ಹೆಮನೂರ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ
ಹೆಮನೂರ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ
ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ಕಮಲಾಪೂರದ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ (ಹುಬ್ಬಳ್ಳಿ), ಶ್ರೀ ಹೇಮನೂರ ರವರ ಪರಿವಾರ ಹಾಗೂ ಅಭಿಮಾನಿಗಳ ಬಳಗ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ನರಸಿಂಗರಾವ ಹೆಮನೂರ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ ಸೇಡಂ, ಪೂಜ್ಯ ಅಜೇಂದ್ರ ಮಹಾಸ್ವಾಮಿಗಳು, ನಾಗಪ್ಪಯ್ಯ ಮಹಾಸ್ವಾಮಿ, ಪೂಜ್ಯ ಸುರೇಂದ್ರ ಮಹಾಸ್ವಾಮಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಲಕ್ಷ್ಮಣ ಕೌಂಟೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಹಿರಿಯ ಸಾಹಿತಿ ನರಸಿಂಗರಾವ ಹೆಮನೂರ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಮಾಜಕ್ಕೆ ಸಾಹಿತ್ಯದ ಕೊಡುಗೆ ಅಮೂಲ್ಯವಾಗಿದ್ದು, ನರಸಿಂಗರಾವ ಹೆಮನೂರ ಅವರ ಕೃತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಬಡಿಗೇರ, ದತ್ತಾತ್ರೇಯ ವಿಶ್ವಕರ್ಮ, ಹಿರಿಯ ಸಾಹಿತಿ ಭೀಮಣ್ಣ ಬೋನಾಳ, ಬಿ.ಎಚ್. ನಿರಗುಡಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು, ಅಭಿಮಾನಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.
