ಬುಡಕಟ್ಟು ಸಾಹಿತ್ಯ ಪರಿಷತ್‌ಗೆ ಡಾ.ಭಗವಂತರಾಯ ನೇಮಕ
ಬುಡಕಟ್ಟು ಸಾಹಿತ್ಯ ಪರಿಷತ್‌ಗೆ ಡಾ.ಭಗವಂತರಾಯ ನೇಮಕ
ಕಲಬುರಗಿ: ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಪಟ್ಟಣ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ.ಭಗವಂತರಾಯ ಬಳುಂಡಗಿ ಅವರನ್ನು ನೇಮಿಸಲಾಗಿದೆ.
ಈ ನಿಟ್ಟಿನಲ್ಲಿ ಈಚೆಗೆ ಕನ್ನಡ ಭವನದಲ್ಲಿ ಡಾ.ಭಗವಂತರಾಯ ಬಳುಂಡಗಿ, ರಾಜ್ಯಾಧ್ಯಕ್ಷ ಡಾ.ಎಸ್.ಕೆ. ಮೇಲಕಾರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಅಮರೇಶ್ವರಿ ಚಿಂಚನಸೂರು ನೇಮಕಾತಿ ಪತ್ರ ನೀಡಿ ಸನ್ಮಾನಿಸಿ, ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಂಘಟನೆ ತುಂಬಾ ಅವಶ್ಯಕವಾಗಿದೆ.
ಈ ನಿಟ್ಟಿನಲ್ಲಿ ಸಂಘಟನೆಗೊAಡು ಅಧ್ಯಯನ ಕೈಗೊಂಡರೆ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸುವಲ್ಲಿ ಅನುಕೂಲವೂ ಆಗಲಿದೆ ಎಂದರು.
ರಾಜ್ಯಾಧ್ಯಕ್ಷ ಡಾ.ಎಚ್. ಕೆ.ಮೇಲಕಾರ ಮಾತನಾಡಿ, ಡಾ.ಭಗವಂತರಾಯ ತಳ ಸಮುದಾಯಗಳ ರಾಜಕೀಯ ಮತ್ತು ಸಾಂಸ್ಕೃತಿಕ ಅಧ್ಯಯನದ ವಿಷಯದಲ್ಲಿಯೇ ಪಿಎಚ್‌ಡಿ ಗ್ರಂಥ ಬರೆದಿದ್ದಾರೆ. ಇದರಿಂದಾಗಿ ಅವರಿಗೆ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗತಿಗಳ ಕುರಿತು ತಿಳಿವಿದೆ. ಆದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಡಾ.ಟಿ.ಡಿ.ರಾಜ್, ತೊನಸನಹಳ್ಳಿಯ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಸಿಂದಗಿಯ ಶಾಂತವೀರ ಸ್ವಾಮೀಜಿ ಇನ್ನಿತರರು ಇದ್ದರು.