ಭೀಮಾ ಕೋರೆಗಾಂವ ವಿಜಯೋತ್ಸವ ಸಮಾನತೆ–ಸ್ವಾಭಿಮಾನದ ಸಂಕೇತ : ಡಾ. ಅಶೋಕ್ ದೊಡ್ಡಮನಿ

ಭೀಮಾ ಕೋರೆಗಾಂವ ವಿಜಯೋತ್ಸವ ಸಮಾನತೆ–ಸ್ವಾಭಿಮಾನದ ಸಂಕೇತ : ಡಾ. ಅಶೋಕ್ ದೊಡ್ಡಮನಿ

ಭೀಮಾ ಕೋರೆಗಾಂವ ವಿಜಯೋತ್ಸವ ಸಮಾನತೆ–ಸ್ವಾಭಿಮಾನದ ಸಂಕೇತ : ಡಾ. ಅಶೋಕ್ ದೊಡ್ಡಮನಿ

ಯಡ್ರಾಮಿ: ಭೀಮಾ ಕೋರೆಗಾಂವ ವಿಜಯೋತ್ಸವವು ಕೇವಲ ಐತಿಹಾಸಿಕ ಘಟನೆ ಮಾತ್ರವಲ್ಲ, ದಲಿತ ಸಮುದಾಯದ ಸಮಾನತೆ ಹಾಗೂ ಸ್ವಾಭಿಮಾನ ಹೋರಾಟದ ಶಾಶ್ವತ ಸಂಕೇತವಾಗಿದೆ ಎಂದು ಡಾ. ಅಶೋಕ್ ದೊಡ್ಡಮನಿ ಹೇಳಿದರು.

ತಾಲೂಕಿನ ಇಜೇರಿಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಭೀಮಾ ಕೋರೆಗಾಂವ ಯುದ್ಧದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತವಿದ್ದು, 2ನೇ ಬಾಜೀರಾಯ ಪೇಶ್ವೆಯ ಕಾಲದಲ್ಲಿ ಮಹಾರ ಸಮುದಾಯದ ಮೇಲೆ ತೀವ್ರ ಸಾಮಾಜಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ತಿಳಿಸಿದರು. ಇಂತಹ ದಮನಕಾರಿ ವ್ಯವಸ್ಥೆಯ ವಿರುದ್ಧ ಮಹಾರ ಸೈನಿಕರು ಹೋರಾಡಿ ಜಯ ಸಾಧಿಸಿದ್ದು, ಈ ಯುದ್ಧವು ಶೋಷಿತ ಸಮುದಾಯದ ಆತ್ಮಗೌರವದ ಪ್ರತೀಕವಾಗಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮಿಜ್ ಲಖನಾಪುರ, ಅಲ್ಲಾಪಟೇಲ್, ಈರಣ್ಣ ತಳವಾರ, ನಂದಕುಮಾರ್ ಪಿಡಿಒ, ಕಾಲಿದಮಿಯಾ, ದೇವು ಪೂಜಾರಿ, ಕಳ್ಳಪ್ಪ ಬೋವಿ, ಸೋಮನಾಳ ಸದಸ್ಯ, ಮಹಿಬೂಬ ಸೌದಗರ, ಸೈದಪ್ಪ ಶ್ರುತಿ, ಸೈದಪ್ಪ ಹೊಸಮನಿ, ನಿಂಗಣ್ಣ ಗುಲ್ಯಾಳ್, ಅಮೀನಪ್ಪ ಕಟ್ಟಿಮನಿ, ಸೈದಪ್ಪ ಮೂಡಬೂಳ, ಡಿಎಸ್ ಪ್ರಕಾಶ, ಸದಾಶಿವ ಹಳ್ಳಿಗಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ ಜಟ್ಟೆಪ್ಪ ಪೂಜಾರಿ ಕಲ್ಯಾಣ ಕಹಳೆ