ಸಾರ್ವಜನಿಕ ಹಿತರಕ್ಷಣಾ ಸಂಘದ ದಶಮಾನೋತ್ಸವಕ್ಕೆ ಪೂರ್ವಭಾವಿ ಸಭೆ
ಸಾರ್ವಜನಿಕ ಹಿತರಕ್ಷಣಾ ಸಂಘದ ದಶಮಾನೋತ್ಸವಕ್ಕೆ ಪೂರ್ವಭಾವಿ ಸಭೆ
ಕಲಬುರಗಿ : ಕಳೆದ ಹತ್ತು ವರ್ಷಗಳಿಂದ ಜನರಿಗೆ ಸಿಗಬೇಕಾದ ಸೌಲಭ್ಯಗಳು, ಸಂವಿಧಾನಿಕ ಅಡಿಯಲ್ಲಿ ದೊರಕಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಾ ಬರುತ್ತಿರುವ ಸಾರ್ವಜನಿಕ ಹಿತರಕ್ಷಣಾ ಸಂಘದ ದಶಮಾನೋತ್ಸವ ಪ್ರಯುಕ್ತ “ಸಮಾಜ ಮತ್ತು ಸಾಮಾಜಿಕ ಜವಾಬ್ದಾರಿ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೇಶದ ಮಾಜಿ ಯೋಧ ಕ್ಯಾಪ್ಟನ್ ಕಾಶಿನಾಥ ಅಣದೂರೆ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು, ಜನರಲ್ಲಿ ಜಾಗೃತಿ ಮೂಡಿಸುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೆಲ ಹಳ್ಳಿಗಳಿಗೆ ಇನ್ನೂ ಮೂಲಭೂತ ಸೌಕರ್ಯಗಳು ದೊರೆಯದಿರುವುದು ವಿಪರ್ಯಾಸವೆಂದು ಅವರು ಹೇಳಿದರು.
ಸಂಘದ ದಶಮಾನೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ದಿನಾಂಕ 28-12-2025 ರಂದು ಸಂಜೆ 4 ಗಂಟೆಗೆ ನಗರದ ನ್ಯಾಯಾಲಯದ ಮುಖ್ಯರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಸಾಹಿತಿ ಹಾಗೂ ಚಿಂತಕರಾದ ಪ್ರೊ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರು "ಸಮಾಜ ಮತ್ತು ಸಾಮಾಜಿಕ ಜವಾಬ್ದಾರಿ" ಕುರಿತು ಉಪನ್ಯಾಸ ನೀಡಲಿದ್ದಾರೆ. ಎಂದು ಸಂಘದ ಅಧ್ಯಕ್ಷ ಪ್ರತಾಪ್ ಸಿಂಗ್ ತಿವಾರಿ, ನ್ಯಾಯವಾದಿ ವಿನೋದ್ ಕುಮಾರ್ ಜನೇವರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಚಂದ್ರಶೇಖರ ಕಕ್ಕೇರಿ,ವಿ ಆರ್ ಮಠಪತಿ, ಮೇಘರಾಜ ಕುಲಕರ್ಣಿ,ವೀರಣ್ಣ ಶಿವಪೂರ, ಶಿವಶಂಕರ ಗುರುಗುಂಟಿ ಇದ್ದರು
