ಹೈ ಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿ ಸಿಬ್ಬಂದಿ ಗಳಿಂದ ಅಧ್ಯಕ್ಷರಾದ ಡಾ ಶಶೀಲ್ ಜೀ ನಮೋಶಿಯವರಿಗೆ ಸನ್ಮಾನ
ಹೈ ಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿ ಸಿಬ್ಬಂದಿ ಗಳಿಂದ ಅಧ್ಯಕ್ಷರಾದ ಡಾ ಶಶೀಲ್ ಜೀ ನಮೋಶಿಯವರಿಗೆ ಸನ್ಮಾನ
ಕಲಬುರ್ಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಯವರ ಶೈಕ್ಷಣಿಕ ಹಾಗೂ ಸಾಮಾಜಿಕ ಸಾಧನೆಯನ್ನು ಗುರುತಿಸಿ ಕಲಬುರ್ಗಿಯ ಪ್ರತಿಷ್ಠಿತ ಶರಣಬಸವೇಶ್ವರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು.
ಇಂದು ಸಂಸ್ಥೆಯ ಮುಖ್ಯ ಕಚೇರಿಯ ಸಿಬ್ಬಂದಿ ಡಾ ಶಶೀಲ್ ಜಿ ನಮೋಶಿಯವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಆಡಳಿತ ಮಂಡಳಿಯ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಡಾ ಕಿರಣ್ ದೇಶಮುಖ್, ಆಡಳಿತಾಧಿಕಾರಿ ಗಳಾದ ಡಾ ಸಿ ಸಿ ಪಾಟೀಲ, ವಿಶೇಷಾಧಿಕಾರಿಗಳಾದ ಡಾ ಪರಮೇಶ ಬಿರಾದಾರ, ಸಂಸ್ಥೆಯ ಲೆಕ್ಕಾಧಿಕಾರಿ ಅಮರೇಶ ನಿಗ್ಗುಡಗಿ ಹಾಗೂ ಇತರರಿದ್ದರು
