3677 ಎಕರೆ ಭೂಮಿ ಮರಳಿ ಪಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯ

3677 ಎಕರೆ ಭೂಮಿ ಮರಳಿ ಪಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯ

3677 ಎಕರೆ ಭೂಮಿ ಮರಳಿ ಪಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯ

ಕಲಬುರಗಿ: ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿರುವ ಕನ್ನಡ ದ್ರೋಹಿ ಜಿಂದಾಲ್ ಕೈಗಾರಿಕೆ ನೀಡಿರುವ 3677 ಎಕರೆ ಭೂಮಿ ಮರಳಿ ಪಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. 

ರಾಜ್ಯದ ನೆಲ,ಜಲ,ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಸ್ಥಾಪನೆಯಾದ ಜಿಂದಾಲ್ ಉಕ್ಕು ಕಾರ್ಖಾನೆ ಭೂಮಿ ನೀಡಿದ ಸ್ಥಳಿಯರು ಸೇರಿದಂತೆ ರಾಜ್ಯದ ಜನತೆಗೆ ಉದ್ಯೋಗ ನೀಡದೆ ವಂಚಿಸಿ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದೆ.ಇದಕ್ಕೆ ಸರಕಾರ ಹಿಂಬಾಗಿಲಿನಿಂದ ಸಹಕಾರ ನೀಡುತ್ತಿರುವ ಕ್ರಮವನ್ನು ಕರ್ನಾಟಕ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ. 

ಜಿಂದಾಲ್ ಉಕ್ಕು ಕಾರ್ಖಾನೆಯ ಈ ಕನ್ನಡ ದ್ರೋಹಿತನದ ವಿರುದ್ಧ ಕರ್ನಾಟಕ ನವನಿರ್ಮಾಣ ಸೇನೆ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಕನ್ನಡಿಗರಿಗೆ ಉದ್ಯೋಗ ನೀಡದ ಈ ಕೈಗಾರಿಕೆಗೆ ಸರಕಾರ ನೀಡಿರುವ ಉಚಿತ ಸೌಲಭ್ಯಗಳನ್ನು ಮರಳಿ ಪಡೆಯುವಂತೆ ಹಲವು ಸಲ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಆದರೂ ಸರಕಾರ ಜಿಂದಾಲ್ ನೀಡುವ ಕಿಕ್ ಬ್ಯಾಕ್ ಹಣಕ್ಕೆ ಕನ್ನಡಿಗರ ಸ್ವಾಭಿಮಾನ ಅಡವಿಡುವ ಕೆಲಸ ಮಾಡುತ್ತ ಬಂದಿದೆ.ಇದು ನಿಜಕ್ಕೂ ಕನ್ನಡ ದ್ರೋಹದ ಕೆಲಸ ಸರಕಾರವೇ ಈ ಕೆಲಸ ಮಾಡಿದರೆ ಕನ್ನಡಿಗರ ರಕ್ಷಣೆ ಮಾಡುವವರು ಯಾರು? ಎನ್ನುವುದು ನಮ್ಮ ಪ್ರಶ್ನೆಜಿಂದಾಲ್ ಕೈಗಾರಿಕೆ ಪರಿಸರ ಮಾಲಿನ್ಯ ನಿಯಮಗಳನ್ನು ಗಾಳಿಗೆ ತೂರಿದ ಫಲವಾಗಿ ಇಂದು ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗಿವೆ.ವಾಸಿಯಾಗದ ರೋಗಕ್ಕೆ ಅನೇಕ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಬಡ ರೈತರ ಫಲವತ್ತಾದ ಜಮೀನನ್ನು ತಮ್ಮ ಹಣ ಬಲ, ಅಧಿಕಾರ ಬಲದಿಂದ ಪಡೆದುಕೊಂಡ ಜಿಂದಾಲ್ ಕೈಗಾರಿಕೆ ಜಮೀನು ನೀಡಿರುವ ಸ್ಥಳೀಯರನ್ನು ಮೂರನೆಯ ದರ್ಜೆ ಪ್ರಜೆಗಳಂತೆ ನೋಡುತ್ತಿದ್ದಾರೆ. ಸ್ಥಳೀಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಈ ಕೈಗಾರಿಕೆಯ ವಿರುದ್ಧ ಸ್ಥಳಿಯರು ಹಲವಾರು ದೂರುಗಳನ್ನು ನೀಡಿದರೂ ಜಿಲ್ಲಾಡಳಿತ ಪರಿಗಣ ಸದೆ ಇರುವುದು ರ್ದುದೈವ. ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿರುವ ಈ ಕೈಗಾರಿಕೆಗೆ ಸರಕಾರ ಆ ಭಾಗದ ಬಡ ರೈತರ ಫಲವತ್ತಾದ ಭೂಮಿ ನೀಡ ಬಾರದು ಎಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ. ನಿನ್ನೆ ಸಂಪುಟ ಸಭೆಯಲ್ಲಿ ಭೂಮಿ ನೀಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಮರಳಿ ಪಡೆಯುವಂತೆಯೂ ಕರ್ನಾಟಕ ನವನಿರ್ಮಾಣ ಸೇನೆ ಸರಕಾರವನ್ನು ಒತ್ತಾಯಿಸುತ್ತದೆ.ಒಂದು ವೇಳೆ ಸರಕಾರ ಭೂಮಿ ಮರಳಿ ಪಡೆದಿದ್ದರೆ ಕರ್ನಾಟಕ ನವನಿರ್ಮಾಣ ಸೇನೆ ನ್ಯಾಯಾಂಗ ಹೋರಾಟ ಮಾಡಲು ಸಿದ್ದವಿದೆ ಎಂದು ಮನವಿ ಮೂಲಕ ಎಚ್ಚರಿಸುತ್ತಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ವಿ. ಮಠಪತಿ, ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ಸಂಘಟನಾ ಕಾರ್ಯದರ್ಶಿ ಚಂದ್ರು ಸನಗುಂದ, ಉತ್ತರ ವಲಯ ಅಧ್ಯಕ್ಷ ಈರಣ್ಣ ಪಾಟೀಲ, ಯುವ ಘಟಕ ಅಧ್ಯಕ್ಷ ಶ್ರೀಶೈಲ ಕನ್ನಡಗಿ, ಸೇಡಂ ತಾಲೂಕಾ ಅಧ್ಯಕ್ಷ ಭೀಮಾಶಂಕರ ಕೊರವಿ, ಧರ್ಮಾ ಶಹಾಪೂರಕರ, ಮಂಜು ಕಡಗಂಚಿ, ಜಯಾನಂದ ಬಿರಾದಾರ ಇದ್ದರು.