ಹಳ್ಳಿಯ ಸೊಗಡು: ವಿದ್ಯಾರ್ಥಿನಿಯರ ಕೃಷಿ-ಸಂಸ್ಕೃತಿ ಸಂಜೋಳ

ಹಳ್ಳಿಯ ಸೊಗಡು: ವಿದ್ಯಾರ್ಥಿನಿಯರ ಕೃಷಿ-ಸಂಸ್ಕೃತಿ ಸಂಜೋಳ
ಆಳಂದ: ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಎಂಪಿಎಂಜಿ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿಯರು ಹಳ್ಳಿ ಸೊಗಡಿನ ಸವಿಯೂಟ ಸವಿಯೋಣ ಬಾರಾ..! ಜೀವನದ ಸೊಗಡನ್ನು ಅನುಭವಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಭ್ರಮಿಸಿದರು.
ಈ ಸಂದರ್ಭ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಇಲಕಲ್ ಸೀರೆ, ಕೊರಳಿಗೆ ಬೋರಮಾಳ, ನೆಕ್ಲಸ್ ಸರ್ ಮತ್ತು ಕುಪ್ಪಸದ ಉಡುಗೆ ತೊಟ್ಟು, ಗ್ರಾಮೀಣ ಕೃಷಿ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರದರ್ಶನ ನೀಡಿದರು. ಉಪನ್ಯಾಸಕ ವೃಂದವು ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಧೋತಿ, ನೆಹರು ಶರ್ಟ್ ತೊಟ್ಟು ಸಾಂಪ್ರದಾಯಿಕತೆ ಮೆರೆದರು. ವಿದ್ಯಾರ್ಥಿನಿಯರು ಬಳಿಕ, ಈ ಶ್ರದ್ಧಯುತ ಕಾರ್ಯಕ್ರಮದ ಭಾಗವಾಗಿ ಒಟ್ಟಾಗಿ ಊಟವನ್ನು ಸವಿದರು.
ಈ ಮೊದಲು ರೊಟ್ಟಿ ಬೂತಿ ಸೇರಿ ಕೃಷಿ, ತೋಟಗಾರಿಕೆ ಉತ್ಪನಗಳನ್ನು ವಿದ್ಯಾಥಿನಿಯರು ಕಾಲೇಜು ಆವರಣದಲ್ಲಿ ಡ್ರಂ ವಾದ್ಯದ ಮೂಲಕ ಅತಿಥಿಗಳನ್ನು ಕಾರ್ಯಕ್ರಮದ ವೇದಿಕೆಯ ವರೆಗೆ ಮೆರವಣಿಗೆ ಕೈಗೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಹಣಮಂತ ಶೇರಿ ಅವರು ಗ್ರಾಮೀಣ ಆಹಾರದ ಪೌಷ್ಟಿಕತೆಯ ಮಹತ್ವವನ್ನು ವಿವರಿಸಿದರು. "ಹಳ್ಳಿಯ ಆಹಾರ ಪದ್ಧತಿ ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯಯುಕ್ತ ಜೀವನದ ಹತ್ತಿರ ಕರೆದೊಯ್ಯುವ ಮಾರ್ಗವಾಗಿದೆ. ಸಾಂಪ್ರದಾಯಿಕ ಆಹಾರವು ನಮ್ಮ ಆರೋಗ್ಯವರ್ಧಕವಾಗಿದೆ ಮತ್ತು ಜೈವಿಕ ಪದ್ದತಿಯಲ್ಲಿ ಬೆಳೆಯುವ ಅಂಶಗಳೂ ಇದರಲ್ಲಿ ಸೇರಿವೆ" ಎಂದು ಅವರು ಹೇಳಿದರು.
ಬಿಎಡ್ ಕಾಲೇಜಿನ ಪ್ರಾಂಶುಪಾಲ ಅಶೋಕ ರೆಡ್ಡಿ ಅವರು, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಕೌಶಲ್ಯ, ಸ್ವಾವಲಂಬನ ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುವಂತೆ ಪ್ರೇರೇಪಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಬುಕ್ಕೆ ಅವರು, "ಈ ತರಹದ ಉಪಕ್ರಮಗಳು ವಿದ್ಯಾರ್ಥಿನಿಯರ ವ್ಯಾಸಂಗದ ಜೊತೆಗೆ ಗ್ರಾಮೀಣ ಜೀವನದ ಅರಿವು ಮೂಡಿಸುವ ಹಿತದಾಯಕ ಕಾರ್ಯಕ್ರಮಗಳಾಗಿವೆ" ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು ಮಕ್ಕಳಿಗೆ ತಂತ್ರಜ್ಞಾನವನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸೂಚಿಸಿದರು. "ಸಾಂಪ್ರದಾಯಿಕ ಗ್ರಹಣವನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಂಡು ಉನ್ನತ ಮಟ್ಟದ ಸಾಧನೆ ಮಾಡುವ ದಿಸೆಯಲ್ಲಿ ವಿದ್ಯಾರ್ಥಿನಿಯರು ಮುಂದುವರಿಯಬೇಕು" ಎಂದು ಸಲಹೆ ನೀಡಿದರು.
ಯೋಗಪಟು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ದತ್ತಾತ್ರೆಯ ಬಿರಾದಾರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಯೋಹ ಮತ್ತು ಹಿತಮಿತವಾದ ಸತ್ವಭರಿತ ಆಹಾರ ಸೇವನೆಯ ಮಹತ್ವನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ಅವಿನಾಶ ದೇವನೂರ, ಉಪನ್ಯಾಸಕ ಮಲ್ಲಿಕಾರ್ಜುನ ಖಜೂರಿ, ರವಿಂದ್ರ ಜಮಾದಾರ, ನಂದಿನಿ ಕಾಕಡೆ, ರೇಖಾ ಪಾಟೀಲ, ಜಗದೇವಿ ಪಾಟೀಲ, ರೇಣುಕಾ ಇಂಗಳೆ, ಸುಜಾತಾ ಗುತ್ತೇದಾರ, ಕಿಶೋರ ಮೈಂದೆ, ವಿದ್ಯಾರ್ಥಿನಿಯರು, ಶಿಕ್ಷಕರು, ಮತ್ತು ಸ್ಥಳೀಯ ಗಣ್ಯರು ಪಾಲ್ಗೊಂಡಿದ್ದರು.
ಹಳ್ಳಿಯ ಪರಂಪರೆಯೊಂದಿಗೆ ಶಿಕ್ಷಣ ಮತ್ತು ಅಭಿವೃದ್ದಿಗೆ ಒತ್ತು ನೀಡುವ ಈ ಕಾರ್ಯಕ್ರಮ ಅನನ್ಯ ಪ್ರಯತ್ನವೆನಿಸಿತು. ವಿದ್ಯಾರ್ಥಿನಿಯರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕನ್ನಡ ಉಪನ್ಯಾಸಕ ರಾಜಶೇಖರ ಕಡಗನ ನಿರೂಪಿಸಿದರು. ಸಂಗಮೇಶ ಸ್ವಾಮಿ ಸ್ವಾಗತಿಸಿದರು. ಅಂಬ್ರೇಶ ಕಾಂಬಳೆ ವಂದಿಸಿದರು.