ಅಧ್ಯಾತ್ಮದಲ್ಲಿ ಜೀವನ ದರ್ಶನ ಕೊಟ್ಟ ಪ್ರವಚನ ವಿದ್ವಾಂಸ ಬನ್ನಂಜೆ : ಕುಲಪತಿ ಡಾ ಪ್ರಲ್ಹಾದ ಜೋಶಿ
ಬನ್ನಂಜೆ 90ರ ವಿಶ್ವ ನಮನ ಸಂಪನ್ನ
ಅಧ್ಯಾತ್ಮದಲ್ಲಿ ಜೀವನ ದರ್ಶನ ಕೊಟ್ಟ ಪ್ರವಚನ ವಿದ್ವಾಂಸ ಬನ್ನಂಜೆ : ಕುಲಪತಿ ಡಾ ಪ್ರಲ್ಹಾದ ಜೋಶಿ
ಕಲಬುರಗಿ : ಬನ್ನಂಜೆ ಗೋವಿಂದಾಚಾರ್ಯರು ಅಧ್ಯಾತ್ಮದ ಮೂಲಕ ಸಮಾಜಕ್ಕೆ ಜೀವನ ಪಠ್ಯವನ್ನು ಕೊಟ್ಟ ಮೇರು ವಿದ್ವಾಂಸ ಎಂದು ಅಸ್ಸಾಂನ ಕುಮಾರ ಭಾಸ್ಕರ ವರ್ಮ ಮತ್ತು ಪುರಾತನಾಧ್ಯಯನ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಲ್ಹಾದ ಜೋಶಿ ಹೇಳಿದರು.
ಕಲಬುರಗಿಯ ಶ್ರೀ ಹನುಮಾನ್ ಸೇವಾ ಸಂಘ ಟ್ರಸ್ಟ್ ಮತ್ತು ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಕಲಬುರಗಿಯ ಸಂಗಮೇಶ್ವರ ಸಭಾಂಗಣದಲ್ಲಿ ನಡೆದ 90ರ ವಿಶ್ವ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಪನಿಷತ್ತು, ಪುರಾಣ ಮಹಾಕಾವ್ಯಗಳ ಸತ್ಯವನ್ನು ಸರಳವಾಗಿ ತನ್ಮಯತೆಯಿಂದ ಸಂಶೋಧನಾ ಪ್ರವೃತ್ತಿಯ ಮೂಲಕ ಜನಮಾನಸಕ್ಕೆ ಬಿಚ್ಚಿಕೊಟ್ಟ ಬನ್ನಂಜೆಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ನವೀನ ಮಾರ್ಗ ನಿರ್ಮಾತೃ ಬನ್ನಂಜೆ
ಬನ್ನಂಜೆ ಗೋವಿಂದಾಚಾರ್ಯರು ಸಮಕಾಲೀನತೆಗೆ ಭಕ್ತಿ ಯೋಗವನ್ನು ಅನ್ಯಾನ್ಯ ಮತ್ತು ಅನ್ಯೋನ್ಯ ಸಂಬಂಧಗಳನ್ನು ತೋರಿಸುವ ಹಾಗೂ ಬದುಕು ಎತ್ತರಿಸುವ ನವೀನ ಮಾರ್ಗ ಸೃಷ್ಟಿಸಿದವರು ಎಂದು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲೇಶ್ವರಂ ಹೇಳಿದರು.
