21 ರಂದು ಕೀಲು,ಎಲಬು, ಮೂಳೆ ಉಚಿತ ತಪಾಸಣಾ ಶಿಬಿರ.

21 ರಂದು ಕೀಲು,ಎಲಬು, ಮೂಳೆ ಉಚಿತ ತಪಾಸಣಾ ಶಿಬಿರ.

21 ರಂದು ಕೀಲು,ಎಲಬು, ಮೂಳೆ ಉಚಿತ ತಪಾಸಣಾ ಶಿಬಿರ.

ಶಹಾಪುರ : ಇದೇ ತಿಂಗಳು ಅಕ್ಟೋಬರ್ 21ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ,ನುರಿತ ವೈದ್ಯರಿಂದ ಎಲುಬು,ಕೀಲು,ಮೂಳೆಗಳ ಉಚಿತ ( ಬೋನ್,ಮಿನರಲ್,ಡೆನ್ಸಿಟಿ ) ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೊರೊನಾ ರೆಮಿಡೀಸ್ ಕಂಪನಿಯ ಪ್ರತಿನಿಧಿ ವೀರಭದ್ರಯ್ಯ ಹಯ್ಯಾಳ ಪ್ರಕಟಣೆಗೆ ತಿಳಿಸಿದ್ದಾರೆ.

ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಎಸ್,ಬ್ಯಾಂಕ್ ಕೆಳಗಡೆ ಶ್ರೀ ಸಾಯಿ ಆಸ್ಪತ್ರೆಯ ಸಹಯೋಗದೊಂದಿಗೆ, ಡಾ: ಶರಣಗೌಡ ಹೊಂಗಲ್ ಅವರ ನೇತೃತ್ವದಲ್ಲಿ ಈ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ, ಆದ್ದರಿಂದ ಶಹಪುರ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಬಡ ರೋಗಿಗಳು ಎಲುಬು,ಕೀಲು ಮತ್ತು ಮೂಳೆಗಳ ತೊಂದರೆಯಿಂದ ಬಳಲುತ್ತಿದ್ದರೆ,ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಮೊಣಕಾಲು ನೋವು,ಬೆನ್ನು ನೋವು,ಸಮಸ್ಯೆಗಳು ಈ ಮೊದಲು 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಂಡು ಬರುತ್ತಿದ್ದವು, ಆದರೆ ಈಗ 30 - 40 ವಯಸ್ಸಿನವರೆಗೂ ಸಾಮಾನ್ಯವಾಗಿದೆ.ಇದಕ್ಕೆ ನಮ್ಮ ಬದಲಾದ ಆಹಾರ ಕ್ರಮ ದೈಹಿಕ ಚಟುವಟಿಕೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.ಆದರೆ ಈ ಶಿಬಿರದಲ್ಲಿ 40 ವಯಸ್ಸು ಮೇಲ್ಪಟ್ಟ ರೋಗಿಗಳಿಗೆ ಮೂತ್ರ ಉಚಿತ ತಪಾಸಣಾ ಮಾಡಲಾಗುವುದು,ಹೆಚ್ಚಿನ ಮಾಹಿತಿಗಾಗಿ 9945835410, 7420010096,6364300186.ನಂಬರಿಗೆ ಸಂಪರ್ಕಿಸಬಹುದು,