ಉದ್ಯೋಗ ನೀಡಲು ಮುಂದಾಗಬೇಕೆಂದು ಒಕ್ಕೂಟ ಒತ್ತಾಯ
ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಕಲಬುರಗಿ ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ನಾಲವಾರಕ್ ಅವರು ಮಾತನಾಡುತ್ತ,
ಫರಹತಾಬಾದದಲ್ಲಿ ಈಗಾಗಲೇ ಜವಳಿ ಟೆಕ್ಸಟೈಲ್ ಪಾರ್ಕಗಾಗಿ ಈಗಾಗಲೇ ನಿವೇಶನಗಳು ಪಡೆದುಕೊಂಡಿದ್ದು, ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಜವಳಿ ಟೆಕ್ಸಟೈಲ್ ಪಾರ್ಕ ಅಭಿವೃದ್ಧಿ ಕಾಮಗಾರಿಗೆ ಒಟ್ಟು 1000ಸಾವಿರ ಕೋಟಿ ಅನುದಾನ ಅವಶ್ಯಕತೆಯಿದ್ದು, ಕೆಕೆಆರ್‌ಡಿಬಿ ಮಂಡಳಿಯಿಂದ 150ಕೋಟಿ ಅನುದಾನ ಮುಖ್ಯಮಂತ್ರಿಗಳು 200ಕೋಟಿ ಅನುದಾನ ಒದಗಿಸಬೇಕು. ಇನ್ನೂಳಿದ 750ಕೋಟಿ ಕೇಂದ್ರ ಸರಕಾರ ಅನುದಾನ ಬಿಡುಗಡೆಗೊಳಿಸುವ ಮೂಲಕ ಕಲ್ಯಾಣ ಕರ್ನಾಟಕದ ಅತಿ ದೊಡ್ಡ ಜಿಲ್ಲೆಯಾದ ಕಲಬುರಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಆದ್ದರಿಂದ ಜವಳಿ ಟೆಕ್ಸಟೈಲ ಪಾರ್ಕ ಪ್ರಾರಂಭಿಸುವ ಮೂಲಕ ಈ ಭಾಗದ ಜನರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ಮುಂದಾಗಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಕಲಬುರಗಿ ಪತ್ರಿಕಾಗೋಷ್ಠಿಯ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಜನವರಿ ಕೊನೆ ವಾರದಲ್ಲಿ ಒಕ್ಕೂಟ ನಿಯೋಗ ಬೆಂಗಳೂರಿಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಕೂಡಲೇ ಫರಹತಾಬಾದದಲ್ಲಿ ಜವಳಿ ಟೆಕ್ಸಟೈಲ್ ಪಾರ್ಕ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ, ಉದ್ಯೋಗ ನೀಡಲು ಮತ್ತು ಜವಳಿ ಟೆಕ್ಸಟೈಲ್ ಪಾರ್ಕ ಪ್ರಾರಂಭಿಸುವ ಮೂಲಕ ಕಲಬುರಗಿ ವಿಮಾನ ಸೇವೆಗೆ ಅನುಕೂಲವಾಗುತ್ತದೆ. ಎಂದು ಒಕ್ಕೂಟದ ನಿಯೋಗ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಒಕ್ಕೂಟದ ಮುಖಂಡರಾದ ಮಂಜುನಾಥ ನಾಲವಾರಕರ ಮಾಧ್ಯಮದ ಮೂಲಕ ಮಾತನಾಡಿದರು.ಸಚಿನ ಫರಹತಾಬಾದ,ದತ್ತು ಭಾಸಗಿ,ರವಿ ದೇಗಾಂವ,ಆನಂದ ತೆಗನೂರಮನೋಹರ ಬೀರನೂರ,ಅಭೀಷೇಕ ಸೇರಿದಂತೆ ಅನೇಕ ಮುಖಂಡರು ಘೋಸ್ಟ್ಯಲ್ಲಿ ಉಪಸ್ಥಿತರಿದ್ದರು