ಬನ್ನಂಜೆಯವರ ಚಿಂತನೆಗಳನ್ನು
ತಲಸ್ಪರ್ಶಿ ಜ್ಞಾನವನ್ನು ನಾಡಿನುದ್ದಗಲಕ್ಕೂ ಪಸರಿಸಲು ಉಡುಪಿಯಿಂದ ಪ್ರಾರಂಭಗೊಂಡ ಬನ್ನಂಜೆ 90ರ ವಿಶ್ವ ನಮನ ಕಾರ್ಯಕ್ರಮ ಅನೇಕ ಕಡೆಗಳಲ್ಲಿ ಆಯೋಜಿಸಲಾಗಿದ್ದು ಈಗಾಗಲೇ ಉಡುಪಿಯಿಂದ ಪ್ರಾರಂಭಗೊಂಡು ಮಣಿಪಾಲ, ಕುಕ್ಕೆ ಸುಬ್ರಹ್ಮಣ್ಯ ಪುತ್ತೂರು,ಹೃಷಿಕೇಶ, ರಾಯಚೂರು ಮುಂತಾದೆಡೆಗಳಲ್ಲಿ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ಮೈಸೂರು ಹುಬ್ಬಳ್ಳಿ ಧಾರವಾಡ ಹಾಗೂ ಅಮೆರಿಕಾದಲ್ಲಿ ನಡೆಸಿ ಆಗಸ್ಟ್ ನಲ್ಲಿ ಸಮಾರೋಪಗೊಳಿಸಲಾಗುವುದು. ಭಾರತದ ಸನಾತನ ಸಂಸ್ಕೃತಿಯ ಸ್ಮರಣೆಯೊಂದಿಗೆ ಸಮಕಾಲೀನತೆಗೆ ಪ್ರವಚನದ ಮೂಲಕ ಬದುಕಿನ ದಾರಿ ಸ್ಪಷ್ಟಪಡಿಸಿದ ಭಾರತೀಯ ಪೂರ್ವ ಸೂತ್ರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಠಲ ಕುಲಕರ್ಣಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಡಾ ವೀಣಾ ಬನ್ನಂಜೆ,ಕಾರ್ಯಾಧ್ಯಕ್ಷರಾದ ಶ್ರೀಕಾಂತ ರಾವ್ ಎಸ್ ಕುಲಕರ್ಣಿ, ವಾದಿರಾಜ ವ್ಯಾಸಮುದ್ರ, ಹನುಮೇಶ ಆರ್ ದೇಸಾಯಿ ಬಾಬುರಾವ್ ಯಡ್ರಾಮಿ, ಸದಸ್ಯರಾದ ರಾಘವೇಂದ್ರ ಆರ್ ಜೋಶಿ ಪ್ರಸನ್ನ ಕಾನಿಹಾಳ, ಸತೀಶ್ ಜಾಗೀರದಾರ, ಪುರಂದರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿ, ಶಾರದಾ ಸಂಗೀತ ವಿದ್ಯಾಲಯದ ಡಾ. ಸುನಂದಾ ಸಾಲವಾಡಗಿ ಮತ್ತು ಸಂಗಡಿಗರು ಬನ್ನಂಜೆ ಹಾಡುಗಬ್ಬ ಪ್ರಸ್ತುತಪಡಿಸಿದರು.
ನಂತರ ವಿವಿಧ ವಿಷಯಗಳ ಕುರಿತಾಗಿ ಡಾ. ಸದಾನಂದ ಪೆರ್ಲ, ರೋಹಿತ್ ಚಕ್ರತೀರ್ಥ, ಸಿ.ಜಿ ವಿಜಯಸಿಂಹಾಚಾರ್, ಡಾ. ರಮೇಶ ವಾಸುದೇವ ರಾವ್ ಡಾ. ಶೈಲಜಾ ಕೊಪ್ಪರ್, ಡಾ. ವಾಸುದೇವ ಅಗ್ನಿಹೋತ್ರಿ ವಿದ್ವಾಂಸರು ಉಪನ್ಯಾಸಗಳನ್ನು ನೀಡಿದರು. ಶ್ರೀಮತಿ ಸಂಧ್ಯಾ ಪಿ.ಭಟ್ ನೇತೃತ್ವದಲ್ಲಿ ನಾಟ್ಯಂಜಲಿ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಶ್ರೀ ಸುಚೇಂದ್ರ ಪ್ರಸಾದ್ ನಿರ್ದೇಶನ ಮತ್ತು ಅಭಿನಯದಲ್ಲಿ ಡಾ. ವೀಣಾ ಬನ್ನಂಜೆ ಅವರ ವಚನ ಮಾಡಿದ ಪಿತಾಮಹ ನಾಟಕ ಪ್ರದರ್ಶನಗೊಂಡಿತು. ಶ್ರೀಮತಿ ಜಾನಕಿ ದೇಶಪಾಂಡೆ ಶ್ರೀಮತಿ ಜ್ಯೋತ್ಸ್ನಾ ಹೇರೂರ, ವ್ಯಾಸರಾಜ ಸಂತೆಕೆಲ್ಲೂರ ಡಾ. ವಿಷ್ಣುಗುಂಡಗುರ್ತಿ ನಿರೂಪಣೆ ಮಾಡಿದರು
