ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಾವಿತ್ರಿಬಾಯಿ ಫುಲೆ ಪ್ರೇರಣೆ-ಶಿವಲಿಂಗಪ್ಪಕಿನ್ನೂರ್

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಾವಿತ್ರಿಬಾಯಿ ಫುಲೆ ಪ್ರೇರಣೆ-ಶಿವಲಿಂಗಪ್ಪಕಿನ್ನೂರ್

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಸಾವಿತ್ರಿಬಾಯಿ ಫುಲೆ ಪ್ರೇರಣೆ-ಶಿವಲಿಂಗಪ್ಪಕಿನ್ನೂರ್

ಕಲಬುರಗಿ: ಮಾತೆ ಸಾವಿತ್ರಿಬಾಯಿ ಫುಲೆಅವರು ಸಾಮಾಜಿಕ ನ್ಯಾಯ, ಮಹಿಳಾ ಶಿಕ್ಷಣ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ಹೋರಾಟಕ್ಕೆಅಪಾರ ಪ್ರೇರಣೆಯಾಗಿದ್ದಾರೆಎಂದು ಅಖಿಲ ಭಾರತೀಯ ಕೋಲಿ ಸಮಾಜದರಾಷ್ಟ್ರೀಯಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಹೇಳಿದರು.

ರಾಷ್ಟ್ರೀಯ ಸಮಾಜ ಪಕ್ಷದ ಕಲಬುರಗಿಜಿಲ್ಲಾಘಟಕದ ವತಿಯಿಂದಂದು ಪಕ್ಷದಕಚೇರಿಯಲ್ಲಿರಾಷ್ಟ್ರ ಮಾತೆ ಸಾವಿತ್ರಿಬಾಯಿಜ್ಯೋತಿಬಾ ಫುಲೆಅವರಜನ್ಮದಿನವನ್ನುಅರ್ಥಪೂರ್ಣವಾಗಿಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದರಾಷ್ಟ್ರೀಯಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ್, ಸಾವಿತ್ರಿಬಾಯಿ ಫುಲೆಅವರು ಮಹಿಳಾ ಶಿಕ್ಷಣ ಹಾಗೂ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ಸಲ್ಲಿಸಿದ ಅನನ್ಯ ಕೊಡುಗೆಗಳನ್ನು ಸ್ಮರಿಸಿದರು.ಅವರಜೀವನಚರಿತ್ರೆಯನ್ನುಜನಸಾಮಾನ್ಯರಲ್ಲಿ, ವಿಶೇಷವಾಗಿ ಯುವಪೀಳಿಗೆ ಯಲ್ಲಿಅರಿವು ಮೂಡಿಸುವುದುಅತ್ಯಂತಅಗತ್ಯವಾಗಿದ್ದು, ಪ್ರತಿಯೊಬ್ಬರೂತಮ್ಮ ಶಕ್ತಿಗೆ ತಕ್ಕಂತೆ 'ಅಳಿಲು ಸೇವೆ' ಸಲ್ಲಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಹೋರಾಟದಲ್ಲಿ ಭಾಗಿಯಾಗಬೇಕೆಂದುಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದಕರ್ನಾಟಕಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪದೊಡ್ಡಮನಿ, ಸಾವಿತ್ರಿಬಾಯಿ ಫುಲೆಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ದಿಕ್ಕು ತೋರಿಸುವಂತಿದ್ದು, ಶಿಕ್ಷಣವೇ ಶೋಷಿತ ಸಮುದಾಯಗಳ ಮುಕ್ತಿ ಎಂಬ ಸಂದೇಶವನ್ನುಅವರುಜೀವನಪೂರ್ತಿ ಸಾರಿದರೆಂದು ಹೇಳಿದರು.

ಯುವಘಟಕದರಾಜ್ಯಾಧ್ಯಕ್ಷರಾದದೇವೇಂದ್ರ ಕ್ಯಾಸಪಳ್ಳಿ ಹಾಗೂ ಪಕ್ಷದ ಉಸ್ತುವಾರಿಗಳಾದ ಸಿದ್ದರಾಜ್ ಕಿನ್ನೂರ್ ಮಾತನಾಡಿ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೈಕ್ಷಣಿಕಕ್ರಾಂತಿಗೆ ಸಾವಿತ್ರಿಬಾಯಿ ಫುಲೆಅವರ ಹೋರಾಟ ಇಂದಿಗೂ ಪ್ರೇರಣೆಯಾಗಿದ್ದು, ಆ ಮೌಲ್ಯಗಳನ್ನು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನುಜಿಲ್ಲಾಘಟಕದಅಧ್ಯಕ್ಷರಾದ ಶ್ರೀಮಂತ ಮಾವನೂರ್ ವಹಿಸಿದ್ದರು.ತಮ್ಮಅಧ್ಯಕ್ಷೀಯ ಭಾಷಣದಲ್ಲಿಅವರು, ಫುಲೆದಂಪತಿಯ ಆದರ್ಶಗಳು ಸಮಾಜದ ಬೇರುಮಟ್ಟದವರೆಗೂತಲುಪುವಂತೆಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿಜೇವರ್ಗಿತಾಲೂಕಿನಅಧ್ಯಕ್ಷರಾದ ಮಾಂತೇಶಅವರಾದಿ, ಅಯ್ಯಣ್ಣ ಸಿಂದಗಿ, ಶಹಬಾದ್‌ನರಮೇಶ್, ಸೇಡಂ ಹಾಗೂ ಚಿತ್ತಾಪುರ ತಾಲೂಕುಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿ, ಸಾವಿತ್ರಿಬಾಯಿ ಫುಲೆಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು.

ಜ್ಯೋತಿಬಾ ಫುಲೆಅವರು ಸಾವಿತ್ರಿಬಾಯಿ ಫುಲೆಅವರಿಗೆ ಮೊದಲು ಮನೆಯಲ್ಲಿ ಶಿಕ್ಷಣ ನೀಡುವ ಮೂಲಕ ಮಹಿಳಾ ಶಿಕ್ಷಣದ ಕ್ರಾಂತಿಗೆ ನಾಂದಿ ಹಾಡಿದರು. ಸಮಾಜದಿಂದಎದುರಾದಅವಮಾನ, ಹಿಂಸೆ ಹಾಗೂ ವಿರೋಧಗಳನ್ನು ಧೈರ್ಯದಿಂದ ಎದುರಿಸಿ, ಸಾವಿತ್ರಿಬಾಯಿ ಫುಲೆಅವರು ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಶಿಕ್ಷಣದ ಬೆಳಕು ತಲುಪಿಸಿದರು.ಅಕ್ಷರದ ಮಾತೆಯಾದ ಸಾವಿತ್ರಿಬಾಯಿ ಫುಲೆಅವರ ಹೋರಾಟ ಇಂದಿಗೂ ಸಮಾಜಕ್ಕೆದಾರಿದೀಪವಾಗಿದೆ."

-ಸಿದ್ದರಾಜ ಕಿನ್ನೂರ, ಮಾಜಿಆರ್‌ಎಸ್‌ಪಿಪಕ್ಷದರಾಜ್ಯ ಉಸ್ತುವಾರಿಗಳು.